ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದನ್ನು ಪ್ರಶ್ನಿಸಿದ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ಕೈ ಮುರಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಪ್ರಸಾದ್, ಉದಯ, ಪ್ರಶಾಂತ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳು. ಹಲ್ಲೆಯಿಂದಾಗಿ ಪೊಲೀಸ್ ಕಾನ್ಸ್ಟೆಬಲ್ ಅಪ್ಪಣ್ಣ ಶೆಡ್ಬಾಲ್ ಅವರ ಕೈ ಮಣಿಕಟ್ಟಿನ ಮೂಳೆ ಮುರಿದಿದೆ’ ಎಂದು ಪೊಲೀಸರು ಆರೋಪಿಸಿದ್ದಾರೆ.

‘ದೇರೇಬೈಲ್ ಗ್ರಾಮದ ಕೊಂಚಾಡಿ ಜಂಕ್ಷನ್ನ ಕುಡ್ಲ ಚಾವಡಿ ಬಾರ್ ಮತ್ತು ರೆಸ್ಟೋರಂಟ್ನಲ್ಲಿ ಮೂವರು ಗಲಾಟೆ ನಡೆಸಿದ ಬಗ್ಗೆ ಭಾನುವಾರ ರಾತ್ರಿ ದೂರು ಬಂದಿದ್ದರಿಂದ ಹೊಯ್ಸಳ ವಾಹನದಲ್ಲಿ ಪೊಲೀಸ್ ಸಿಬ್ಬಂದಿ ತೆರಳಿದ್ದರು. ಗಲಟೆ ನಡೆಸಿದ್ದ ಮೂವರು ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ವಿಚಾರಿಸಿದಾಗ, ಅವರು ಉಡಾಫೆ ಉತ್ತರ ನೀಡಿದ್ದರು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದ್ದಕ್ಕೆ ಆಕ್ಷೇಪಿಸಿದ್ದಕ್ಕೆ ಪೊಲೀಸರ ಬಗ್ಗೆಯೇ ಅವಾಚ್ಯವಾಗಿ ಬೈದಿದ್ದರು. ಅವರು ಸಿಗರೇಟ್ ಸೇದುವ ವಿಡಿಯೊ ಮಾಡಿದಾಗ, ಆ ಮೂವರಲ್ಲಿ ಒಬ್ಬಾತ ಕಾನ್ಸ್ಟೆಬಲ್ ಅಪ್ಪಣ್ಣ ಶೆಡ್ಬಾಲ ಅವರನ್ನು ದೂಡಿ, ಅವರ ಕೈಯನ್ನು ಹಿಡಿದು ತಿರುಚಿದ್ದ. ಇದರಿಂದ ಅವರ ಕೈ ಮುರಿದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-1631065532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.