ಮಂಗಳೂರು: ಈ ಪ್ರದೇಶ ಮನೆಗಳ ಎದುರೇ ರೈಲು ಮಾರ್ಗ ಹಾದುಹೋಗಿದೆ. ಇಲ್ಲಿನ ಮನೆಗಳಿಂದ ನೂರಿನ್ನೂರು ಮೀಟರ್ ದೂರದಲ್ಲೇ ರೈಲುನಿಲ್ದಾಣವೂ ಇದೆ. ಆದರೆ, ಅಲ್ಲಿ ಪ್ರಯಾಣಿಕ ರೈಲುಗಳು ನಿಲ್ಲುವುದೇ ಇಲ್ಲ. ಅಲ್ಲಿ ನಿಲ್ಲುವ ಗೂಡ್ಸ್ ರೈಲುಗಳಿಂದ ಇವರಿಗೆ ಯಾವ ಪ್ರಯೋಜನವೂ ಇಲ್ಲ. ಈ ರೈಲು ಮಾರ್ಗವೇ ಈ ಪ್ರದೇಶದ ನಿವಾಸಿಗಳ ರಸ್ತೆ ಸಂಪರ್ಕವನ್ನು ಕಿತ್ತುಕೊಂಡಿದೆ!

ನಗರದ ಹೊರವಲಯದ ಕಂಡೇವು ನಿವಾಸಿಗಳ ಗೋಳು ಇದು. ಇಲ್ಲಿ ಸುಮಾರು 10ರಿಂದ 15 ಮನೆಗಳಿವೆ. ಇಲ್ಲಿನ ಅನೇಕರು ರೈಲು ಮಾರ್ಗ ನಿರ್ಮಾಣಕ್ಕೆ ಜಾಗವನ್ನೂ ಕಳೆದುಕೊಂಡಿದ್ದರು. ಆದರೆ ಆ ರೈಲು ಮಾರ್ಗ ನಿರ್ಮಾಣವಾದ ಬಳಿಕ ಇಲ್ಲಿನವರ ಬದುಕು ಹೈರಾಣಾಗಿದೆ. ಕಣ್ಣೂರು ಕಡೆಯಿಂದ ರೈಲು ಹಳಿವರೆಗೆ ರಸ್ತೆ ಇದೆ. ಬಳಿಕ ಹಳಿಯನ್ನು ದಾಟಿಕೊಂಡೇ ಮನೆ ತಲುಪಬೇಕಿದೆ. ರಸ್ತೆ ಮೂಲಕ ಮನೆ ತಲುಪಲು ಸುತ್ತುಬಳಸುವ ಹಾದಿಯನ್ನು ಅಲವಂಬಿಸಬೇಕಾಗಿದೆ. ಕಂಡೇವು ಪ್ರದೇಶದಲ್ಲಿರುವ ‘ಪಡೀಲ್ ಜಂಕ್ಷನ್’ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಮಾತ್ರ ನಿಲ್ಲುತ್ತಿದೆ.

‘ನಾವು ಹುಟ್ಟಿದಂದಿನಿಂದ ಇಲ್ಲಿ ರೈಲು ಮೇಲ್ಸೇತುವೆ ನಿರ್ಮಿಸುವಂತೆ ಕೋರಿ ಇದ್ದ ಬದ್ದ ಜನಪ್ರತಿನಿಧಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ಹಾಗಾಗಿ ಅದು ಕೈಗೂಡದ ಕನಸು ಎಂದು ನಾವೂ ಕೈ ಬಿಟ್ಟಿದ್ದೇವೆ’ ಎನ್ನುತ್ತಾರೆ ಕಂಡೇವು ನಿವಾಸಿ ಶ್ವೇತಾ. ‘ಇಲ್ಲಿ ಸಮೀಪದಲ್ಲಿ ಎಲ್ಲೂ ಉತ್ತಮ ಶಾಲೆಗಳಿಲ್ಲ. ಇಲ್ಲಿನ ಮಕ್ಕಳು ಒಂದೋ ಕಪಿತಾನಿಯೊ ಶಾಲೆಗೆ ಅಥವಾ ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಗೆ ಹೋಗಬೇಕು. ಎರಡೂ ಶಾಲೆಗಳು 4ರಿಂದ 5 ಕಿ.ಮೀ ದೂರ ಇವೆ. ವಿದ್ಯಾರ್ಥಿಗಳು ಕಣ್ಣೂರಿನವರೆಗೆ ಸುಮಾರು ಒಂದೂವರೆ ಕಿ.ಮೀ ನಡೆದೇ ಹೋಗಿ ನಂತರ ಬಸ್ನಲ್ಲಿ ಸಾಗಬೇಕಾದ ಸ್ಥಿತಿ ಇದೆ. ಕುಲಶೇಖರ ಕಡೆಗೂ ನೇರ ಬಸ್ ಸೌಕರ್ಯ ಇಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಕ್ಷತಾ.

ಅರಳೆಬೆಟ್ಟು ಪರಿಸರದಲ್ಲಿ ರೈಲು ಹಳಿಯ ಸಮೀಪದಲ್ಲಿ ಸ್ಥಳೀಯರು ಜಾಗ ಬಿಟ್ಟುಕೊಟ್ಟ ಕಾರಣ ಕೆಲ ಮನೆವರೆಗೂ ರಸ್ತೆ ನಿರ್ಮಿಸಲಾಗಿದೆ. ಇದಕ್ಕೆ ನಾಲ್ಕೈದು ವರ್ಷಗಳ ಹಿಂದೆ ಡಾಂಬರು ಹಾಕಲಾಗಿತ್ತು. ಆದರೆ ಎರಡೇ ವರ್ಷಗಳಲ್ಲಿ ಆ ಡಾಂಬರು ಕಿತ್ತು ಹೋಗಿದೆ. ಇಲ್ಲಿನ ರಸ್ತೆ ನಿರ್ಮಿಸುವಾಗ ಮಳೆ ನೀರು ಹರಿಯಲು ಚರಂಡಿಯನ್ನು ಸಮರ್ಪಕವಾಗಿ ನಿರ್ಮಿಸಿಲ್ಲ. ಹಾಗಾಗಿ, ಇಳಿಜಾರಿನಿಂದ ಕೂಡಿದ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಕೆಸರು ನೀರು ಕೆಲ ಮನೆಗಳ ಅಂಗಳಕ್ಕೆ ನುಗ್ಗುತ್ತದೆ. ರಾಜಕೀಯ ಪ್ರಭಾವ ಹೊಂದಿರುವವರ ಮನೆಗಳ ಬಳಿ ಚರಂಡಿ ಪಕ್ಕ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ ಎಂದು ಕೆಲ ಸ್ಥಳೀಯರು ಆರೋಪಿಸಿದರು.

ಈ ಪ್ರದೇಶದಿಂದ ಮನೆ ಮನೆಗೆ ಬಂದು ಕಸ ಒಯ್ಯುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-29-286525176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.