ಮಂಗಳೂರು: ‘ಹಿಂದೂ, ಮುಸ್ಲಿಂ, ಕೈಸ್ತ ಧರ್ಮದವರೆಲ್ಲರೂ ಮಾತಾನಾಡುವ ಕೊಂಕಣಿ ಮಹಾನ್ ಭಾಷೆ. ಯಾವುದೇ ಭಾಷೆ ಉಳಿಯಬೇಕಾದರೆ ಅದು ಬಂಧಮುಕ್ತವಾಗಿರಬೇಕು. ಕಾಲಕಾಲಕ್ಕೆ ಬದಲಾವಣೆಗಳನ್ನುಅಳವಡಿಸಿಕೊಂಡು ಮುಂದೆ ಹೋಗಬೇಕು. ಬೇರೆ ಭಾಷೆಗಳ ಶಬ್ದಗಳನ್ನು ಬಳಸಿ, ನಮ್ಮ ಭಾಷೆಯನ್ನು ಶುದ್ಧವಾಗಿ ಮಾತಾನಾಡಲು ಪ್ರಯತ್ನಿಸಿದರೆ, ಭಾಷೆಯ ಬೆಳವಣಿಗೆಯಾಗುತ್ತದೆ’ ಎಂದು ಪಾಂಬೂರಿನ ‘ಪರಿಚಯ’ ಸಂಸ್ಥೆ ಕಾರ್ಯದರ್ಶಿ ಪ್ರಕಾಶ್ ನೊರೊನ್ಹ ಅಭಿಪ್ರಾಯಪಟ್ಟರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇಲ್ಲಿ ಶನಿವಾರ ಏರ್ಪಡಿಸಿದ್ದ ‘ಕಾವ್ಯಾಂ ವ್ಹಾಳೊ- 14’ ಕೊಂಕಣಿ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

'ಕೊಂಕಣಿ ಭಾಷೆ ವಿಸ್ತಾರವಾಗಿ ಖಾರ್ವಿ, ಸಿದ್ದಿ, ಕುಡುಬಿ, ಕಥೋಲಿಕ್ ಹೀಗೆ ವಿವಿಧ ಸಮುದಾಯಗಳಲ್ಲಿ ಕೊಂಕಣಿ ಹರಡಿಕೊಂಡಿದೆ. ಎಲ್ಲ ಸಮುದಾಯಗಳು ಕೊಂಕಣಿ ಭಾಷೆಯ ಐಕ್ಯತೆಯನ್ನು ಗೌರವಿಸುತ್ತಿವೆ’ ಎಂದರು.

ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಡುಬಿ ಸಮುದಾಯದ ಕಲಾವಿದ ಕೆ. ಸುಂದರ ಗೌಡ ಅವರನ್ನು ಸನ್ಮಾನಿಲಾಯಿತು. ಕವಿ ವೆಂಕಟೇಶ್ ನಾಯಕ್ ಕವಿಗೋಷ್ಠಿಯನ್ನು ನಡೆಸಿಕೊಟ್ಟರು. ಅವಿಲ್ ರಸ್ಕಿನ್ಹಾ, ಕುಸುಮ ಕಾಮತ್, ಸಂಜನಾ ಮಥಾಯಸ್, ಜೆರಿ ಬೊಂದೆಲ್, ಸುಮಾ ವಸಂತ್, ಪ್ರವೀಣ್ ತಾವ್ರೊ, ವಿಸ್ಮಯಾ ಲೋಬೊ, ಸುಮತಿ ಕಾರ್ಕಳ ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ನವೀನ್ ಲೋಬೊ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.