ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು 2022ರ ಜುಲೈ 1ರ ನಂತರ ಹಾಗೂ 2024ರ ಜುಲೈ 31ಕ್ಕಿಂತ ಮೊದಲು ನಿವೃತ್ತರಾದ ಶಿಕ್ಷಕರ ಪಿಂಚಣಿಯನ್ನು ಮರು ನಿಗದಿ ಮಾಡಿ, ನಿವೃತ್ತ ಶಿಕ್ಷಕರಿಗೆ ಮಾಹಿತಿ ನೀಡಿದೆ.

ವೇತನ ಅಥವಾ ಪಿಂಚಣಿಯ ಯಾವುದೇ ಪರಿಷ್ಕರಣೆ ಸ್ವಲ್ಪವಾದರೂ ಹೆಚ್ಚಳ ಆಗುವಂತಿರಬೇಕು. ಆದರೆ, 2025ರ ಜೂನ್ 30ರಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಪಿಂಚಣಿಯನ್ನು ಮರುನಿಗದಿ ಮಾಡಿದಾಗ ಅದು ಹಿಂದಿನ ಮಟ್ಟದಲ್ಲೇ ಉಳಿದಿದೆ. ಇದು ಸರಿಯಲ್ಲ ಎಂದು ಹಲವು ಪ್ರಾಧ್ಯಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಿವಿಧ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಯುಜಿಸಿ, ಐಸಿಎಆರ್, ಎಐಸಿಟಿಇ ವೇತನ ಪಡೆಯುತ್ತಿರುವ ಶಿಕ್ಷಕರು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಲ್ಪಡುತ್ತಾರೆ. ಆದ್ದರಿಂದ, ನಿವೃತ್ತಿಯ ನಂತರ ಅವರನ್ನು ರಾಜ್ಯ ಸರ್ಕಾರಿ ಪಿಂಚಣಿದಾರರೆಂದು ಪರಿಗಣಿಸಲಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿಯನ್ನು 2022ರ ಜುಲೈ 1ರಿಂದ ಪರಿಷ್ಕರಿಸಿದ್ದು, ಹಣಕಾಸು ಲಾಭವನ್ನು 2024ರ ಆ.1ರಿಂದ ಅನ್ವಯಿಸಲಾಗಿದೆ.

2022ರ ಜುಲೈ 1ರ ನಂತರ ನಿವೃತ್ತರಾದ ಶಿಕ್ಷಕರ ಪಿಂಚಣಿ ಪರಿಷ್ಕರಣೆಯನ್ನು 2025ರ ಜೂನ್ 30ರ ಪ್ರತ್ಯೇಕ ಆದೇಶದ ಮೂಲಕ ಜಾರಿಗೊಳಿಸಲಾಗಿದೆ. ಆದರೂ ಜೂನ್ 30ರ ಆದೇಶದಿಂದ ಉಂಟಾದ ಅಸಮಾನತೆಗಳ ಕಾರಣದಿಂದ ಇತ್ತೀಚಿನವರೆಗೆ ಹಲವು ವಿಶ್ವವಿದ್ಯಾಲಯಗಳಲ್ಲಿ ಪಿಂಚಣಿ ಪರಿಷ್ಕರಣೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಅಲ್ಲದೆ, 2022ರ ಜುಲೈ 1ಕ್ಕಿಂತ ಮೊದಲು ನಿವೃತ್ತರಾದವರಿಗೆ ಪರಿಷ್ಕರಣೆಯ ಮೊದಲು ಸಿಗುತ್ತಿದ್ದ ತುಟ್ಟಿ ಭತ್ಯೆಯನ್ನು ಪರಿಷ್ಕೃತ ಪಿಂಚಣಿಯಲ್ಲಿ ವಿಲೀನಗೊಳಿಸಲಾಗಿದ್ದು, ಹೆಚ್ಚುವರಿ ಏರಿಕೆಯೂ ನೀಡಲಾಗಿದೆ. ಇದರ ಪರಿಣಾಮವಾಗಿ, ಪರಿಷ್ಕರಣೆಯ ನಂತರದ ತುಟ್ಟಿಭತ್ಯೆ ಪ್ರಮಾಣ ಕಡಿಮೆಯಾಗುತ್ತದೆ. ಪರಿಷ್ಕೃತ ಪಿಂಚಣಿ ಹಿಂದಿನ ಮಟ್ಟದಲ್ಲೇ ಉಳಿದಿರುವುದರಿಂದ 2022ರ ಜುಲೈ 1ರಿಂದ 2024ರ ಜುಲೈ 31ರ ನಡುವೆ ನಿವೃತ್ತರಾದ ಶಿಕ್ಷಕರಿಗೆ ದೊರಕುವ ಒಟ್ಟು ಪಿಂಚಣಿ, 2002ರ ಜುಲೈ 1ಕ್ಕಿಂತ ಮೊದಲು ನಿವೃತ್ತರಾದ ಶಿಕ್ಷಕರಿಗಿಂತ ಸುಮಾರು ₹50 ಸಾವಿರದಷ್ಟು ಕಡಿಮೆಯಾಗುತ್ತಿದೆ.

ಈ ಅಸಮಾನತೆ 2025ರ ಜೂನ್ 30ರಂದು ಹೊರಡಿಸಿದ ಸರ್ಕಾರದ ಆದೇಶ ದಿಂದ ಉಂಟಾಗಿದೆ. ಇದನ್ನು ತಕ್ಷಣ ಸರಿಪಡಿಸದಿದ್ದರೆ ಪಿಂಚಣಿ ದಾರರಿಗೆ ಅನ್ಯಾಯವಾಗುತ್ತದೆ. ನಿವೃತ್ತ ರಾದ ಶಿಕ್ಷಕರಿಗೆ ನ್ಯಾಯ ದೊರಕುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-29-1848265327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.