ಮಂಗಳೂರು: ವೈದ್ಯಕೀಯ ಕೋರ್ಸ್ಗಾಗಿ ಭಾನುವಾರ ನಡೆದ ನೀಟ್ ನಗರದಲ್ಲಿ ಸುಗಮವಾಗಿ ಮುಗಿದಿದ್ದು ನೋಂದಣಿ ಮಾಡಿಕೊಂಡಿದ್ದವರ ಪೈಕಿ 264 ಅಭ್ಯರ್ಥಿಗಳು ಗೈರಾಗಿದ್ದಾರೆ.

ನಗರದ 18 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು 8587 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 8323 ಮಂದಿ ಮಾತ್ರ ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇಂಟ್ ಅಲೋಶಿಯಸ್ ವಿವಿ, ಸೇಂಟ್ ಆ್ಯಗ್ನೆಸ್ ಕಾಲೇಜು ಮತ್ತು ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಅತಿ ಹೆಚ್ಚು, ತಲಾ 720 ಅಭ್ಯರ್ಥಿಗಳಿಗೆ ಅವಕಾಶ ಮಾಡಲಾಗಿತ್ತು. ಇಲ್ಲಿ ಕ್ರಮವಾಗಿ 22, 30 ಮತ್ತು 26 ಮಂದಿ ಗೈರಾಗಿದ್ದಾರೆ. ಡಾ. ಪಿ ದಯಾನಂದ ಪೈ, ಸತೀಶ್ ಪೈ ಸರ್ಕಾರಿ ಕಾಲೇಜಿನಲ್ಲಿ 600 ಮಂದಿಯಲ್ಲಿ 581 ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಲಾಗಿದೆ.

ವಿಶ್ವವಿದ್ಯಾಲಯ ಕಾಲೇಜು, ಸೇಂಟ್ ಅಲೋಶಿಯಸ್ ಕಾಲೇಜು ಬಿ ಬ್ಲಾಕ್, ಸೇಂಟ್ ಆ್ಯಗ್ನೆಸ್ ಪಿಯು ಕಾಲೇಜು, ಬಲ್ಮಠದ ಸರ್ಕಾರಿ ಮಹಿಳಾ ಕಾಲೇಜು,ವಿದ್ಯಾದಾಯಿನಿ ಹೈಸ್ಕೂಲ್, ಪಿಎಂಸಿ ಕೇಂದ್ರೀಯ ವಿದ್ಯಾಲಯ–1, ಗೋವಿಂದ ದಾಸ್ ಕಾಲೇಜು, ಕೆನರಾ ಪಿಯು ಕಾಲೇಜು ಮತ್ತು ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ತಲಾ 480 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಇಲ್ಲಿ ಕ್ರಮವಾಗಿ 10, 16, 10, 16, 11, 20, 13,13, 16 ಮಂದಿ ಗೈರಾಗಿದ್ದರು. ಗೋಕರ್ಣನಾಥೇಶ್ವರ ಕಾಲೇಜು, ಮಹಿಳೆಯರ ಸರ್ಕಾರಿ ಪಿಯು ಕಾಲೇಜು ಮತ್ತು ಗೋವಿಂದದಾಸ ಪಿಯು ಕಾಲೇಜಿನಲ್ಲಿ ತಲಾ 360, ಎಸ್ಡಿಎಂ ಕಾನೂನು ಕಾಲೇಜಿನಲ್ಲಿ 240 ಮಂದಿಗೆ ಅವಕಾಶವಿತ್ತು. ಕ್ರಮವಾಗಿ 13, 11, 9 ಮಂದಿ ಗೈರಾಗಿದ್ದರು. ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ 187 ಮಂದಿಗೆ ಅವಕಾಶವಿತ್ತು. 5 ಮಂದಿ ಗೈರಾಗಿದ್ದರು ಎಂದು ತಿಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಬೆಳಗ್ಗೆ 11.30ರ ಒಳಗೆ ಅಭ್ಯರ್ಥಿಗಳ ಪರಿಶೀಲನೆ ಮಾಡಿ ಪರೀಕ್ಷಾ ಕೇಂದ್ರದ ಒಳಗೆ ಕಳುಹಿಸಲಾಗಿತ್ತು. ಮಧ್ಯಾಹ್ನದ ನಂತರ ಪರೀಕ್ಷೆ ನಡೆಯಿತು. ಸಿಸಿ ಟಿವಿ ಕ್ಯಾಮೆರಾ, ಮೊಬೈಲ್ ಫೋನ್ ಜಾಮರ್ ಅಳವಡಿಸಲಾಗಿತ್ತು. ಪ್ರತಿ ಕೇಂದ್ರದ ಉಸ್ತುವಾರಿಗೆ ಒಬ್ಬರು ಅಧೀಕ್ಷಕರು ಇದ್ದರು.

ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಇರಲಿಲ್ಲ. ಜೀವವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ರಸಾಯನ ವಿಜ್ಞಾನ ಮತ್ತು ಭೌತವಿಜ್ಞಾನ ಪತ್ರಿಕೆಗಳು ತೀರಾ ಕಷ್ಟ ಎನಿಸಲಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-29-690037101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.