ಮಂಗಳೂರು: ರಾಜಕೀಯ ಪ್ರೇರಿತ ವೈಚಾರಿಕ ಭ್ರಷ್ಟತನ ಮತ್ತು ಬೌದ್ಧಿಕ ದಾರಿದ್ರ್ಯ ಸಮಾಜಕ್ಕೆ ಅಪಾಯಕಾರಿ ಎಂದು ರಾಜಕೀಯ ಮುಖಂಡ ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಇರ್ಷಾದ್ ಉಪ್ಪಿನಂಗಡಿ ಅವರ 'ಕರಾವಳಿಯ ರಕ್ತ ಕಣ್ಣೀರು' ಕೃತಿಯ ಎರಡನೇ ಮುದ್ರಣವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಗೌರವದಿಂದ ಬದುಕಲು ಸಾಧ್ಯವಿಲ್ಲ ಎಂದು ಒಬ್ಬ ವ್ಯಕ್ತಿಗೆ ಸಂದೇಹ ಬಂದರೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಆದಂತೆ ಎಂದರು.

‘ವ್ಯಾಪಾರೀಕರಣದಿಂದಾಗಿ ಈಗ ಮಾನ ವೀಯ ಸಂಬಂಧಗಳು ಕಾಣೆ ಯಾಗುತ್ತಿವೆ. ಮಾನವೀಯತೆ ಇಲ್ಲದೇ ಇದ್ದರೆ ಶವಕ್ಕೂ ಜೀವಂತ ಇರುವವರಿಗೂ ವ್ಯತ್ಯಾಸವೇ ಇಲ್ಲ’ ಎಂದ ಅವರು ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆಯಾಗಿ ಕೊಲೆಗಳು ಆದಾಗ ಸರ್ಕಾರ ಆಡಳಿತದಲ್ಲಿ ಇರಲಿಲ್ಲವೇನೋ ಎಂದು ಕರಾವಳಿಯ ರಕ್ತ ಕಣ್ಣೀರು ಕೃತಿ ಓದಿದಾಗ ಅನಿಸುತ್ತದೆ. ಕೊಲೆ ಮಾಡಿದವರು ಮತಾಂಧತೆಯ ಬಲೆಯಲ್ಲಿ ಸಿಲುಕಿ ಮೃಗಗಳಂತೆ ವರ್ತಿ ಸಿದ್ದಾರೆ. ಅವರ ಕ್ರೌರ್ಯಕ್ಕೆ ಅಮಾಯಕರು ಬಲಿಯಾಗಿದ್ದಾರೆ ಎಂದರು.

ಮತಾಂಧರಿಂದಲೇ ಪ್ರತಿ ಧರ್ಮಕ್ಕೂ ಧಕ್ಕೆಯಾಗುತ್ತದೆ. ಧರ್ಮಾಂಧರನ್ನು ಪೋಷಿಸುವವರಿಗೆ ರಾಜಕೀಯ ಉದ್ದೇಶವಿದ್ದು ಅದು ಗೆದ್ದರೆ ಸಂವಿಧಾನ ಸೋತ ಹಾಗೆ. ಸಂಪ್ರದಾಯವಾದಿಗಳೂ ಜಾತ್ಯತೀತರಾಗಬಹುದು. ಆದರೆ ಆ ಭಾವನೆ ರಕ್ತದಲ್ಲಿ ಸೇರಿಕೊಂಡಿರಬೇಕು. ಅದಕ್ಕೆ ರಕ್ತ ಶುದ್ಧವಾಗಿರಬೇಕು. ಈಗ ಎಲ್ಲರ ರಕ್ತವೂ ಕೊಳಕಾಗುತ್ತಿದೆ. ಅಂಥ ಕೊಳಕು ತುಂಬಿಕೊಂಡು ಯಾರೂ ರಾಜಕೀಯ ಪಕ್ಷದ ಜೀತದಾಳು ಆಗಬೇಡಿ ಎಂದು ಅವರು ಹೇಳಿದರು.

ಚಿಂತಕ ಪ್ರೊ.ಕೆ ಫಣಿರಾಜ್ ಮಾತ ನಾಡಿ ಕಾರಣ ಏನೆಂದು ತಿಳಿಯದೆ ಹಿಂಸೆ ನಿಲ್ಲಿಸಲು ಸಾಧ್ಯವಿಲ್ಲ. ಹಿಂಸೆಗೆ ಒಳಗಾ ದವರು ಎಂದೂ ಹಿಂಸೆ ಮಾಡುವುದಿಲ್ಲ. ಅದರ ಕಥನ ಕೇಳಿದವರು ಅಂಥ ಕೆಲಸಕ್ಕೆ ಇಳಿಯು ತ್ತಾರೆ. ಮುಸ್ಲಿಮರ ಬಗ್ಗೆ ಅಂಥ ಕಥನಗ ಳನ್ನು ಹೆಣೆದು ಹಂಚಲಾಗುತ್ತದೆ ಎಂದರು.

ದಕ್ಷಿಣ ಕನ್ನಡದಲ್ಲಿ ಈಗ ಕೋಮು ಸಂಘರ್ಷಗಳು ಇಲ್ಲ. ಆದರೆ ಕೋಮು ವಾದ ಇನ್ನೂ ಉಳಿದಿದೆ. ಅದರ ಫಲ ಚುನಾವಣೆಯಲ್ಲಿ ಯಾರಿಗೂ ಸಿಗಲು ಬಿಡಬಾರದು. ಆದ್ದರಿಂದ ಕೋಮು ವಾದ ಸೋಲಿಸಲು ರಾಜಕೀಯ ಇಚ್ಛಾ ಶಕ್ತಿ ಪ್ರದರ್ಶಿಸಬೇಕು ಎಂದು ಹೋರಾಟ ಗಾರ ಮುನೀರ್ ಕಾಟಿಪಳ್ಳ ಹೇಳಿದರು.

ದಲಿತ ಮುಖಂಡ ಎಂ. ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಹಾಗೂ ಲೇಖಕ ಇರ್ಷಾದ್ ಉಪ್ಪಿನಂಗಡಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-29-900241320

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.