ಮಂಗಳೂರು: ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದನ್ನು ಪ್ರಶ್ನಿಸಿದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿ, ಸಿಬ್ಬಂದಿಯ ಮೊಬೈಲ್ ಧ್ವಂಸ ಗೊಳಿಸಿದ ಬಗ್ಗೆ ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ಸಂಚಾರ ಪೂರ್ವ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಮಾಲಿ ಗೇರ ಹಾಲೇಶ, ಹೆಡ್ ಕಾನ್ಸ್ಟೆಬಲ್ ಪ್ರವೀಣ್, ಹೆಡ್ ಕಾನ್ಸ್ಟೆಬಲ್ ಚಂಪಾ ನಂತೂರು ವೃತ್ತದಲ್ಲಿ ಶನಿವಾರ ಸಂಚಾರ ದಟ್ಟಣೆ ನಿಯಂತ್ರಿಸುತ್ತಿದ್ದರು. ಈ ವೇಳೆ ಬೈಕ್ ಸವಾರನೊಬ್ಬ ಪದವು ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ಅಡ್ಡಲಾಗಿ ಬೈಕ್ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದ. ಬೈಕನ್ನು ಮುಂದಕ್ಕೆ ಒಯ್ಯುವಂತೆ ಸೂಚಿಸಿದ ಸಿಬ್ಬಂದಿ ಮಾಲಿಗೇರ ಹಾಲೇಶ ಅವರನ್ನೇ ಅವಾಚ್ಯವಾಗಿ ನಿಂದಿಸಿದ್ದ.’

‘ಸಿಬ್ಬಂದಿ ಪ್ರವೀಣ್ ಮತ್ತು ಚಂಪಾ ಸ್ಥಳಕ್ಕೆ ಧಾವಿಸಿ, ‘ಬೈಕನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಾತನಾಡಿ’ ಎಂದು ಸೂಚಿಸಿದ್ದರು. ಆಗ ಆತ ಪ್ರವೀಣ್ ಅವರ ಮುಖಕ್ಕೆ ಹಲ್ಲೆ ನಡೆಸಿದ್ದ. ಹಾಲೇಶ ಹಾಗೂ ಚಂಪಾ ಅದನ್ನು ತಡೆಯಲು ಯತ್ನಿಸಿದಾಗ ಆತನ ಜೊತೆಗಿದ್ದ ಮಹಿಳೆ, ‘ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಎಂದು ಬೆದರಿಸಿದ್ದಳು. ಈ ವೇಳೆ ಪ್ರವೀಣ್ ಅವರ ಮೊಬೈಲ್ ಕಿತ್ತು ಬೈಕ್ ಸವಾರ, ಅದನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದು, ಇದ ರಿಂದ ₹ 28 ಸಾವಿರ ನಷ್ಟ ಉಂಟಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-29-1252822040

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.