ಮಂಗಳೂರು: ನಗರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇದೇ 12ರಂದು (ಶನಿವಾರ) ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ. ದ್ವಿಚಕ್ರವಾಹನ ಸವಾರರಾದ ಗೋಪಾಲಕೃಷ್ಣ ಡಿ. ಹಾಗೂ ಮಾನ್ ಸಿಂಗ್ ಮೃತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೋಪಾಲಕೃಷ್ಣ ಡಿ ಎಂಬುವರು ನಂತೂರು ಕಡೆಯಿಂದ ಪಂಪ್ವೆಲ್ ಕಡೆಗೆ ತಮ್ಮ ಬೈಕಿನಲ್ಲಿ ಸಾಗುತ್ತಿದ್ದರು. ವೇಗವಾಗಿ ಬೈಕ್ ಚಲಾಯಿಸಿದ್ದ ಅವರು ತಾರೆ ತೊಟ ಬಳಿ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದಿದ್ದರು. ಬಳಿಕ ಆಯತಪ್ಪಿ ಟಿಪ್ಪರ್ ಲಾರಿಯ ಎಡ ಹಿಂಭಾಗದ ಚಕ್ರಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬಿದ್ದಿದ್ದರು. ಟಿಪ್ಪರ್ ಚಾಲಕ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ಸಾಗಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಟೆಂಪೊ ಚಾಲಕರೊಬ್ಬರು ಗಂಭೀರವಾಘಿ ಗಾಯಗೊಂಡಿದ್ದ ಗೋಪಾಲಕೃಷ್ಣ ಅವರನ್ನು ಪಂಪ್ವೆಲ್ನ ಇಂಡಿಯಾನ ಆಸ್ಪತ್ರೆಗೆ ಸೇರಿಸಿದ್ದರು. ಬೈಕ್ ಡಿಕ್ಕಿ ಹೊಡೆದುದರಿಂದ ಆಯತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟರ್ ಸವಾರ ಮೋಹನಚಂದ್ರ ಅವರನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಗೂಡ್ಸ್ ಟೆಂಪೊ ಚಾಲಕ ಗಂಗಾಧರ ಅಂಚನ್ ಅವರು ದೂರು ನೀಡಿದ್ದು ಕದ್ರಿಯ ನಗರ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಕ್ಕೊಟ್ಟು ಕಡೆಯಿಂದ ಬಜಾಲಿನ ಮನೆಗೆ ಮಾನ್ ಸಿಂಗ್ ಅವರು ತಮ್ಮ ಸ್ಕೂಟರ್ನಲ್ಲಿ ಶನಿವಾರ ರಾತ್ರಿ ಸಾಗುತ್ತಿದ್ದರು. ಜಪ್ಪಿನಮೊಗರುವಿನ ರಸ್ತೆ ವಿಭಜಕದ ಬಳಿ ಅವರು ಸ್ಕೂಟರ್ ಅನ್ನು ಬಲಕ್ಕೆ ತಿರುಗಿಸಿದ್ದಾಗ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಸಾಗುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಾನ್ ಸಿಂಗ್ ಅವರನ್ನು ತಕ್ಷಣವೇ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಮಾನ್ ಸಿಂಗ್ ಅವರ ಪುತ್ರ ನವೀನ್ ಕುಮಾರ್ ಸಿಂಗ್ ದೂರು ನೀಡಿದ್ದಾರೆ.

ಪಿಕಪ್ ವಾಹನ ಚಾಲಕ ನಾಗರಾಜ್ ಗಜಾನನ ಅಂಬಿಗ ಎಂಬುವರ ವಿರುದ್ಧ ನಗರದ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-29-1040941083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.