ಮಂಗಳೂರು: ನಗರದ ಅಶೋಕನಗರ ಶ್ರೀಕೃಷ್ಣ ಮಂದಿರದಲ್ಲಿ 27ನೇ ಪ್ರತಿಷ್ಠಾ ಮಹೋತ್ಸವ ಈಚೆಗೆ ವಿಜೃಂಭಣೆಯಿಂದ ನಡೆಯಿತು. ಶಿವಪ್ರಸಾದ್ ತಂತ್ರಿ ಹಾಗೂ ಶ್ರೀಕೃಷ್ಣ ಮಂದಿರದ ಪ್ರಧಾನ ಅರ್ಚಕ ಕಗ್ಗಿ ಶ್ರೀನಿವಾಸ ಆಚಾರ್ಯ ಚಿತ್ರಾಪುರ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ವೇದಮೂರ್ತಿ ಸತೀಶ್ ಉಡುಪ, ಸಂಗೀತ ಕಲಾವಿದ ಅನಂತಕೃಷ್ಣ ಉಡುಪ, ಶ್ರೀಕೃಷ್ಣ ಮಂದಿರದ ವ್ಯವಸ್ಥಾಪಕ ಸಂದೇಶ್ ರಾವ್ ಅವರಿಗೆ ಶ್ರೀಕೃಷ್ಣ ಸೇವಾರತ್ನ ಪ್ರಶಸ್ತಿ ನೀಡಲಾಯಿತು. ಚೆಸ್ ಆಟಗಾರ, ರಾವ್ಸ್ ಚೆಸ್ ಕಾರ್ನರ್ ಮಾಲೀಕ ಶರಣ್ ರಾವ್ ಹಾಗೂ ಶಿಕ್ಷಣದಲ್ಲಿ ಸಾಧನೆ ಮಾಡಿದ ವೃಂದಾ ಜಿ.ರಾವ್ ಅವರಿಗೆ ಶ್ರೀಕೃಷ್ಣ ಯುವರತ್ನ ಪ್ರಶಸ್ತಿ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಹೇಶ್ ಕಜೆ ಮಾತನಾಡಿ ಸಂಸ್ಕಾರ ಮತ್ತು ಸಂಸ್ಕೃತಿ ಒಂದಾದರೆ ಉಳಿಯುತ್ತದೆ. ಈಗ ಅದು ಕಡಿಮೆ ಆಗುತ್ತಿರುವುದು ಬೇಸರದ ವಿಷಯ. ಮಾನವೀಯ ಮೌಲ್ಯ ಮರೆತ ಕಾರಣ ವ್ರದ್ಧಾಶ್ರಮಗಳು ನಿರ್ಮಾಣವಾಗುತ್ತಿವೆ. ಧರ್ಮವನ್ನು ತಾಯಿಧರ್ಮ ಎಂದು ಕಂಡರೆ ಒಳಿತಾಗುತ್ತದೆ ಎಂದರು.

ವೈದ್ಯ ಡಾ.ಪ್ರಭಾಕರ ರಾವ್, ಎನ್ಎಂಪಿಎ ನಿವೃತ್ತ ಎಂಜಿನಿಯರ್ ಗಣಪತಿ ಐತಾಳ್ ಮತ್ತು ಹೋಟೆಲ್ ದ್ವಾರಕಾ ಗ್ರೂಪ್ ಮಾಲೀಕ ರಾಘವೇಂದ್ರ ರಾವ್ ಮಾತನಾಡಿದರು. ಶ್ರೀಕೃಷ್ಣ ಸೇವಾ ಟ್ರಸ್ಟ್ ಉಪಾಧ್ಯಕ್ಷ ಸುಮಂತ್ ಕುಮಾರ್, ಜೊತೆ ಕಾರ್ಯದರ್ಶಿ ಪ್ರಕಾಶ್ ರಾವ್, ಕೋಶಾಧಿಕಾರಿ ಪ್ರವೀಣ್ ಕುಮಾರ್, ಸದಸ್ಯರಾದ ಎಸ್.ಜಿ ಹೆಗಡೆ, ಲಲಿತಾ ಆರ್.ರಾವ್, ಗಣೇಶ್ ರಾವ್, ವಾದಿರಾಜ ಆಚಾರ್ ಪಾಲ್ಗೊಂಡಿದ್ದರು. ಶ್ರೀಕೃಷ್ಣ ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ರಮಾನಂದ ರಾವ್ ವಂದಿಸಿದರು. ವೃಂದಾ ಕೊನ್ನಾರ್ ನಿರೂಪಿಸಿದರು. ಭರತಾಂಜಲಿ ಸಂಸ್ಥೆಯ ವಿದುಷಿ ಪ್ರತಿಮಾ ಶ್ರೀಧರ್ ಮತ್ತು ಬಳಗದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-29-509990105

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.