ಬೆಂಗಳೂರು: ಮಂಗಳೂರಿನ ಕುಡುಪು ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ‘ಪಾಕಿಸ್ತಾನ್’ ಎಂದು ಕೂಗುತ್ತಾ ಆಟದ ಮೈದಾನದೊಳಗೆ ನುಗ್ಗಿದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದಾಗಿ ಅವರು ಮೃತಪಟ್ಟಿದ್ದರು. ಈ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಪ್ರಕರಣದ ಮೂರನೇ ಆರೋಪಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು-ತಿರುವೈಲ್ನ ಮಂಜ ಅಲಿಯಾಸ್ ಮಂಜುನಾಥ್ (32) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ಪುರಸ್ಕರಿಸಿದೆ.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿದರು. ಅದನ್ನು ಆಲಿಸಿದ ನ್ಯಾಯಪೀಠ, ‘ಸಾವನ್ನಪ್ಪಿದ ಅಶ್ರಫ್ ಮತ್ತು ಆರೋಪಿಗಳ ನಡುವೆ ಯಾವುದೇ ಶತ್ರುತ್ವ ಇರಲಿಲ್ಲ. ಮೈದಾನದ ಬಳಿಗೆ ಬಂದು ಘೋಷಣೆ ಹಾಕಿ, ಶಾಂತವಾಗಿ ನಡೆಯುತ್ತಿದ್ದ ಕ್ರಿಕೆಟ್ ಆಟಕ್ಕೆ ಆತ ಅಡ್ಡಿಪಡಿಸಿದ್ದ ಎಂಬುದು ದಾಖಲೆಗಳಿಂದ ವಿದಿತವಾಗುತ್ತದೆ. ಅಂದು ಆತ ಮೈದಾನದ ಬಳಿಗೆ ಬರದೇ ಮನೆಯಲ್ಲಿದ್ದಿದ್ದರೆ ಬದುಕುಳಿಯುತ್ತಿದ್ದ. ಆತನನ್ನು ದ್ವೇಷದಿಂದ ಕೊಲೆ ಮಾಡ ಲಾಗಿಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

‘ಕೃತ್ಯದಲ್ಲಿ ಮಾರಕಾಸ್ತ್ರ ಬಳಕೆ ಯಾಗಿಲ್ಲ. ಪೂರ್ವನಿಯೋಜಿತ ಕೃತ್ಯವೂ ಅಲ್ಲ. ಆ ಕ್ಷಣಕ್ಕೆ ಸಂಭವಿಸಿದ ಘಟನೆ ಯಾಗಿದೆ. ಅಶ್ರಫ್ ಅವರ ಮರ್ಮಾಂಗ ಮತ್ತು ಗುದದ್ವಾರಕ್ಕೆ ಖಾರದ ಪುಡಿ ಹಾಕಲಾಗಿದೆ ಎಂಬುದಕ್ಕೆ ಮರಣೋತ್ತರ ಪರೀಕ್ಷಾ ವರದಿ ಅಥವಾ ತನಿಖೆಯ ಮಹಜರು ವೇಳೆ ಸ್ಥಳದಲ್ಲಿ ಸಾಕ್ಷ್ಯ ಪತ್ತೆಯಾಗಿಲ್ಲ’ ಎಂದು ಆದೇಶ ದಲ್ಲಿ ಉಲ್ಲೇಖಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಷರತ್ತು: ‘ಅರ್ಜಿದಾರರು ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣೆಯ ಎಲ್ಲಾ ದಿನಗಳಲ್ಲೂ ಸಕ್ಷಮ ನ್ಯಾಯಾಲಯಕ್ಕೆ ಹಾಜರಾಗಬೇಕು. ಸಾಕ್ಷ್ಯ ತಿರುಚುವಂತಿಲ್ಲ. ಅನುಮತಿಯಲ್ಲದೇ ದಕ್ಷಿಣ ಕನ್ನಡ ತೊರೆಯುವಂತಿಲ್ಲ’ ಎಂಬ ಷರತ್ತುಗಳನ್ನು ವಿಧಿಸಿದೆ. ಆರೋಪಿ 2025ರ ಏಪ್ರಿಲ್ 29ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಂಜುನಾಥ್ ಪರ ಹೈಕೋರ್ಟ್ ವಕೀಲ ಸುಯೋಗ ಹೇರಳೆ ವಕಾಲತ್ತು ವಹಿಸಿದ್ದರು. ದೂರುದಾರರ ಪರ ಹೈಕೋರ್ಟ್ ವಕೀಲೆ ಮೃದುಲಾ ವಾದ ಮಂಡಿಸಿದರು.

ಪ್ರಕರಣ: ‘ಮಂಗಳೂರಿನ ಹೊರ ಹೊಲಯದ ಕುಡುಪು ಕ್ರಿಕೆಟ್ ಮೈದಾನದಲ್ಲಿ 2025ರ ಏಪ್ರಿಲ್ 27ರಂದು ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಕೇರಳದ ವಯನಾಡ್ ನಿವಾಸಿ ಯಾದ 35 ವರ್ಷದ ಮೊಹಮ್ಮದ್ ಅಶ್ರಫ್ ರೈಲು ಹಳಿಗಳ ಕಡೆಯಿಂದ ಪಾಕಿಸ್ತಾನ್ ಎಂದು ಘೋಷಣೆ ಹಾಕುತ್ತಾ ನುಗ್ಗಿದ್ದರು. ಇದರಿಂದ ಪ್ರಚೋದನೆಗೆ ಒಳಗಾದ ಆಟಗಾರರು ಮತ್ತು ಪಂದ್ಯ ನೋಡುತ್ತಿದ್ದವರು ಆತನ ಮೇಲೆ ಗುಂಪು ಹಲ್ಲೆ ನಡೆಸಿದ್ದರು. ಈ ಹಲ್ಲೆಯಿಂದ ಅಶ್ರಫ್ ಸಾವನ್ನಪ್ಪಿದ್ದಾರೆ’ ಎಂಬ ಆರೋಪದಡಿ ಮಂಗಳೂರು ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಒಟ್ಟು 21 ಆರೋಪಿಗಳ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1656810684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.