ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ವಿರುದ್ಧ ರೆಡ್ ನೋಟಿಸ್ ಅನ್ನು ಇಂಟರ್ ಪೋಲ್ ಜಾರಿಗೊಳಿಸಿದೆ.

‘ಕುಶಾಲನಗರದ ಸುಲೈಮಾನ್ ಸಮೀರ್ ಹಾಗೂ ಶಂಶುದ್ದೀನ್ ರೆಡ್ ನೋಟಿಸ್ ಜಾರಿಯಾದ ಆರೋಪಿಗಳು. ದೇರಳಕಟ್ಟೆಯಲ್ಲಿ ಸ್ನೇಹಿತನ ಜೊತೆಗಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿದ್ದ ಮನೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಸುಲೈಮಾನ್ ಸಮೀರ್ ಆರೋಪಿಯಾಗಿದ್ದ. 2013ರಲ್ಲಿ ಈ ಕೃತ್ಯದಲ್ಲಿ ಏಳು ಮಂದಿ ಭಾಗಿಯಾಗಿದ್ದರು. ಅತ್ಯಾಚಾರ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ ಆರೋಪಿಗಳು ₹ 50 ಲಕ್ಷ ಹಣ ನೀಡದಿದ್ದರೆ, ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿದ್ದರು. ಸರ್ಕಾರಿ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಉರ್ವ ಠಾಣೆಯಲ್ಲಿ 2017ರಲ್ಲಿ ದಾಖಲಾದ ಪ್ರಕರಣದಲ್ಲೂ ಸಮೀರ್ ಆರೋಪಿಯಾಗಿದ್ದ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

‘ಪಾವಂಜೆ ಸೇತುವೆ ಬಳಿ 2008ರಲ್ಲಿ ಪ್ರವೀಣ್ ಎಂಬುವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅಪಹರಿಸಿ ಕಳವಾರು ಬಳಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಶಂಶುದ್ದೀನ್ ಪ್ರಮುಖ ಆರೋಪಿ. ಶಂಶುದ್ದೀನ್ ಹಾಗೂ ಆತನ ಮೂವರು ಸಹಚರರು ಸೇರಿ ಈ ಕೃತ್ಯ ನಡೆಸಿ ಸಾಕ್ಷ್ಯ ನಾಶ ಪಡಿಸಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಸಿಬಿಐ ನೆರವು ಪಡೆದು ಇಂಟರ್ ಪೋಲ್ ಅನ್ನು ಸಂಪರ್ಕಿಸಿ ಶಂಶುದ್ದೀನ್, ಸಮೀರ್ ಹಾಗೂ ಸಫ್ವಾನ್ ಎಂಬ ಇನ್ನೊಬ್ಬ ಆರೋಪಿ ವಿರುದ್ಧ ರೆಡ್ ನೋಟಿಸ್ ಜಾರಿಗೊಳಿಸಲಾಗಿತ್ತು. ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಈಚೆಗೆ ನಡೆದ ರೌಡಿಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣದಲ್ಲಿ ಆರೋಪಿ ಸಫ್ವಾನ್ ಬಂಧನಕ್ಕೊಳಗಾಗಿದ್ದಾನೆ. ಹಾಗಾಗಿ ಸುಲೈಮಾನ್ ಸಮೀರ್ ಮತ್ತು ಶಂಶುದ್ದೀನ್ ವಿರುದ್ಧ ರೆಡ್ ನೋಟಿಸ್ ಈಗಲೂ ಜಾರಿಯಲ್ಲಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-29-184598211

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.