ಮಂಗಳೂರು: ಕುಳಾಯಿ ಹೊಸಬೆಟ್ಟು ವಿನ ಕೋರ್ದಬ್ಬು ‘ಕಲ’ದ ಬಳಿ ಮಹಿಳೆಯ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಪ್ರಕರಣದ ಆರೋಪಿಯೊಬ್ಬ ನ್ಯಾಯಾಲಯದ ವಿಚಾರಣೆಗೆ ಹಾಜರಾ ಗದೇ 6 ವರ್ಷಗಳಿಂದ ತಲೆ ಮರೆಸಿ ಕೊಂಡಿದ್ದು, ಆತನನ್ನು ಸುರತ್ಕಲ್ ಠಾಣೆ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ರಾಜಸ್ಥಾನದ ಭರತ್ ಪುರ ಜಿಲ್ಲೆಯ ಭಯಾನ ತಾಲ್ಲೂಕಿನ ದತ್ತಕ ಬೇಡದ ಬಹದ್ದೂರ್ ಸಿಂಗ್ ಅಲಿಯಾಸ್ ಬಹದ್ದೂರ್ ಅಲಿಯಾಸ್ ಬುಯ್ಯ ಬಂಧಿತ ಆರೋಪಿ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

‘ಕುಳಾಯಿ ಹೊಸಬೆಟ್ಟು ಕೋರ್ದಬ್ಬು ‘ಕಲ’ದ ಸುಮತಿ ಪ್ರಭು ಎಂಬವರನ್ನು ದುಷ್ಕರ್ಮಿಗಳು 2014ರ ಫೆ 8ರಂದು ಕತ್ತು ಕೊಯ್ದು ಕೊಲೆ ಮಾಡಿದ್ದರು. ಆಕೆಯ ಮೈಮೇಲಿದ್ದ ಸುಮಾರು 192 ಗ್ರಾಂ ತೂಕದ ( ಆಗಿನ ಅಂದಾಜು ಮೌಲ್ಯ₹3.80 ಲಕ್ಷ ) ಬಂಗಾರದ ಒಡವೆಗಳನ್ನು ದೋಚಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ರಾಜಸ್ಥಾನದ ಭರತ್ ಪುರ ಜಿಲ್ಲೆಯ ಶಿವರಾಮ್, ಬಹದ್ದೂರ್ ಸಿಂಗ್ ಹಾಗೂ ಉತ್ತರ ಪ್ರದೇಶದ ಅಮರ್ಥ್ ಜಿಲ್ಲೆಯ ಮಂದಿನಪುರದ ಶಹ ನ್ವಾಜ್ ಅಲಿ ಯಾಸ್ ಶಾನು ಎಂಬವರನ್ನು ಬಂಧಿಸಿದ್ದರು. 6 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಬಹದ್ದೂರ್ ಸಿಂಗ್ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿಮಾಡಿತ್ತು.’

‘ಆರೋಪಿಯ ಪತ್ತೆಗೆ ಠಾಣೆಯ ಹೆಡ್ ಕಾನ್ಸ್ಟೆಬಲ್ ಅಜಿತ್ ಮ್ಯಾಥ್ಯು, ಕಾನ್ಸ್ಟೆಬಲ್ಗಳಾದ ಸುನೀಲ್ ಕುಸನಾಳ ಹಾಗೂ ಮೋಹನ್ ಎಂಬವರನ್ನು ನಿಯೋಜಿಸಲಾಗಿತ್ತು. ಪೊಲೀಸರ ತಂಡವು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗುರುಮಾರನಹಳ್ಳಿಯಲ್ಲಿ ಆತನನ್ನು ಭಾನುವಾರ ಬಂಧಿಸಿದೆ. ಠಾಣೆಯ ಹೆಡ್ ಕಾನ್ಸ್ಟೆಬಲ್ ರಾಜೇಂದ್ರ ಪ್ರಸಾದ್ ಹಾಗೂ ಕಾನ್ಸ್ಟೆಬಲ್ ಸತೀಶ್ ಆರೋಪಿಯ ಬಂಧನಕ್ಕೆ ಸಹಕರಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-29-931722554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.