ಮಂಗಳೂರು: ‘ನಿಮ್ಮ ಮನೆಯಲ್ಲಿ ಎಷ್ಟು ಜನರು ಇದ್ದೀರಿ? ಮೊಬೈಲ್ ಫೋನ್ ಬಳಕೆ ಮಾಡುವಾಗ ಎಚ್ಚರವಿರಲಿ, ಬ್ಯಾಂಕ್ನವರು ಎಂದು ಹೇಳಿಕೊಂಡು ನಿಮ್ಮ ಖಾತೆಯ ಪಿನ್ ನಂಬರ್ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ, ಷೇರು ಮಾರುಕಟ್ಟೆ ಟ್ರೇಡಿಂಗ್, ಪಾರ್ಟ್ ಟೈಂ ಉದ್ಯೋಗ, ಲೋನ್ ಆಪ್ಯ್ ಎಂದು ಬರುವ ಸಂದೇಶಕ್ಕೆ ಮರುಳಾಗಬೇಡಿ..’ ಹೀಗೆ ಪೊಲೀಸರು ಮನೆ ಬಾಗಿಲಿಗೆ ಬಂದು ಹೇಳುತ್ತಿದ್ದಾರೆ.

ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ‘ಮನೆ–ಮನೆಗೆ ಪೊಲೀಸ್’ ಕಾರ್ಯಕ್ರಮದ ಅಡಿಯಲ್ಲಿ ಪೊಲೀಸರು ಪ್ರತಿ ಮನೆಯ ಕದ ತಟ್ಟುತ್ತಿದ್ದಾರೆ. ಮನೆಯಲ್ಲಿ 10 ನಿಮಿಷ ಕುಳಿತು ಮನೆ ಮಂದಿಗೆಲ್ಲ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿ, ಮೋಸ ಹೋಗದಂತೆ ತಿಳಿವಳಿಕೆ ನೀಡುತ್ತಾರೆ. ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಟ್ರೇಡಿಂಗ್, ನಕಲಿ ಗ್ರಾಹಕ ಸಹಾಯವಾಣಿ ಕರೆಗಳು, ಉಚಿತ ಕೊಡುಗೆಗಳು, ಲಾಟರಿ ಹೆಸರಿನಲ್ಲಿ ಮೋಸ, ಮೊಬೈಲ್ಗೆ ಬರುವ ಎಪಿಕೆ ಫೈಲ್ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿ, ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಇರುವ ಎರಡು ಪುಟಗಳ ಕರಪತ್ರ ನೀಡುತ್ತಾರೆ.

‘ವಾರದಲ್ಲಿ 2–3 ದಿನ ಬಿಡುವಿದ್ದ ಸಮಯ ನೋಡಿಕೊಂಡು ಮನೆಗಳಿಗೆ ಭೇಟಿ ನೀಡುತ್ತೇವೆ. ಎಲ್ಲ ಕಾನ್ಸ್ಟೆಬಲ್ಗಳಿಗೂ ನಿರ್ದಿಷ್ಟ ವ್ಯಾಪ್ತಿಯನ್ನು ಹಂಚಿಕೆ ಮಾಡಿದ್ದೇವೆ. ಅಪಾರ್ಟ್ಮೆಂಟ್ಗಳಿಗೆ ಹೋಗುವಾಗ ಅಲ್ಲಿನ ಮಾಲೀಕರ ಅಸೋಸಿಯೇಷನ್ಗಳನ್ನು ಸಂಪರ್ಕಿಸುತ್ತೇವೆ’ ಎಂದು ಕದ್ರಿ ಠಾಣೆಯ ಕಾನ್ಸ್ಟೆಬಲ್ ಒಬ್ಬರು ಹೇಳಿದರು.

ಮಂಗಳೂರು ಉತ್ತರ ಠಾಣೆ ವ್ಯಾಪ್ತಿಯಲ್ಲಿ 2021 ಮನೆಗಳು (ಶೇ 57), ದಕ್ಷಿಣ ಠಾಣೆ – 6,600 (ಶೇ 88.21), ಪೂರ್ವ ಠಾಣೆ – 8,611 (ಶೇ 84.82), ಉರ್ವ ಠಾಣೆ– 3,815 (ಶೇ 100), ಬರ್ಕೆ ಠಾಣೆ– 5,955 (ಶೇ 90), ಕಂಕನಾಡಿ ಠಾಣೆ– 8,645 (ಶೇ 53.58), ಕೊಣಾಜೆ ಠಾಣೆ– 6,760 (ಶೇ 39.62), ಉಳ್ಳಾಲ ಠಾಣೆ –15,304 (ಶೇ 59.39), ಮಂಗಳೂರು ಗ್ರಾಮೀಣ 4,495 (ಶೇ 43.43), ಪಣಂಬೂರು– 4,334 (ಶೇ 100), ಕಾವೂರು ಠಾಣೆ– 8,293 (ಶೇ 23.69), ಬಜಪೆ ಠಾಣೆ– 18,438 (ಶೇ 57.39), ಸುರತ್ಕಲ್ ಠಾಣೆ– 9,132 (ಶೇ 46.62), ಮೂಲ್ಕಿ ಠಾಣೆ– 11,772 (ಶೇ 48.62) ಹಾಗೂ ಮೂಡುಬಿದಿರೆ ಠಾಣೆ ವ್ಯಾಪ್ತಿಯ 10,199 (ಶೇ 37.40) ಮನೆಗಳು ಸೇರಿದಂತೆ ಈವರೆಗೆ ಒಟ್ಟು 1,24,374 ಮನೆಗಳನ್ನು ತಲುಪಲಾಗಿದೆ ಎಂದು ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-159935570

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.