ಮಂಗಳೂರು: ಕಳೆದ ಆರ್ಥಿಕ ವರ್ಷದಲ್ಲಿ ಮಹಾನಗರಪಾಲಿಕೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ, ಈ ವರೆಗಿನ ಅತ್ಯಧಿಕ ಮೊತ್ತ ಸಂಗ್ರಹದ ಸಾಧನೆ ಮಾಡಿದೆ ಎಂದು ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2025– 26ನೇ ಸಾಲಿನಲ್ಲಿ ₹112 ಕೋಟಿ ಸಂಗ್ರಹಿಸುವ ಗುರಿ ಇತ್ತು. ₹149.68 ಕೋಟಿ ಸಂಗ್ರಹವಾಗಿದೆ. 2024– 25ನೇ ಸಾಲಿನಲ್ಲಿ ₹137 ಕೋಟಿ ಮತ್ತು ಅದರ ಹಿಂದಿನ ಸಾಲಿನಲ್ಲಿ ₹117 ಕೋಟಿ ಮಾತ್ರ ಸಂಗ್ರಹವಾಗಿತ್ತು ಎಂದು ಹೇಳಿದರು.

ಅತ್ತಾವರ, ಪದವು ಮತ್ತು ಹಂಪನಕಟ್ಟೆ ವಾರ್ಡ್ಗಳಲ್ಲಿ ಮಹಾನಗರಪಾಲಿಕೆ ಪ್ರಯೋಗಿಕವಾಗಿ ಸರ್ವೆ ಮಾಡಿ, ಆಸ್ತಿಗಳ ಬಳಿಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಾಗಿದೆ. ಶೇಕಡ 50ರಷ್ಟು ಆಸ್ತಿಗಳಲ್ಲಿ ಮಾತ್ರ ಸರ್ವೆ ನಡೆಸಲು ಸಾಧ್ಯವಾಗಿತ್ತು. ಆದರೂ ₹55.33 ಲಕ್ಷ ಸಂಗ್ರಹಿಸಲಾಗಿದೆ. ಹೀಗಾಗಿ ಈ ಪ್ರಯೋಗವನ್ನು ಎಲ್ಲ ವಾರ್ಡ್ಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ಏ.30ರ ಒಳಗೆ ಉಳಿಕೆ ತೆರಿಗೆ ಪಾವತಿಸಲು ಕಟ್ಟಡ ಮಾಲೀಕರು ಮುಂದೆ ಬಂದರೆ ಶೇಕಡ 5ರಷ್ಟು ರಿಯಾಯಿತಿ ಸಿಗಲಿದೆ ಎಂದ ಅವರು ಪಾಲಿಕೆಯ ವಾಣಿಜ್ಯ ಮಳಿಗೆಗಳನ್ನು ಮತ್ತೆ ಹರಾಜು ಹಾಕಲು ಮುಂದಾಗಿದ್ದು 2002ರಲ್ಲಿ ₹17.96 ಲಕ್ಷ ಮೊತ್ತಕ್ಕೆ ಹರಾಜಾಗಿದ್ದ ಲಾಲ್ಬಾಗ್ನಲ್ಲಿರುವ ಕಟ್ಟಡ ಈ ಬಾರಿ ₹71.43 ಲಕ್ಷಕ್ಕೆ ಹರಾಜಾಗಿದೆ ಎಂದರು. ಉಪ ಆಯುಕ್ತೆ ಅಕ್ಷತಾ ಪಾಲ್ಗೊಂಡಿದ್ದರು.

ಜಾಹೀರಾತು ಫಲಕಗಳಿಗೆ ಕ್ಯುಆರ್ ಕೋಡ್: ಮಹಾನಗರಪಾಲಿಕೆಯ ಆದಾಯ ಹೆಚ್ಚಿಸಲು ಜಾಹೀರಾತುಗಳ ಮೇಲೆ ಗಮನ ನೀಡಲಾಗುತ್ತಿದ್ದು ಅನುಮತಿ ದುರ್ಬಳಕೆ ಆಗದಂತೆ ಮಾಡಲು ಇನ್ನು ಮುಂದೆ ಜಾಹೀರಾತು ಫಲಕಗಳ ಮೇಲೆ ಕ್ಯುಆರ್ ಕೋಡ್ ಬಳಸಲಾಗುವುದು ಎಂದು ರವಿಚಂದ್ರ ನಾಯಕ್ ತಿಳಿಸಿದರು. ಇದಕ್ಕಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-29-121809580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.