ಮಂಗಳೂರು: ಸಂಗೀತ ಶಾರದಾ ಶೃಂಗೇರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ, ಭರತಾಂಜಲಿ ಕೊಟ್ಟಾರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಇಲ್ಲಿಯ ಕರಂಗಲ್ಪಾಡಿಯ ಸುಬ್ರಮಣ್ಯ ಸಭಾದಲ್ಲಿ ಇದೇ 2ರಂದು ಸಂಜೆ 4.15ರಿಂದ ಹಮ್ಮಿಕೊಳ್ಳಲಾಗಿದೆ.

'ಶಂಕರ ಸ್ತೋತ್ರ ರತ್ನ ಸಮರ್ಪಣಮ್' ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಕಲಾವಿದರಾದ ವಂದನಾ ರಾಣಿ, ಮಧುರಾ ಕಾರಂತ್ ಮತ್ತು ಚೆನ್ನೈನ ವಿದುಷಿ ಮಂಗಳಲಕ್ಷ್ಮಿ ಕಾರ್ಯಕ್ರಮ ನಡೆಸಿಕೊಡಲಿದ್ದು, ವಯೊಲಿನ್ನನಲ್ಲಿ ವಿದುಷಿ ಧನಶ್ರೀ ಶಬರಾಯ ಮೃದಂಗದಲ್ಲಿ ವಿದ್ವಾನ್ ಮನೋಹರ ರಾವ್ ಸಹಕರಿಸಿದ್ದಾರೆ. ಎಲ್ಲ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ ಎಂದು ಸಂಘಟಕ ಎಕೆಬಿಎಂಎಸ್ ರಾಜ್ಯ ಕಾರ್ಯಕಾರಣಿ ಸದಸ್ಯ ಶ್ರೀಧರ ಹೊಳ್ಳ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-29-1870650204

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.