ಮಂಗಳೂರು: ನಗರದ ಹಳೆ ಬಂದರು ದಕ್ಕೆ ಬಳಿ ನದಿಯ ನೀರಿನಲ್ಲಿ ಮೊಯ್ದೀನ್ ನಾಸೀರ್ ಮೃತದೇಹವು ಕೊಲೆಯಾದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಒಡಿಷಾದ ದೀಪಕ್ ಕುಮಾರ್ ಕರಾಯಿ ಹಾಗೂ ಬಿಹಾರದ ಮೊಹಮ್ಮದ್ ಬಹುವಾ ಬಂಧಿತ ಆರೋಪಿಗಳು.

ಮೊಯ್ದೀನ್ ನಾಸೀರ್ ಮೃತದೇಹ ಪತ್ತೆಯಾದ ಸ್ಥಳದ ಸಮೀಪ ಜಟ್ಟಿ ನಿರ್ಮಾಣ ಕಾಮಾಗಾರಿ ನಡೆಯುತ್ತಿತ್ತು. ಅಲ್ಲಿ ತಗಡು ಶೀಟುಗಳಿಂದ ನಿರ್ಮಿಸಿದ್ದ ತಡೆಗೋಡೆ ಬಳಿ ಒಂದು ಬೈಕ್ ಹಾಗೂ ಸ್ಕೂಟರ್ ಮೇಲೆ ರಕ್ತದ ಕಲೆಗಳಿದ್ದವು. ಅಲ್ಲೇ ಸಮೀಪದಲ್ಲಿದ್ದ ಕಬ್ಬಿಣದ ರಾಡ್ನಲ್ಲೂ ರಕ್ತದ ಕಲೆ ಇತ್ತು. ಸ್ಥಳದಲ್ಲಿ ಮೃತದೇಹವನ್ನು ಎಳೆದೊಯ್ದ ಗುರುತು ಕೂಡಾ ಇತ್ತು.

ನಾಸಿರ್ ಮೃತದೇಹ ಪತ್ತೆಯಾಗುವುದಕ್ಕೆ ಮುನ್ನ, ಬುಧವಾರ ಮುಂಜಾನೆ ಇಬ್ಬರು ಬಂದು ಸ್ಥಳೀಯ ವ್ಯಕ್ತಿಯೊಬ್ಬರ ಬಳಿ, ‘ಒಬ್ಬಾತ ನಮ್ಮ ಮೊಬೈಲ್ ಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಆತ ಬಿಳಿ ಬಣ್ಣದ ಶೂ, ಬೂದು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಅಂಗಿ ಧರಿಸಿದ್ದ. ಆತನು ಈ ಕಡೆ ಬಂದಿದ್ದಾನೆಯೇ’ ಎಂದು ವಿಚಾರಿಸಿದ್ದರು. ಬಳಿಕ ಜಟ್ಟಿಯ ಕಾಮಗಾರಿ ನಡೆಯವ ಸ್ಥಳದ ಕಡೆ ಹೋಗಿದ್ದರು. ಈ ರೀತಿ ವಿಚಾರಿಸಿದ್ದವರೇ ಕೊಲೆ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

‘ಸಿಕ್ಕ ಸಾಕ್ಷ್ಯಾಧಾರಗಳಿಂದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಕೊಲೆಯಾದ ಮೊಯ್ದೀನ್ ನಾಸೀರ್ ಆರೋಪಿಗಳ ಮೊಬೈಲ್ ಕದ್ದಿದ್ದನೇ? ಆ ಕಾರಣಕ್ಕಾಗಿಯೇ ಕೊಲೆ ನಡೆಯಿತೇ ಎಂದು ಈ ಹಂತದಲ್ಲಿ ಖಚಿತವಾಗಿ ಹೇಳಲಾಗದು. ತನಿಖೆ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಬಳಿಕವೇ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನಗರ ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-29-1526212021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.