ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ನ (ಎಂಆರ್ಪಿಎಲ್) ಹಸಿರು ವಲಯ ಭೂ ಸ್ವಾಧೀನ ಪ್ರಕ್ರಿಯೆಯು ಈ ಹಿಂದಿನ ತೀರ್ಮಾನದಂತೆ ಜಿಲ್ಲಾಡಳಿತದ ಮೂಲಕವೇ ನಡೆಯಬೇಕು, ಒಂದು ವಾರದ ಒಳಗೆ ನಿರ್ಧಾರ ಪ್ರಕಟಿಸದಿದ್ದಲ್ಲಿ ಮೇ 1ರಿಂದ ಸಂತ್ರಸ್ತ ಗ್ರಾಮಸ್ಥರು ಎಂಆರ್ಪಿಎಲ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವರು ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಹೇಳಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ‘ಎಂಆರ್ಪಿಎಲ್ನ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾಲಿನ್ಯ ತಡೆಗೆ ಆರು ಅಂಶಗಳ ಕಾರ್ಯಕ್ರಮ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಇವುಗಳಲ್ಲಿ ಐದು ಅಂಶಗಳನ್ನು ಕಂಪನಿ ಭಾಗಶಃ ಜಾರಿಗೊಳಿಸಿದೆ. ಆದರೆ, ಕಂಪನಿ ಮತ್ತು ಗ್ರಾಮಗಳ ಜನವಸತಿ ನಡುವಿನ ಹೆಚ್ಚು ಬಾಧಿತ ಪ್ರದೇಶದಲ್ಲಿ 27 ಎಕರೆ ಭೂಮಿ ಸ್ವಾಧೀನಕ್ಕೆ ಪಡೆದು, ಹಸಿರು ವಲಯ ನಿರ್ಮಿಸಿ, ಜಮೀನು, ವಸತಿ ಕಳೆದುಕೊಳ್ಳುವವರಿಗೆ ಕೈಗಾರಿಕಾ ಭೂ ಸ್ವಾಧೀನದ ನಿಯಮದಂತೆ ಪುನರ್ವಸತಿ ಕಲ್ಪಿಸುವ ಅಂಶದ ಅನುಷ್ಠಾನಕ್ಕೆ ಕಂಪನಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.

ಹೋರಾಟ ಸಮಿತಿಯ ಸತತ ಪ್ರಯತ್ನದಿಂದಾಗಿ ಸ್ವಾಧೀನ ಪಡಿಸಬೇಕಾದ 27 ಎಕರೆ ಜಮೀನು ಗುರುತಿಸುವ ಕಾರ್ಯ ಐದು ವರ್ಷಗಳ ಹಿಂದೆ ಅಂತಿಮಗೊಂಡಿತ್ತು. ಪರಿಹಾರ ಪ್ಯಾಕೇಜ್, ಸವಲತ್ತುಗಳ ವಿಚಾರದಲ್ಲಿ ಮತ್ತೆ ವಿಳಂಬವಾಯಿತು. ‘ಒನ್ ಟೈಂ ಸೆಟಲ್ಮೆಂಟ್’ಗೆ ಒಪ್ಪಿಕೊಂಡ ನಂತರವೂ ಎಂಆರ್ಪಿಎಲ್ ಆಡಳಿತವು ಭೂ ಸ್ವಾಧೀನ ಪ್ರಕ್ರಿಯೆ ನಡೆಸಲು ವಿಳಂಬ ಧೋರಣೆ ತೋರುತ್ತಿದೆ. ಒಂದು ಬಾರಿಯ ನಗದು ಪರಿಹಾರಕ್ಕೆ ಒಪ್ಪಿಕೊಂಡರೆ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡಿ ನೇರವಾಗಿ ಭೂಸ್ವಾಧೀನ ನಡೆಸುವುದಾಗಿ ತಿಳಿಸಿದ್ದ ಕಂಪನಿಯು, ಈಗ ಕೆಐಎಡಿಬಿ ಮೂಲಕ ಭೂಸ್ವಾಧೀನ ನಡೆಸುವುದಾಗಿ ತಿಳಿಸಿದೆ. ಕೆಐಎಡಿಬಿ ವಿಧಿಸುವ ಭೂ ಮೌಲ್ಯದ ಶೇ 10 ಮೊತ್ತದ ಸೇವಾ ಶುಲ್ಕ ಮನ್ನಾ ಮಾಡಿ ಉಚಿತವಾಗಿ ಭೂ ಸ್ವಾಧೀನ ನಡೆಸಿಕೊಡುವಂತೆ ಪತ್ರ ಬರೆದಿದೆ ಎಂದು ಅವರು ಆರೋಪಿಸಿದರು.

ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದದಾರೆ. ಫೆಬ್ರುವರಿ 4ರಂದು ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ಪ್ಯಾಕೇಜ್ ಅಂತಿಮಗೊಂಡಿತ್ತು. ಎರಡು ತಿಂಗಳುಗಳ ಅವಧಿಯಲ್ಲಿ ಭೂ ಸ್ವಾಧೀನ ಆರಂಭಿಸಿ, ಮಳೆಗಾಲ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರು. ಆದರೆ, ಈವರೆಗೆ ಯಾವ ಬೆಳವಣಿಗೆಯೂ ನಡೆದಿಲ್ಲ. ಕೈಗಾರಿಕಾ ಮಾಲಿನ್ಯದಿಂದ ಸಂತ್ರಸ್ತರಾಗಿರುವ ಗ್ರಾಮಸ್ಥರು ಕಂಗಾಲಾಗಿದ್ದಾರೆ ಎಂದರು.

ಸಂತ್ರಸ್ತರಾದ ಮುಹಮ್ಮದ್ ಜಾಬೀರ್, ಶೆರೀಫ್ ನಿರ್ಮುಂಜೆ, ಇಕ್ಬಾಲ್ ಜೋಕಟ್ಟೆ, ಸಿಲ್ವಿಯಾ ಪೆರೀಸ್, ಕವಿತಾ ಸುವರ್ಣ, ಹಸೈನಾರ್ ಜೋಕಟ್ಟೆ, ಪುಷ್ಪಾ ಜೋಕಟ್ಟೆ, ಸುಂದರಿ ಜೋಕಟ್ಟೆ, ಮರಿಯಂ ಉಪಸ್ಥಿತರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-29-1955131052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.