ಮಂಗಳೂರು: ಹೆಣ್ಣುಮಕ್ಕಳು ಋತುಚಕ್ರದ ವೇಳೆ ಬಳಸುವ ಸ್ಯಾನಿಟರಿ ಪ್ಯಾಡ್ಗಳ ವಿಲೇವಾರಿಗೆ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲವಾಗಿದ್ದು, ಇದು ಶಿಕ್ಷಣ ಸಂಸ್ಥೆಗಳು ಹಾಗೂ ಹೆಣ್ಣುಮಕ್ಕಳಿಗೆ ಬಹಿರಂಗವಾಗಿ ಹೇಳಿಕೊಳ್ಳಲಾಗದ ಸಂಕಷ್ಟ. ಈ ನಿತ್ಯ ನಿರಂತರ ಸಮಸ್ಯೆ ಕುರಿತು ಜಾಗೃತಿ ಹಾಗೂ ‘ಪರ್ಯಾಯ ಬಳಕೆ’ ಬಗ್ಗೆ ಬೆಳಕು ಚೆಲ್ಲಲು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮುಂದಾಗಿದೆ.

ಹೊಸ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂ ರ್ವ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ.

‘ಜಿಲ್ಲೆಯಲ್ಲಿ 55 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಇದ್ದು, ಈ ಕಾಲೇಜುಗಳಲ್ಲಿ ಪೈಲೆಟ್ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ನಮ್ಮಲ್ಲಿ ಸಾಕಷ್ಟು ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳು ಇದ್ದು, ಅವುಗಳ ಸಹಕಾರ ಪಡೆದು, ಒಂದು ತಂಡ ರಚಿಸಿ ಪ್ರತಿ ಕಾಲೇಜಿಗೆ ಭೇಟಿ ನೀಡಿ, ಕಾರ್ಯಕ್ರಮ ನಡೆಸಬೇಕೆಂಬ ಯೋಚನೆ ಇದೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘ ಅಧ್ಯಕ್ಷ ನವೀನ ಶೆಟ್ಟಿ ಕೆ.

‘ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಶೌಚಾಲಯ ಸ್ವಚ್ಛತೆಗೆ ಪ್ರತ್ಯೇಕ ಅನುದಾನ ಸಿಗದ ಕಾರಣ, ಶೌಚಾಲಯದ ಶುಚಿತ್ವ ಕಾಪಾಡುವುದು ಪ್ರತಿ ಕಾಲೇಜಿಗೂ ಸವಾಲಿನ ಸಂಗತಿಯಾಗಿದೆ. ಹೊರಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಂಡರೆ, ಅವರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ. ಹೀಗಾಗಿ, ಹಲವು ಕಾಲೇಜುಗಳು ಶುಚಿತ್ವ ಕೊರತೆ ಎದುರಿಸುತ್ತಿವೆ. ಇನ್ನು ಕೆಲವು ಕಡೆ ಹೆಣ್ಣು ಮಕ್ಕಳು ದಿನವಿಡೀ ಶೌಚಾಲಯ ಬಳಸದೆ ಇರುವ ಸ್ಥಿತಿಯಲ್ಲಿ ಶೌಚಾಲಯಗಳು ಇರುತ್ತವೆ’ ಎನ್ನುತ್ತಾರೆ ಸಂಘದ ಪದಾಧಿಕಾರಿಯೊಬ್ಬರು.

ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇರುತ್ತದೆ. ಅಲ್ಲಿಯೇ ಬಳಸಿದ ಸ್ಯಾನಿಟರಿ ನ್ಯಾಪ್ಕಿನ್ ಹಾಕಲು ವ್ಯವಸ್ಥೆ ಇರುತ್ತದೆ. ಆದರೆ, ಕೆಲವರು ಅರಿವಿನ ಕೊರತೆ ಅಥವಾ ಮುಜುಗರದಿಂದ ಶೌಚಾಲಯದೊಳಗೆ ಹಾಕಿ ಬಿಡುತ್ತಾರೆ. ಇದರಿಂದ ಶೌಚಾಲಯಗಳು ಬ್ಲಾಕ್ ಆಗಿ ಇನ್ನಷ್ಟು ಸಮಸ್ಯೆ ಆಗುತ್ತದೆ ಎನ್ನುತ್ತಾರೆ ಅವರು.

ಅನುಷ್ಠಾನ ಹೇಗೆ?: ಪ್ರತಿ ಕಾಲೇಜಿಗೆ ಭೇಟಿ ನೀಡಿ ಪರಿಸರ ಸ್ನೇಹಿಯಾಗಿರುವ ಮುಟ್ಟಿನ ಕಪ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಜೊತೆಗೆ, ಸ್ಯಾನಿಟರಿ ಪ್ಯಾಡ್ ವೈಜ್ಞಾನಿಕ ವಿಲೇವಾರಿ, ಕಾಲೇಜಿನಲ್ಲಿ ಇನ್ಸಿನರೇಟರ್ಗಳು ಇದ್ದರೆ ಅವುಗಳ ಸರಿಯಾದ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕಾಲೇಜಿನ ಇಬ್ಬರು ಮಹಿಳಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ ಅವರ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲೂ ಯೋಚಿಸಲಾಗಿದೆ ಎನ್ನುತ್ತಾರೆ ಅನು ದಾನಿತ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಸಂಘದ ಗೌರವಾಧ್ಯಕ್ಷ ವಿಠ್ಠಲ ಎ.

ಕಾಲೇಜುಗಳಿಗೆ ಇನ್ಸಿನರೇಟರ್ ಪೂರೈಕೆ

‘ಎರಡನೇ ಹಂತದಲ್ಲಿ ವಿವಿಧ ಸಂಸ್ಥೆಗಳ ಸಿಎಸ್ಆರ್ ಅನು ದಾನದ ನೆರವು ಪಡೆದು ಪದವಿಪೂರ್ವ ಕಾಲೇಜುಗಳಿಗೆ ಇನ್ಸಿನರೇಟರ್ ಒದಗಿಸಲಾಗುವುದು. ಪ್ರಸ್ತುತ ಕೆಲವು ಕಾಲೇಜುಗಳಲ್ಲಿ ಇನ್ಸಿನರೇಟರ್ ಗಳು ಇದ್ದರೂ, ಅವು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳ ದುರಸ್ತಿ ವೆಚ್ಚದಾಯಕವಾಗಿದೆ. ಆ ಕಾರಣಕ್ಕೆ ನಿರ್ದಿಷ್ಟ ಕಂಪನಿ ಜೊತೆ ಚರ್ಚಿಸಿ, ನಿರ್ವಹಣೆಯ ಬಗ್ಗೆ ಒಪ್ಪಂದ ಮಾಡಿಕೊಳ್ಳುವುದೂ ಮುಖ್ಯವಾಗುತ್ತದೆ. ಅನುಷ್ಠಾನಕ್ಕೆ ನೀಡಿದಷ್ಟೇ ಮಹತ್ವವನ್ನು ಫಾಲೊಅಪ್ಗೂ ನೀಡಿದಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ. ಹೀಗಾಗಿ, ಫಾಲೊಅಪ್ಗೆ ವಿಶೇಷ ಆದ್ಯತೆ ಕೊಡಲು ನಿರ್ಧರಿಸಿದ್ದೇವೆ’ ಎಂದು ನವೀನ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಯಾಡ್ಗಳಿಂದ ಶೇ 4ರಷ್ಟು ಕಸ ಉತ್ಪತ್ತಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ 330 ಟನ್ನಷ್ಟು ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಶೇ 3–4ರಷ್ಟು ಸ್ಯಾನಿಟರಿ ಪ್ಯಾಡ್ಗಳು, ಮಕ್ಕಳ ಡೈಪರ್ಗಳು, ಹಿರಿಯರ ಡೈಪರ್ಗಳು ಇರುತ್ತವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-29-1941683127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.