ಮಂಗಳೂರು: ಜಜೀರಾ ಏರ್ ವೇಸ್ ಸಂಸ್ಥೆಯು ದಮಾಮ್ ಮಾರ್ಗವಾಗಿ ಕುವೈತ್ – ಮಂಗಳೂರು ನಡುವೆ ವಿಶೇಷ ವಿಮಾನ ಗುರುವಾರ ಹಾರಾಟ ನಡೆಸಿದೆ. ದಮಾಮ್ನಿಂದ ಹೊರಟು ಬಜಪೆಯ ಮಂಗಳೂರು ಅಂತರ ರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಜಜೀರಾ ಏರ್ ವೇಸ್ನ ವಿಶೇಷ ವಿಮಾನದಲ್ಲಿ ಕುವೈತ್ನ 11 ಚಿಣ್ಣರು ಸೇರಿ 181 ಮಂದಿ ಪ್ರಯಾಣಿಸಿದರು. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಆರಂಭವಾದ ಬಳಿಕ ಕುವೈತ್ ಪ್ರಯಾಣಿಕರನ್ನು ಕರೆತಂದ ಮೊದಲ ವಿಮಾನ ಇದಾಗಿದೆ.

ಕುವೈತ್ ಪ್ರಯಾಣಿಕರು ದಮಾಮ್ ವಿಮಾನ ನಿಲ್ದಾಣದವರೆಗೆ ಬಸ್ನಲ್ಲಿ ಪ್ರಯಾಣಿಸಿ, ಅಲ್ಲಿಂದ ವಿಮಾನದಲ್ಲಿ ಪ್ರಯಾಣ ಮುಂದುವರಿಸಿದ್ದರು. ಬಜಪೆ ವಿಮಾನ ನಿಲ್ದಾಣದಲ್ಲಿ ಸಂಜೆ 4.25ಕ್ಕೆ ಇಳಿದ ವಿಶೇಷ ವಿಮಾನದಲ್ಲಿ ಪೈಲಟ್ ಜಿಮ್ಮಿ ಮೌಸ್ಸಾ ಸಹಿತ ನಾಲ್ವರು ಸಿಬ್ಬಂದಿ ಇದ್ದರು. ಬಜಪೆಯಿಂದ ದಮಾಮ್ಗೆ ಸಂಜೆ 6.10ಕ್ಕೆ ಮರಳಿದ ಈ ವಿಮಾನದಲ್ಲಿ ಒಂದು ಶಿಶು ಸೇರಿ 151 ಪ್ರಯಾಣಿಸಿದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೀ ಜಜೀರಾ ಏರ್ವೇಸ್ ಕುವೈತ್–ಮಂಗಳೂರು ನಡುವೆ ವಿಶೇಷ ವಿಮಾನ ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಿತ್ತು.

ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು ದುಬೈ ಮತ್ತು ಅಬುಧಾಬಿಗೆ ಮಂಗಳೂರಿನಿಂದ ವಿಮಾನ ಹಾರಾಟ ನಡೆಸುತ್ತಿದೆ. ಶುಕ್ರವಾರವೂ ಈ ನಗ ರಗಳಿಗೆ ವಿಮಾನ ತೆರಳಲಿದೆ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-29-577443058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.