ಮಂಗಳೂರು: ಫಲ್ಗುಣಿ ನದಿ ನೀರು ಕಲುಷಿತಗೊಳ್ಳಲು ಕೈಗಾರಿಕೆಗಳು ಕಾರಣ ಎನ್ನುವ ಆರೋಪವನ್ನು ಒಪ್ಪಲು ಸಾಧ್ಯವಿಲ್ಲ. ಕೈಗಾರಿಕಾ ಪ್ರದೇಶ ಹಾಗೂ ಪಕ್ಕದ ಪುನರ್ವಸತಿ ಪ್ರದೇಶದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ, ಕೊಳಚೆ ನೀರು ನದಿ ಸೇರುತ್ತಿದೆಯೇ ವಿನಾ ಅದು ಕೈಗಾರಿಕೆಗಳ ತ್ಯಾಜ್ಯ ನೀರು ಅಲ್ಲ ಎಂದು ಕೆನರಾ ಕೈಗಾರಿಕಾ ಸಂಘ ಹೇಳಿದೆ.

ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿ ಒಳಚರಂಡಿ ಸಮರ್ಪಕವಾಗಿಲ್ಲ. ಇರುವ ಚರಂಡಿಯ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ತೋಕೂರು, ಕುಡುಂಬೂರು, ಅಂಗರಗುಂಡಿ ಪುನರ್ವಸತಿ ಪ್ರದೇಶದಲ್ಲಿಯೂ ಒಳಚರಂಡಿ ಜಾಲ ಇಲ್ಲ. ಹೀಗಾಗಿ, ಕೊಳಚೆ ನೀರು ಕಾಲುವೆಗಳ ಮೂಲಕ ನದಿ ಸೇರುತ್ತದೆ ಎಂದು ಕೆನರಾ ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಎ.ಇಕ್ಬಾಲ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಭಾಗದ ಪ್ರತಿ ಕೈಗಾರಿಕೆ ತನ್ನದೇ ಆದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಇಟಿಪಿ) ಹೊಂದಿದೆ. ಇಟಿಪಿಯಿಂದ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಆಗಾಗ ಇದರ ಪರಿಶೀಲನೆ ಮಾಡುತ್ತಾರೆ ಎಂದರು. ಕೆಐಎಡಿಬಿ ಅಧೀನದಲ್ಲಿರುವ ಈ ಪ್ರದೇಶವನ್ನು ಪಾಲಿಕೆ ನಿರ್ವಹಣೆ ಮಾಡುತ್ತಿಲ್ಲ. ಈ ಪ್ರದೇಶವನ್ನು ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ 2022ರ ಅಡಿಯಲ್ಲಿ ಘೋಷಿಸಿ ನಿರ್ವಹಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ಎಂಆರ್ಪಿಎಲ್ ಸಂಸ್ಥೆಯ ಪ್ರತಿನಿಧಿ ಸುದರ್ಶನ್, ಬಿಎಎಸ್ಎಫ್ನ ಸಂತೋಷ್ ಪೈ, ಸೋಲಾರ್ ಸಂಸ್ಥೆಯ ಜಗದೀಶ್, ಅದಾನಿ ವಿಲ್ಮಾರ್ನ ಶಾಂತ ಕುಮಾರ್, ಪತಂಜಲಿ ಸಂಸ್ಥೆಯ ಹರೀಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-29-2091597147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.