ಮಂಗಳೂರು: ಮಾತಾ ಅಮೃತಾನಂದಮಯಿ ಅವರು ಮೇ 28 ಮತ್ತು 29ರಂದು ಮಂಗಳೂರಿಗೆ ಬರಲಿದ್ದು ಬೋಳೂರಿನ ಅಮೃತಾ ವಿದ್ಯಾಲಯಂ ಶಾಲೆಯ ಆವರಣದಲ್ಲಿ ‘ಅಮೃತ ಸಂಗಮ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ ಭಕ್ತರಿಗೆ ವೈಯಕ್ತಿಕ ಭೇಟಿಯ ‘ಅಮೃತಾಲಿಂಗನ’ಕ್ಕೆ ಅವಕಾಶ ಇದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಕೇರಳದಿಂದ ಹೊರಗೆ ಮಂಗಳೂರಿನಲ್ಲಿ ಮಾತ್ರ ಭಕ್ತರನ್ನು ಭೇಟಿ ಮಾಡಲು ಅಮ್ಮನವರು ನಿರ್ಧರಿಸಿದ್ದಾರೆ. ಮಂಗಳೂರಿಗೆ ಏಳು ವರ್ಷಗಳ ನಂತರ ಅವರು ಬರುತ್ತಿದ್ದಾರೆ ಎಂದರು.

ಎರಡೂ ದಿನ ಅಮೃತಸಂಗಮ-ಯಜ್ಞಶಾಲೆಯಲ್ಲಿ ಬೆಳಿಗ್ಗೆ 5.45ಕ್ಕೆ ಲಲಿತಾ ಸಹಸ್ರನಾಮ ಅರ್ಚನೆಯೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು 7.30ಕ್ಕೆ ರಾಹು ದೋಷ ನಿವಾರಣೆ ಪೂಜೆ ಇರುತ್ತದೆ. 10.30ಕ್ಕೆ ಅಮ್ಮನ ಸತ್ಸಂಗ, ಭಜನೆ ಮತ್ತು ಧ್ಯಾನ, ವೈಯಕ್ತಿಕ ದರ್ಶನ–ಅಮೃತಾಲಿಂಗನ ನಡೆಯಲಿದೆ. ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬೆಳಿಗ್ಗೆ 5.30ಕ್ಕೆ ಮಹಾ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, 9.30ಕ್ಕೆ ಮಹಾ ಮೃತ್ಯುಂಜಯ ಹೋಮ, ಸಂಜೆ 5ಕ್ಕೆ ಮಹಾ ಸುದರ್ಶನ ಹೋಮ, 6ಕ್ಕೆ ಅಲಂಕಾರ ಪೂಜೆ, 7ಕ್ಕೆ ದೇವಿ ಪೂಜೆ ಮತ್ತು ಉದಯಾಸ್ತಮಾನ ಪೂಜೆ ಇರುತ್ತದೆ ಎಂದು ಅವರು ತಿಳಿಸಿದರು.

28ರಂದು ಬೆಳಗ್ಗೆ 10.30ಕ್ಕೆ ಸಮಾಜಮುಖಿ ಮಾನವೀಯ ಸೇವಾ ಯೋಜನೆಗೆ ಅಮ್ಮನವರ ಉಪಸ್ಥಿತಿಯಲ್ಲಿ ಚಾಲನೆ ದೊರಕಲಿದ್ದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶ್ರೀಪಾದ್ ಯೆಸ್ಸೋ ನಾಯಕ್, ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಮುಖಂಡ ಪ್ರಮೋದ್ ಮಧ್ವರಾಜ್, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಭಾಗವಹಿಸುವರು ಎಂದು ಅವರು ವಿವರಿಸಿದರು.

ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ವಸಂತ ಕುಮಾರ್ ಪೆರ್ಲ ಮಾತನಾಡಿ, ಅಮ್ಮನವರ ಭೇಟಿ ಮತ್ತು ಬ್ರಹ್ಮಸ್ಥಾನಂ ಮಹೋತ್ಸವದ ಅಂಗವಾಗಿ ಓಂ ಶಿವ ಶಕ್ತೈಕ್ಯ ರೂಪಿಣೈ ನಮಃ ಎಂಬ ಮಂತ್ರದ ಲೇಖನ ಯಜ್ಞದೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ನಡೆಯಲಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷರಾದ ಜೀವರಾಜ್ ಸೊರಕೆ, ವಾಮನ್ ಕಾಮತ್, ಅಮೃತ ಸಂಗಮ ಆಯೋಜನಾ ಸಮಿತಿ ಕಾರ್ಯದರ್ಶಿ ರಾಮನಾಥ್, ಯುವ ಸಮಿತಿ ಅಧ್ಯಕ್ಷ ಸ್ವಸ್ತಿ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-29-1542373373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.