ಮಂಗಳೂರು: ಗಂಭೀರ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಸಣ್ಣಪುಟ್ಟ ಪ್ರಕರಣಗಳಲ್ಲಿ ಜೈಲು ಸೇರಿರುವ ಕೈದಿಗಳು ಹಾಗೂ ಅವರ ಕುಟುಂಬದವರಿಗೆ ಉಚಿತ ಕಾನೂನು ನೆರವು ನೀಡುವ ಉದ್ದೇಶದಿಂದ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ‘ಕಾನೂನು ನೆರವು ಸಹಾಯ ಕೇಂದ್ರ’ ಪ್ರಾರಂಭಿಸಲಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಸವರಾಜ ಶುಕ್ರವಾರ ಇದಕ್ಕೆ ಚಾಲನೆ ನೀಡಿದರು.

ನ್ಯಾಯಾಧೀಶ ಬಸವರಾಜ ಮಾತ ನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈಗಾಗಲೇ ಉಚಿತ ಕಾನೂನು ನೆರವು ಒದಗಿಸಲಾಗುತ್ತಿದೆ. ಪ್ರಸ್ತುತ ಜೈಲಿನಲ್ಲಿ ಈ ವ್ಯವಸ್ಥೆ ಪ್ರಾರಂಭಿಸಿರುವುದು ಕೈದಿಗಳು, ಅವರ ಕುಟುಂಬ ದವರಿಗೆ ಅನುಕೂಲವಾಗಲಿದೆ ಎಂದರು.

ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಮಾತನಾಡಿ, ಕೆಲವೊಮ್ಮೆ ಕಾನೂನು ಸೂಕ್ಷ್ಮ ಕಾರಣಗಳಿಂದ ಕುಟುಂಬಸ್ಥರಿಗೆ ಕೈದಿಗಳನ್ನು ಭೇಟಿಯಾಗಲು ತೊಡಕಾಗುತ್ತದೆ. ಇದರಿಂದ ಜಾಮೀನು ಪಡೆದುಕೊಳ್ಳಲೂ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೈದಿಗಳು ಹಾಗೂ ಮನೆಯವರು ಕಾನೂನು ನೆರವು ಸೇವಾ ಕೇಂದ್ರದ ಮೂಲಕ ಉಚಿತವಾಗಿ ಕಾನೂನು ನೆರವು ಪಡೆಯಬಹುದು. ಸೇವಾ ಕೇಂದ್ರದ ಮೂಲಕ ಕೈದಿಗಳ ಮನೆಯವರಿಗೆ ಕೈದಿಗಳ ಜತೆ ವಾರದಲ್ಲಿ ಎರಡು ಬಾರಿ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ಯವರೆಗೆ ಸಂಜೆ 4ರಿಂದ 5.30ವರೆಗೆ ಈ ನೆರವು ಕೇಂದ್ರ ತೆರೆದಿರುತ್ತದೆ. ಮೂವರು ವಕೀಲರನ್ನು ಈ ಕೇಂದ್ರಕ್ಕೆ ನಿಯೋಜಿಸಲಾಗಿದ್ದು, ಅವರು ಆರೋಪಿಗಳ ಕುಟುಂಬಿಕರಿಗೆ ಕಾನೂನು ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಇಂತಹ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಪ್ರಾಧಿಕಾರದಿಂದ 10 ಮಂದಿ ಕಾನೂನು ಅಭಿರಕ್ಷಕರನ್ನು ನೇಮಿಸಲಾಗಿದೆ. ಕೊಲೆ, ಪೊಕ್ಸೊ, ದೊಡ್ಡ ಪ್ರಮಾಣದ ಎನ್ಡಿಪಿಎಸ್, ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಹೊರತುಪಡಿಸಿ ಇತರ ಪ್ರಕರಣಗಳ ಆರೋಪಿಗಳಿಗೆ ಈ ಕೇಂದ್ರದಿಂದ ನೆರವು ಸಿಗುತ್ತದೆ ಎಂದರು.

ಮಂಗಳೂರು ಕಾರಾಗೃಹದ ಅಧೀಕ್ಷಕ ಶರಣಬಸಪ್ಪ, ವಕೀಲರಾದ ರವಿರಾಜ್, ಕೆಎಸ್ಐಎಸ್ಎಫ್ ನಿರೀಕ್ಷಕ ಸುಭಾಷ್, ಕೇಂದ್ರದ ಸಲಹೆಗಾರಡೆನ್ನಿಸ್ ಡಿಸೋಜಾ ಉಪಸ್ಥಿತರಿದ್ದರು. ಪ್ರೇಮಿ ಫರ್ನಾಂಡೀಸ್ ಕಾಯಕ್ರಮ ನಿರೂಪಿಸಿದರು. ಹರ್ಷಿತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-573213311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.