ಮಂಗಳೂರು: ಇನ್ನೊಂದು ವಾರದಲ್ಲಿ ಮುಂಗಾರು ಆರಂಭವಾಗಬಹುದೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಪೂರಕವಾದ ಕಾರ್ಯಗಳು ಪ್ರಾರಂಭವಾಗಿವೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಭತ್ತ ಕೃಷಿಯನ್ನು ಮಾತ್ರ ಮಾಡಲಾಗುತ್ತದೆ. ಕೃಷಿ ಇಲಾಖೆಯು ಈ ಬಾರಿ ಒಟ್ಟು 9,750 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಿದೆ. ಗುರುಪುರ, ಸುರತ್ಕಲ್, ಮೂಲ್ಕಿ, ಮೂಡುಬಿದಿರೆ, ಬಂಟ್ವಾಳ, ಪಾಣೆಮಂಗಳೂರು ಕೃಷಿ ಹೋಬಳಿಗಳಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳು ಇವೆ.

ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ನೀಡುವ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿದೆ. ಜಿಲ್ಲೆಯಲ್ಲಿ ಈ ವರ್ಷವೂ ಎಂಒ4 ತಳಿಯ (ಕುಚ್ಚಲಕ್ಕಿ) ಭತ್ತಕ್ಕೆ ಹೆಚ್ಚು ಬೇಡಿಕೆ ಇದೆ. 556 ಕ್ವಿಂಟಲ್ ಎಂಇ4 ಭತ್ತದ ಬೀಜಕ್ಕೆ ಬೇಡಿಕೆ ಇದ್ದು, ಪ್ರಸ್ತುತ 264 ಕ್ವಿಂಟಲ್ ವಿತರಣೆಯಾಗಿದ್ದು, 292 ಕ್ವಿಂಟಲ್ ದಾಸ್ತಾನು ಇದೆ. ಜಯ 46 ಕ್ವಿಂಟಲ್ ಬೇಡಿಕೆ ಇದ್ದು, 15 ಕ್ವಿಂಟಲ್ ದಾಸ್ತಾನು ಇದೆ. ಜ್ಯೋತಿ 30 ಕ್ವಿಂಟಲ್, ಸಹ್ಯಾದ್ರಿ ಬ್ರಹ್ಮ 114 ಕ್ವಿಂಟಲ್, ಸಹ್ಯಾದ್ರಿ ಕೆಂಪು ಮುಕ್ತಿ 77 ಕ್ವಿಂಟಲ್ ಸೇರಿ ಒಟ್ಟು 632.50 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, 591 ಕ್ವಿಂಟಲ್ ಪೂರೈಕೆಯಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಒಟ್ಟು 23,053 ಟನ ರಸಗೊಬ್ಬರದ ಬೇಡಿಕೆ ಇದ್ದು, ಪ್ರಸ್ತುತ 16,457 ಟನ್ ದಾಸ್ತಾನು ಇದೆ. ಯೂರಿಯಾ 3,889 ಟನ್ ಬೇಡಿಕೆ ಇದ್ದು, 3,793 ಸಂಗ್ರಹದಲ್ಲಿದೆ. ಡಿಎಪಿ 555 ಟನ್ (ಬೇಡಿಕೆ– 516 ಟನ್), ಎಂಒಪಿ 3,726 ಟನ್ (ಬೇಡಿಕೆ– 3,934), ಎನ್ಪಿಕೆ 8,242 ಟನ್ (ಬೇಡಿಕೆ– 14,621), ಎಸ್ಎಸ್ಪಿ 142 ಟನ್ (ಬೇಡಿಕೆ –93) ದಾಸ್ತಾನು ಇದೆ. ಈವರೆಗೆ ಒಟ್ಟು 4,502 ಟನ್ ರಸಗೊಬ್ಬರ ಮಾರಾಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ಭಾಗದಲ್ಲಿ ಬಿತ್ತನೆ ಮಾದರಿಗಿಂತ ಹೆಚ್ಚಾಗಿ ರೈತರು ನಾಟಿ ಪದ್ಧತಿ ಅನುಸರಿಸುವುದರಿಂದ ಜಯ, ಜ್ಯೋತಿ ತಳಿಯ ನಾಟಿ ಸಾಮಾನ್ಯವಾಗಿ ಜುಲೈ ವೇಳೆಗೆ ಪ್ರಾರಂಭವಾಗುತ್ತದೆ. ಅಷ್ಟರಲ್ಲಿ ಬೇಡಿಕೆಯಷ್ಟು ಬೀಜ ಸರಬರಾಜು ಆಗುತ್ತದೆ. ಸದ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ. ಜುಲೈ ವೇಳೆಗೆ ಪೂರ್ಣ ಪ್ರಮಾಣದ ಲ್ಲಿ ಸರಬರಾಜು ಆಗಬಹುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ವೆಚ್ಚದಾಯಕವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಅನೇಕ ಸಣ್ಣ ಹಿಡುವಳಿದಾರರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಕೃಷಿ ಕಾರ್ಮಿಕರ ಕೂಲಿ, ರಸಗೊಬ್ಬರದ ವೆಚ್ಚ, ಹವಾಮಾನ ವೈಪರೀತ್ಯ ಇಂತಹ ಅನೇಕ ಸಂಗತಿಗಳು ಸಣ್ಣ ಹಿಡುವಳಿದಾರರು ಭತ್ತ ಕೃಷಿಯಿಂದ ವಿಮುಖರಾಗಲು ಕಾರಣವಾಗುತ್ತಿವೆ. ಹೀಗಾಗಿ, ಹಡೀಲು ಭೂಮಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೊಡ್ಡ ಜಮೀನು ಇರುವವರು ಮನೆ ಬಳಕೆಗಾಗಿ ಲಾಭದ ನಿರೀಕ್ಷೆ ಇಲ್ಲದೆ ಭತ್ತ ಬೆಳೆಯುತ್ತಾರೆ’ ಎನ್ನುತ್ತಾರೆ ಭತ್ತ ಕೃಷಿಕ ಶಿವರಾಂ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-29-1926772977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.