ಮಂಗಳೂರು: ಭಾರತ್ ಗ್ಯಾಸ್ ವಿತರಣಾ ಸಂಸ್ಥೆಯಾದ ಕಾಮಧೇನು ಗ್ಯಾಸ್ ಏಜೆನ್ಸೀಸ್ ವತಿಯಿಂದ ನಗರದ ಮಲ್ಲಿ ಕಟ್ಟೆಯ ಕದ್ರಿ ಮಾರ್ಕೆಟ್ ಪ್ರದೇಶದಲ್ಲಿ ವಲಸೆ ಕಾರ್ಮಿಕರು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗಾಗಿ 5 ಕೆ.ಜಿ ಎಫ್ಟಿಎಲ್ ಸಿಲಿಂಡರ್ ವಿತರಣಾ ಶಿಬಿರ ಆಯೋಜಿಸಲಾಯಿತು.

ವಿಳಾಸ ದೃಢೀಕರಣ ಸೇರಿದಂತೆ ಹೆಚ್ಚಿನ ದಾಖಲೆಗಳಿಲ್ಲದೆಯೇ, ಬರಿಯ ಒಂದು ಗುರುತಿನ ಪತ್ರದ ಆಧಾರದಲ್ಲಿ 5 ಕೆ.ಜಿ ಸಿಲಿಂಡರ್ ವಿತರಿಸುವ ಈ ಹೊಸ ಯೋಜನೆಗೆ ಸ್ಥಳೀಯ ಅನೇಕ ಮಂದಿ ಆಸಕ್ತಿ ತೋರಿದರು.

ಸಂಸ್ಥೆಯ ಪ್ರದೇಶ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ರೈನಾ, ಹಿರಿಯ ಮಾರಾಟ ಅಧಿಕಾರಿ ಅನಂತ ರಾವ್ ಮತ್ತು ವಿತರಕ ದಿನೇಶ್ ಶೆಟ್ಟಿ ಅವರು ಎಫ್ಟಿಎಲ್ ಯೋಜನೆಯ ಲಾಭ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳಿಗೆ ತೊಂದರೆ ಆಗ ದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-29-1635975823

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.