ಮಂಗಳೂರು: ಮದುವೆಯ ಔತಣ ಕೂಟ ಕಾರ್ಯಕ್ರಮದಲ್ಲಿ ಪರವಾನಗಿ ಪಡೆಯದೆಯೇ ತಡ ರಾತ್ರಿಯಲ್ಲಿ ಧ್ವನಿವರ್ಧಕ ಬಳಸಿ ಆಸುಪಾಸಿನ ನಿವಾಸಿಗಳಿಗೆ ಕಿರಕಿರಿ ಉಂಟು ಮಾಡಿದ ಕುರಿತು ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಯಕ್ರಮಕ್ಕೆ ಬಳಸಿದ್ದ ಧ್ವನಿ ವರ್ಧಕ ವ್ಯವಸ್ಥೆಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕದ್ರಿ ಮಂಜುನಾಥ ದೇವಸ್ಥಾನ ರಸ್ತೆಯ ಬಳಿಯ ಗೋಪುರಗುಂಡಿ ಎಂಬಲ್ಲಿನ ‘ಸವಿನಯ’ ಎಂಬ ಮನೆಯ ಆವರಣದಲ್ಲಿ ಮದುವೆಯ ಔತಣಕೂಟ ಕಾರ್ಯಕ್ರಮಕ್ಕೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಧ್ವನಿ ವರ್ಧಕ ಬಳಸಿ ಹಾಡುಗಳನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಕಿರಿಕಿರಿ ಆಗುತ್ತಿರುವ ಬಗ್ಗೆ ಸಹಾಯವಾಣಿಗೆ (112) ಸ್ಥಳೀಯರಿಂದ ದೂರು ಬಂದಿತ್ತು. ಹೊಯ್ಸಳ ವಾಹನದಲ್ಲಿ ಗಸ್ತುನಿರತ ಎಎಸ್ಐ ಶೇಸಪ್ಪ ಗೌಡ ನೇತೃತ್ವದಲ್ಲಿ ಪೊಲೀಸರು ರಾತ್ರಿ 11.35ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಔತಣಕೂಟ ಆಯೋಜಿಸಿದ್ದವರು ಪರವಾನಗಿ ಪಡೆಯದೆಯೇ, ನಿಗದಿತ ಕಾಲ ಮಿತಿ ಬಳಿಕವೂ ಕಾನೂನು ಬಾಹಿರವಾಗಿ ಧ್ವನಿವರ್ಧಕ ಬಳಸಿದ್ದು ಕಂಡುಬಂದಿತ್ತು. ಸೌಂಡ್ ಸ್ಪೀಕರ್, ಅದನ್ನು ಇಡುವ ಕಬ್ಬಿಣದ ಸ್ಟ್ಯಾಂಡ್ ಮತ್ತು ಕೆಂಪು ಬಣ್ಣದ ಕೇಬಲ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-29-1781873655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.