ಮಂಗಳೂರು: ನಗರದ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಆವರಣದಲ್ಲಿ ನಡೆಯಲಿರುವ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಮಾತಾ ಅಮೃತಾನಂದಮಯಿ (ಅಮ್ಮ) ಅವರಿಗೆ ಬುಧವಾರ ಸ್ವಾಗತ ಕೋರಲಾಯಿತು.

ಮಂಗಳೂರಿನಲ್ಲಿ ಇದೇ 28 ಮತ್ತು 29ರಂದು ನಡೆಯಲಿರುವ ‘ಅಮೃತ ಸಂಗಮ’ ಮತ್ತು ‘ಅಮೃತಾಲಿಂಗನ’ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ‘ಅಮ್ಮ’ನವರು ಅಮೃತಾನಂದಮಯಿ ಆಶ್ರಮದಲ್ಲಿ ಬಂದಿಳಿಯುತ್ತಿದ್ದಂತೆ ಭಕ್ತರು ಮತ್ತು ಆಶ್ರಮದ ಪ್ರತಿನಿಧಿಗಳು ಘೋಷಣೆಗಳನ್ನು ಮೊಳಗಿಸಿದರು. ವಾದ್ಯಘೋಷಗಳೂ ಮೊಳಗಿದವು. ಮಠದ ಮುಖ್ಯಸ್ಥರಾದ ಸ್ವಾಮಿ ಮಂಗಳಾಮೃತ ಪ್ರಾಣ ಅವರು ಬರಮಾಡಿಕೊಂಡರು.

ಕೇರಳದ ಅಮೃತಪುರಿಯಿಂದ ಬಂದ ಅಮೃತಾನಂದಮಯಿ ಅವರೊಂದಿಗೆ ಅನೇಕ ಶಿಷ್ಯಂದಿರು, ಬ್ರಹ್ಮಚಾರಿಗಳು ಮತ್ತು ಬ್ರಹ್ಮಚಾರಿಣಿಯರು ಬಂದಿದ್ದು 28ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಬ್ರಹ್ಮಸ್ಥಾನಂ ಮಹೋತ್ಸವ ಆರಂಭವಾಗಲಿದೆ. ಬೆಳಿಗ್ಗೆ 11 ಗಂಟೆಯ ವೇಳೆ ಕಾರ್ಯಕ್ರಮದ ಸಭಾಂಗಣಕ್ಕೆ ಅಮ್ಮನವರು ಬರಲಿದ್ದು ಧ್ಯಾನ, ಸತ್ಸಂಗ, ಭಜನೆ ಮತ್ತು ದರ್ಶನ ಇರುತ್ತದೆ.

ಸಮಾಜಮುಖಿ ಮಾನವೀಯ ಸೇವಾ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು ಮತ್ತು ಶಾಸಕರು ಪಾಲ್ಗೊಳ್ಳುವರು.

ಅಮ್ಮನವರ ದರ್ಶನ ಪಡೆಯಲು ಬಯಸುವವರು ಬೆಳಿಗ್ಗೆ 9.30ರೊಳಗೆ ಟೈಮ್ ಕಾರ್ಡ್ ಪಡೆದುಕೊಳ್ಳಬೇಕು. ಅದರ ಆಧಾರದಲ್ಲಿ ಮಧ್ಯಾಹ್ನ ಟೋಕನ್ ನೀಡಿ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-1596451152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.