ಮಂಗಳೂರು: ಎಂಟು ಗಂಟೆ ದುಡಿಮೆ, ಎಂಟು ಗಂಟೆ ನಿದ್ರೆ, ಎಂಟು ಗಂಟೆ ವಿಶ್ರಾಂತಿ ಎಂಬ ತತ್ವದಲ್ಲಿ ಉದಯವಾಗಿರುವ ಮೇ ದಿನಾಚರಣೆಗೆ ನೂರಾರು ವರ್ಷಗಳ ಇತಿಹಾಸ ಇದೆ. ಇಂತಹ ಮೇ ದಿನದ ಆಶಯವನ್ನು ಬುಡಮೇಲುಗೊಳಿಸಿ ದುಡಿಮೆ ಅವಧಿಯನ್ನು 12 ತಾಸಿಗೆ ಏರಿಸುವ ಮೂಲಕ ಕಾರ್ಮಿಕ ವಿರೋಧಿ ಸಂಹಿತೆ ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾರ್ಮಿಕ ವರ್ಗ ಸಜ್ಜಾಗಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಮೇ ದಿನಾಚರಣೆ ಅಂಗವಾಗಿ ಜನಪರ ಸಂಘಟನೆಗಳು, ವಿವಿಧ ವಿಭಾಗಗಳ ಕಾರ್ಮಿಕರು ಸೇರಿ ರಚಿಸಿರುವ ಮೇ ದಿನ ಆಚರಣೆ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇ ದಿನ ಆಚರಣಾ ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ‘ಕಾರ್ಮಿಕ ವರ್ಗದವರ ಬದುಕನ್ನು ಹಸನು ಗೊಳಿಸಿದಾಗ ಮಾತ್ರ ಸಮಾಜ ಉದ್ಧಾರವಾಗುತ್ತದೆ. ಜಗತ್ತಿನೆಲ್ಲೆಡೆ ಸಮಾಜವಾದಿ ರಾಷ್ಟ್ರಗಳನ್ನು ಬಿಟ್ಟು, ಉಳಿದ ಎಲ್ಲ ದೇಶಗಳು ಅಲ್ಲಿನ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತವೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಯನ್ನಲ್ಲ’ ಎಂದರು.

ಸಿಐಟಿಯು ಮುಖಂಡ ರವಿಚಂದ್ರ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ, ಬ್ಯಾಂಕ್ ನೌಕರರ ಸಂಘದ ಮುಖಂಡ ಸುನಿಲ್ ರಾಜ್, ಪ್ರಮುಖರಾದ ಬಿ.ಕೆ. ಇಮ್ತಿಯಾಜ್, ಶಶಿಧರ್ ಶಕ್ತಿನಗರ, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಲೋಕೇಶ್ ಎಂ, ಸಂತೋಷ್ ಆರ್ ಎಸ್, ಮುಜಾಫರ್ ಅಹಮದ್,ಸಂತೋಷ್ ಬಜಾಲ್, ಕೃಷ್ಣ ತಣ್ಣೀರುಬಾವಿ ಇದ್ದರು. ಎಸ್ಎಸ್ಎಲ್ಸಿ, ಪಿಯುಸಿ ಯಲ್ಲಿ ಅಧಿಕ ಅಂಕ ಪಡೆದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.