ಮಂಗಳೂರು: ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ವತಿಯಿಂದ ನಡೆದ ಧಾರ್ಮಿಕ ತ್ಯಾಜ್ಯ ವಿಲೇವಾರಿ ‘ವಿಸರ್ಜನೆ’ ಅಭಿಯಾನದಲ್ಲಿ ಸಂಗ್ರಹವಾಗಿದ್ದ ₹1 ಲಕ್ಷ ಮೌಲ್ಯದ ಲೋಹದ ವಸ್ತುಗಳನ್ನು ಕದ್ರಿ ಮಂಜುನಾಥ ದೇವಾಲಯಕ್ಕೆ ಸಮರ್ಪಿಸಲಾಯಿತು.

ಮಾರ್ಚ್ 16ರಂದು ‘ವಿಸರ್ಜನೆ’ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂ ಸೇವಕರು ಧಾರ್ಮಿಕ ತ್ಯಾಜ್ಯಗಳ ಸಂಗ್ರಹಕ್ಕೆ ನೆರವಾಗಿದ್ದರು. ಈ ಸಂಗ್ರಹದೊಂದಿಗೆ ದೊರೆತ ಬೆಳ್ಳಿ, ತಾಮ್ರ, ಹಿತ್ತಾಳೆ ಲೋಹದ ವಸ್ತುಗಳನ್ನು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ ಅವರು ಕದ್ರಿ ಕ್ಷೇತ್ರಕ್ಕೆ ಹಸ್ತಾಂತರಿಸಿದರು.

‘10 ದಿನಗಳ ಕಾಲ ವಿವಿಧ ಕಡೆಗಳಲ್ಲಿ ಧಾರ್ಮಿಕ ತ್ಯಾಜ್ಯ ಸಂಗ್ರಹಿಸಲಾಯಿತು. 6 ಸಾವಿರ ಮಂದಿ ಅಭಿಯಾನದಲ್ಲಿ ಭಾಗವಹಿಸಿದ್ದರು’ ಎಂದು ಸ್ವಾಮೀಜಿ ಹೇಳಿದರು.

ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾತನಾಡಿ, ‘15 ಸಾವಿರ ದೇವರ ಫೋಟೊ ಫ್ರೇಮ್ಗಳು (4,500 ಕೆ.ಜಿ), ಮೂರ್ತಿಗಳು ಮತ್ತು ಸ್ಮರಣಿಕೆಗಳು (2,500 ಕೆ.ಜಿ), ಕಾಗದ ಮತ್ತು ಪುಸ್ತಕಗಳು (1,500 ಕೆ.ಜಿ), ಮರುಬಳಕೆ ಆಗದ ವಸ್ತುಗಳು (1,200 ಕೆ.ಜಿ), ಕುಂಕುಮ ಮತ್ತು ಪ್ರಸಾದ (800 ಕೆ.ಜಿ), ಪ್ಲಾಸ್ಟಿಕ್ (700 ಕೆ.ಜಿ), ಲೋಹ ವಸ್ತುಗಳು (500 ಕೆ.ಜಿ) ಮರದ ವಸ್ತುಗಳು (500 ಕೆ.ಜಿ), ಹಾಗೂ ಬಟ್ಟೆ (300 ಕೆ.ಜಿ) ಸೇರಿ ಒಟ್ಟು 12,500 ಕೆ.ಜಿ ಧಾರ್ಮಿಕ ತ್ಯಾಜ್ಯ ಸಂಗ್ರಹವಾಗಿದ್ದವು. 10 ಸಂಸ್ಥೆಗಳ 150ಕ್ಕೂ ಹೆಚ್ಚು ಸ್ವಯಂ ಸೇವಕರು ಅಭಿಯಾನದಲ್ಲಿ ಭಾಗವಹಿಸಿದರು’ ಎಂದರು.

ಕದ್ರಿ ಮಂಜುನಾಥ ದೇವಾಲಯದ ಟ್ರಸ್ಟಿ ದಿಲ್ರಾಜ್ ಆಳ್ವ, ಕದ್ರಿ ಕ್ಷೇತ್ರದ ಟ್ರಸ್ಟಿಗಳಾದ ರಾಜೇಂದ್ರ ಚಿಲಿಂಬಿ, ಕಿರಣ್ ಕುಮಾರ್, ಉಷಾ ಪ್ರಭಾಕರ್, ಪ್ರೀತಾ ನಂದನ್, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ವಯಂಸೇವಕರಾದ ಕಮಲಾಕ್ಷ ಪೈ, ಅನಿರುದ್ಧ ನಾಯಕ್, ಯೋಗೇಶ್ ಕಾಯರ್ತಡ್ಕ, ಉದಯ್ ಕೆ.ಪಿ, ಅಭಿ ಕಾರ್ಕಳ, ಸೌರಜ್ ಮಂಗಳೂರು, ಸುನಂದಾ ಶಿವರಾಮ್, ರಾಜೀವಿ ಚಂದ್ರಶೇಖರ್, ಸಚಿನ್ ಶೆಟ್ಟಿ, ನವನೀತ್ ಶೆಟ್ಟಿ, ಪ್ರಜ್ವಲ್, ಪ್ರಥಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-29-140586762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.