ಮಂಗಳೂರು: ಎಂಆರ್ಪಿಎಲ್ನ ಕೋಕ್ ಸಲ್ಫರ್ ಘಟಕದ ಸಂತ್ರಸ್ತರ ಭೂಸ್ವಾಧೀನ ಪ್ರಕ್ರಿಯೆಯನ್ನು ಆರರಿಂದ ಏಳು ತಿಂಗಳ ಒಳಗೆ ಆರಂಭಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ತಿಳಿಸಿದೆ. ಜಿಲ್ಲಾಡಳಿತದ ಮಾತಿಗೆ ಮಣಿದು ಧರಣಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ಹಸಿರು ವಲಯಕ್ಕಾಗಿ ಗುರುತಿಸಿರುವ 27 ಎಕರೆ ಜಮೀನು ಸ್ವಾಧೀನಪಡಿಸಬೇಕು ಎಂದು ಒತ್ತಾಯಿಸಿ ಒಂದು ವಾರದಿಂದ ಒಳಗೊಂಡ ನಾಗರಿಕ ಹೋರಾಟ ಸಮಿತಿ ಧರಣಿ ನಡೆಸಿತ್ತು. ಹೀಗಾಗಿ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾಹಿತಿ ನೀಡಿದ ಕೆಐಎಡಿಬಿ ಭೂಸ್ವಾಧೀನ ಅಧಿಕಾರಿ ಮೇಘನಾ ಅವರು ಸುಲಭವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ನಡೆಸುವ ಕುರಿತು ಮಾಹಿತಿ ನೀಡಿದರು. ಈ ಮಾಹಿತಿ ಆಧಾರದಲ್ಲಿ ಚರ್ಚೆ ನಡೆಯಿತು. ನಂತರ ಜಿಲ್ಲಾಧಿಕಾರಿ ಮಾತನಾಡಿ ಕೆಐಎಡಿಬಿ ಭೂಸ್ವಾಧೀನದ ಕಾನೂನು ಪ್ರಕ್ರಿಯೆ ಆರು ತಿಂಗಳಲ್ಲಿ ಪೂರ್ಣಗೊಳಿಸಲಿದೆ ಎಂದು ತಿಳಿಸಿರುವುದಾಗಿ ಸಮಿತಿ ತಿಳಿಸಿದೆ.

ಮೂರು ಮಾದರಿಗಳ ಸಾಧಕ ಬಾಧಕಗಳನ್ನು ಜಿಲ್ಲಾಧಿಕಾರಿ ತಿಳಿಸಿದರು. ಕೆಐಎಡಿಬಿ ಸ್ವಾಧೀನ ಮಾಡುವುದೇ ಸುಲಭ ಮತ್ತು ಸೂಕ್ತ ವಿಧಾನ ಎಂದು ಮನವರಿಕೆಯಾದ ಕಾರಣ ಆ ಹಾದಿಯಲ್ಲಿ ಸಾಗಲು ಹೋರಾಟ ಸಮಿತಿ ಪ್ರತಿನಿಧಿಗಳು ಒಪ್ಪಿಕೊಂಡರು. ಆದರೆ ಭೂಸ್ವಾಧೀನ ಆರಂಭಿಸುವ ಪ್ರಕ್ರಿಯೆ ಯಾವ ಕಾರಣಕ್ಕೂ 6 ತಿಂಗಳು ಮೀರಬಾರದು ಎಂಬುದು ಖಾತರಿಯಾಗಬೇಕು ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.

ಎಂಆರ್ಪಿಎಲ್ ನಾಲ್ಕನೇ ಹಂತದ ಭೂಸ್ವಾಧೀನಕ್ಕೆ ಸಂಬಂಧಿಸಿ ಪೆರ್ಮುದೆ ಗ್ರಾಮಸ್ಥರಿಗಾಗಿ ಘೋಷಿಸಿರುವ ಪುನರ್ವಸತಿ ಪ್ಯಾಕೇಜ್ನಲ್ಲಿರುವ ಎಲ್ಲ ಅಂಶಗಳು ಜೋಕಟ್ಟೆ ಸಂತ್ರಸ್ತರಿಗೂ ಅನ್ವಯವಾಗಬೇಕು, 4ನೇ ಹಂತದ ಭೂಸ್ವಾಧೀನ ಪ್ಯಾಕೇಜ್ನಲ್ಲಿರುವ 18 ತಿಂಗಳ ಮನೆ ಬಾಡಿಗೆ ಸೌಲಭ್ಯ ಜೋಕಟ್ಟೆಯವರಿಗೂ ಸಿಗಬೇಕು. ಕುಸಿಯವ ಹಂತದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರ್ ಶ್ಯಾಮಪ್ರಸಾದ್ ಕಾಮತ್, ಮುಖಂಡರಾದ ಮನೋಜ್ ಜೋಕಟ್ಟೆ, ಷರೀಫ್ ನೀರ್ಮುಂಜೆ, ವೆಂಕಟೇಶ್, ಬಜ್ಪೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಪೂಜಾರಿ, ಸಂಶುದ್ದೀನ್, ಸಿಲ್ವಿಯಾ ಜೋಕಟ್ಟೆ, ಮರಿಯಾ ಜೋಕಟ್ಟೆ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-29-1565048420

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.