ಮಂಗಳೂರು: ಕಾನ್ಸ್ಟೆಬಲ್ಗಳಿಬ್ಬರು ಬಲ್ಲಾಳ್ಬಾಗ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವೇಗವಾಗಿ ಸಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಅವರಿಬ್ಬರೂ ಗಾಯಗೊಂಡಿದ್ದಾರೆ.

ಕಾನ್ಸ್ಟೆಬಲ್ ಕುಮಾರ್ ಹಾಗೂ ಹೆಡ್ ಕಾನ್ಸ್ಟೆಬಲ್ ವಿಠಲದಾಸ್ ಗಾಯಗೊಂಡವರು. ಬಲ್ಲಾಳ್ಬಾಗ್ನ ಇನ್ವೆಂಜರ್ ಟೆಕ್ನೊ ಕಟ್ಟಡದ ಬಳಿ ನಡೆದ ಅಪಘಾತವೊಂದರ ವಿವರ ಸಂಗ್ರಹಿಸಲು ಮಂಗಳವಾರ ರಾತ್ರಿ ಅವರಿಬ್ಬರು ಜೊತೆಯಲ್ಲಿ ತೆರಳಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಅವರಿಬ್ಬರಿಗೆ ಧೀರಜ್ ರೈ ಚಲಾಯಿಸುತ್ತಿದ್ದ ಕಾರು ವೇಗವಾಗಿ ಸಾಗಿಬಂದು ಡಿಕ್ಕಿ ಹೊಡೆದಿತ್ತು. ಕುಮಾರ್ ಅವರ ಎಡಕಾಲಿನ ಮೇಲೆ ಕಾರಿನ ಚಕ್ರ ಹರಿದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿಠಲದಾಸ್ ರಸ್ತೆ ಮೇಲೆ ಬಿದ್ದಿದ್ದು, ಅವರ ಬೆನ್ನು ಮೂಳೆಗೆ ತೀವ್ರ ಗಾಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-1262235524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.