ಮಂಗಳೂರು: ಸುಲ್ತಾನ್ ಬತ್ತೇರಿಯಿಂದ ತಣ್ಣೀರು ಬಾವಿಗೆ ಸಂಪರ್ಕ ಕಲ್ಪಿಸಲು ಫಲ್ಗುಣಿ ನದಿಗೆ ನಿರ್ಮಿಸುತ್ತಿರುವ ಕಮಾನು ಸೇತುವೆಯ ಕಾಮಗಾರಿಗಾಗಿ ನದಿ ಮಧ್ಯೆ ಕಟ್ಟಿರುವ ತಾತ್ಕಾಲಿಕ ಒಡ್ಡಿನಿಂದ ಜಲಚರಗಳು ಸಾಯುತ್ತಿದ್ದು, ಅಂತರ್ಜಲ ಮಾಲಿನ್ಯ ಉಂಟಾಗಿದೆ. ಈ ಕಾಮಗಾರಿ ನಡೆಸುತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್ಇಸಿಎಫ್) ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ.

ಸೂಕ್ಷ್ಮ ಪರಿಸರ ವ್ಯವಸ್ಥೆ ಹೊಂದಿರುವ ಫಲ್ಗುಣಿ ನದಿಗೆ ಅಕ್ರಮವಾಗಿ ಮಣ್ಣು ಸುರಿದಿರುವುದು ಸಿಆರ್ಜೆಡ್ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ನದಿ ತೀರದ ಮರಗಳು, ನೈಸರ್ಗಿಕ ಸಸ್ಯಗಳ ನಾಶಕ್ಕೆ ಇದು ಕಾರಣವಾಗಿದೆ. ಕಾಮಗಾರಿ ನಿಲ್ಲಿಸಿ, ತಾತ್ಕಾಲಿಕವಾಗಿ ಹಾಕಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಲು ಸ್ಮಾರ್ಟ್ ಸಿಟಿಗೆ ಸೂಚನೆ ನೀಡಬೇಕು ಎಂದು ಅರಣ್ಯ ಇಲಾಖೆಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾಧಿಕಾರಿ ತಕ್ಷಣ ಮಧ್ಯ ಪ್ರವೇಶಿಸಿ, ಸ್ಮಾರ್ಟ್ ಸಿಟಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನದಿ ನಡುವಿನ ಮಣ್ಣು ತೆರವುಗೊಳಿಸಲು ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗೂ ಎನ್ಇಸಿಎಫ್ ಪತ್ರ ಬರೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-1278204950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.