ಮಂಗಳೂರು: ಕಟ್ಟಡ ತೆರಿಗೆ ಹಾಗೂ ಕಟ್ಟಡ ಪರವಾನಗಿ ಶುಲ್ಕ ಪಾವತಿ ಕುರಿತು ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಹಾಗೂ ಪಿಲಿಕುಳ ನಿಸರ್ಗಧಾಮ ಸೊಸೈಟಿ (ಪ್ರಸ್ತುತ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ) ದ ನಡುವಿನ ವ್ಯಾಜ್ಯ ಸುಮಾರು 20 ವರ್ಷಗಳ ಬಳಿಕ ಕೊನೆಗೂ ಬಗೆಹರಿದಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ನ್ಯಾಯಾಲಯದ ಆದೇಶದ ಪ್ರಕಾರ ಮೂಡುಶೆಡ್ಡೆ ಗ್ರಾಮ ಪಂಚಾಯಿತಿಗೆ ಹಳೆ ತೆರಿಗೆ ಬಾಕಿ ಸೇರಿ ಒಟ್ಟು ₹33.36 ಲಕ್ಷವನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಈಚೆಗೆ ಪಾವತಿಸಿದೆ.

ಪಿಲಿಕುಳ ನಿಸರ್ಗ ಧಾಮ ಸೊಸೈಟಿ ಕಟ್ಟಡಗಳಿಗೆ ಕಟ್ಟಡ ತೆರಿಗೆ ಹಾಗೂ ಕಟ್ಟಡ ಪರವಾನಗಿ ಶುಲ್ಕ ಹಾಗೂ ಮನರಂಜನಾ ಶುಲ್ಕ ಪಾವತಿ ಕುರಿತು ಮಂಗಳೂರು ತಾಲ್ಲೂಕಿನ ಮೂಡುಶೆಡ್ಡೆ ಗ್ರಾಮ ಪಂಚಾಯಿತಿ 2006ರ ನ.8ರಂದು ಹಾಗೂ ಡಿ.12ರಂದು ನೋಟಿಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಪಿಲಿಕುಳ ನಿಸರ್ಗಧಾಮ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ನ್ಯಾಯಾಲಯಕ್ಕೆ 2008ರ ಜ.7ರಂದು ಮೇಲ್ಮನವಿ ಸಲ್ಲಿಸಿದ್ದರು.

‘ಪಿಲಿಕುಳ ನಿಸರ್ಗ ಧಾಮವು ಸರ್ಕಾರದ ಅಧೀನದ ಸಂಸ್ಥೆ. ಶೈಕ್ಷಣಿಕ ಉದ್ದೇಶವನ್ನು ಮಾತ್ರ ಹೊಂದಿದೆ. ಮನರಂಜನಾ ಉದ್ದೇಶವನ್ನು ಹೊಂದಿಲ್ಲ. ಹಾಗಾಗಿ ಕಟ್ಟಡ ಪರವಾನಗಿ ಶುಲ್ಕ, ಕಟ್ಟಡ ತೆರಿಗೆ ಹಾಗೂ ಮನರಂಜನಾ ತೆರಿಗೆ ಪವಾತಿಯಿಂದ ವಿನಾಯಿತಿ ನೀಡಬೇಕು. ಗ್ರಾಮ ಪಂಚಾಯಿತಿ ಜಾರಿ ಮಾಡಿದ್ದ ನೋಟಿಸ್ ಕಾನೂನುಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕು. ಸೊಸೈಟಿಯಿಂದ ಈಗಾಗಲೇ ಸಂಗ್ರಹಿಸಿರುವ ₹ 29,283 ಕಟ್ಟಡ ಪರವಾನಗಿ ಶುಲ್ಕವನ್ನು ಹಿಂತಿರುಗಿಸಬೇಕು. ಕರ್ನಾಟಕ ಪಂಚಾಯಿತಿ ರಾಜ್ ಕಾಯ್ದೆಯ ಸೆಕ್ಷನ್ 290ರ ಅನ್ವಯ ಕಟ್ಟಡ ಪರವಾನಗಿ ಶುಲ್ಕ ವಿನಾಯಿತಿ ಪಡೆಯಲು ಸೊಸೈಟಿಗೆ ಅವಕಾಶ ಇದೆ. ಭವಿಷ್ಯದಲ್ಲೂ ಸೊಸೈಟಿ ನಿರ್ಮಿಸುವ ಕಟ್ಟಡಗಳಿಗೆ ಪರವಾನಗಿ ಶುಲ್ಕದಿಂದ ವಿನಾಯಿತಿ ನೀಡಬೇಕು’ ಎಂದು ಸೊಸೈಟಿಯು ಕೋರಿತ್ತು.

ಜಿಲ್ಲಾ ಪಂಚಾಯಿತಿಯ ಹಿಂದಿನ ಯಾವ ಸಿಇಒಗಳೂ ಈ ಮೇಲ್ಮನವಿಯನ್ನು ಇತ್ಯರ್ಥಪಡಿಸಿರಲಿಲ್ಲ. ಈಗಿನ ಸಿಇಒ ವಿನಾಯಕ ಕಾರ್ಭಾರಿ ಅವರು 2025ರ ಡಿ. 4ರಂದು ಈ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ಪ್ರಸ್ತುತ ಜಾರಿಯಲ್ಲಿರುವ ಹೊಸ ತೆರಿಗೆ ನಿಯಮಗಳ ಅನ್ವಯ ಹೊಸ ತೆರಿಗೆ ಬೇಡಿಕೆ ಸಲ್ಲಿಸುವಂತೆ ಮೂಡುಶೆಡ್ಡೆ ಗ್ರಾಮ ಪಂಚಾಯಿತಿಯ ಪಿಡಿಒಗೆ ಸೂಚನೆ ನೀಡಿದ್ದರು.

ಮೂಡುಶೆಡ್ಡೆ ಗ್ರಾಮ ಪಂಚಾಯಿತಿಯ ಪಿಡಿಒ ಜಯಪ್ರಕಾಶ್ ಕೆ. ಹೊಸತಾಗಿ ಮೌಲ್ಯಮಾಪನ ನಡೆಸಿ 2005–06ರಿಂದ 2025–26ರವರೆಗೆ ವರ್ಷವಾರು ತೆರಿಗೆ ಬೇಡಿಕೆ ಸೇರಿ ಒಟ್ಟು ₹ 36.82 ಲಕ್ಷ ತೆರಿಗೆ ಬೇಡಿಕೆಯನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ 12 ಕಟ್ಟಡದ ತೆರಿಗೆ ಸಂಬಂಧ ಆಯುಕ್ತರು ಜ.23ರಂದು ಆಕ್ಷೇಪ ಸಲ್ಲಿಸಿದ್ದರು. ಗ್ರೀನ್ಹೌಸ್, ಲೇಕ್ ಗಾರ್ಡನ್, ಎರೆಹುಳ ಗೊಬ್ಬರ ತಯಾರಿ ಕಟ್ಟಡ, ಜೇನು, ಎಕೊ ಪಾರ್ಕ್, ಮಿಲ್ಕ ಪಾರ್ಲರ್ಗಳು ಚಟುವಟಿಕೆ ನಡೆಸದ ತಾತ್ಕಾಲಿಕ ಕಟ್ಟಡಗಳು. ಟ್ರೀಟ್ಮೆಂಟ್ ಕ್ಯಾಂಪಸ್, ಪಶುವೈದ್ಯ ಆಸ್ಪತ್ರೆ, ಮೂರು ಆಯುರ್ವೇದ ಕಾಟೇಜ್ಗಳು, ಆಯುರ್ವೇದ ಸ್ಪಾ ಕಟ್ಟಡ ಮತ್ತು ಅದರ ಸಿಬ್ಬಂದಿ ಕೊಠಡಿಗಳಿಂದ ಪ್ರಾಧಿಕಾರಕ್ಕೆ ಯಾವುದೇ ವರಮಾನ ಬರುತ್ತಿಲ್ಲ. ಈ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಅವರು ಕೋರಿದ್ದರು. ಇವುಗಳಲ್ಲಿ ಆಯುರ್ವೇದ ಕಾಟೇಜ್ ಮತ್ತು ಆಯುರ್ವೇದ ಸ್ಪಾ ಕಟ್ಟಡಗಳನ್ನು ಹೊರತಾಗಿ ಉಳಿದ ಎಂಟು ಕಟ್ಟಡಗಳಿಗೆ ತೆರಿಗೆ ವಿನಾಯಿತಿ ನೀಡಲು ಸಿಇಒ ನ್ಯಾಯಾಲಯ ಒಪ್ಪಿತ್ತು. ವಿನಾಯಿತಿ ಪಡೆದ 8 ಕಟ್ಟಡಗಳು ಭವಿಷ್ಯದಲ್ಲಿ ಬಳಕೆಯಾದರೆ ಅವುಗಳಿಗೂ ತೆರಿಗೆ ವಿಧಿಸುವ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ ಎಂದು ನ್ಯಾಯಾಲಯ ತಿಳಿಸಿತು.

2025ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಶುಲ್ಕಗಳು) ನಿಯಮಗಳ ಅನ್ವಯ ಹೊಸ ತೆರಿಗೆ ನಿರ್ಧರಣೆ ಪಟ್ಟಿಯನ್ನು ಸಲ್ಲಿಸಲು ಸಿಇಒ ನ್ಯಾಯಾಲಯವು ಗ್ರಾಮ ಪಂಚಾಯಿತಿಗೆ ಸೂಚಿಸಿತು. ಪಿಡಿಒ ಸಲ್ಲಿಸಿದ ಪರಿಷ್ಕೃತ ತೆರಿಗೆ ನಿರ್ಧರಣಾ ಪಟ್ಟಿಯ ಪ್ರಕಾರ ಹಳೆ ಬಾಕಿ ಸೇರಿ ಒಟ್ಟು ₹ 33,35,920 ಅನ್ನು ಮೂಡುಶೆಡ್ಡೆ ಗ್ರಾಮ ಪಂಚಾಯಿತಿಗೆ ಏಳು ದಿನಗಳ ಒಳಗೆ ಪಾವತಿಸುವಂತೆ ಸಿಇಒ ನ್ಯಾಯಾಲಯ ಮಾರ್ಚ್. 6ರಂದು ಆದೇಶ ಮಾಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-29-279514228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.