ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡುವುದಕ್ಕಾಗಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಗೆಲುವಿನ ಹೆಜ್ಜೆ ಎಂಬ ಪ್ರಯೋಗ ಯಶಸ್ಸು ಕಂಡಿದ್ದು ‘ಫೇಲ್’ ಪ್ರಮಾಣ ಈ ಬಾರಿ ಗಣನೀಯವಾಗಿ ಇಳಿಕೆ ಕಂಡಿದೆ. ಅನುತ್ತೀರ್ಣ ಆದವರ ಸಂಖ್ಯೆ ಕಳೆದ ಬಾರಿ ನಾಲ್ಕು ಡಿಜಿಟ್ ಇದ್ದರೆ ಈ ಬಾರಿ ಮೂರು ಡಿಜಿಟ್ಗೆ ಇಳಿದಿದೆ.

‘ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣರಾಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ‘ಬಿಲೋ 20 ಪ್ಯಾಕೇಜ್’ ಎಂಬ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಯೋಗಿಸಲಾಯಿತು. ಹೀಗಾಗಿ ಗಮನಾರ್ಹ ಸಾಧನೆ ಆಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಜಿ.ಎನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್ಎಸ್ಎಲ್ಸಿಯಲ್ಲಿ 20 ಆಂತರಿಕ ಅಂಕಗಳನ್ನು ನೀಡಲಾಗು ತ್ತದೆ. ಪರೀಕ್ಷೆಯಲ್ಲಿ 20 ಅಂಕ ಗಳಿಸಲು ಸಾಧ್ಯವಾದರೆ ತೆರ್ಗಡೆ ಹೊಂದುವು ದರಲ್ಲಿ ಅನುಮಾನವಿಲ್ಲ. ಆದ್ದರಿಂದ 20 ಅಂಕ ಗಳಿಸುವಷ್ಟು ಸಾಮರ್ಥ್ಯ ಇರುವವರನ್ನು ಒಂದು ಗುಂಪಾಗಿ ಪರಿಗಣಿಸಿ ಅವರಿಗೆ ವಿಶೇಷ ತರಬೇತಿ ನೀಡಲಾಯಿತು. ಕಳೆದ ವರ್ಷದ ನವೆಂಬರ್ನಲ್ಲಿ ಆರಂಭವಾದ ಈ ಯೋಜನೆಯ ಯಶಸ್ಸಿನಲ್ಲಿ ಶಾಲೆಗಳು ಮತ್ತು ಶಿಕ್ಷಕರು ಮಹತ್ತರ ಪಾತ್ರ ವಹಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಇಲಾಖೆಯ ಯೋಜನೆಗೆ ಬೆನ್ನೆಲುಬು ಆಗಿ ನಿಂತಿದ್ದರು’ ಎಂದು ಅವರು ವಿವರಿಸಿದರು.

‘20 ಅಂಕ ಗಳಿಸಲು ಸಾಧ್ಯವಾಗು ವಂಥ ವಿಷಯಗಳನ್ನು ಸಾಫ್ಟ್ ಕಾಪಿಯೊಂದರಲ್ಲಿ ಹಾಕಿ ಶಿಕ್ಷಕರಿಗೆ ನೀಡ ಲಾಯಿತು. ವಿಷಯ ಶಿಕ್ಷಕರ ವೇದಿಕೆಯ (ಎಸ್ಟಿಎಫ್) ಶಿಕ್ಷಕರಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಿಷಯವನ್ನು ವಹಿಸಿಕೊಡಲಾಯಿತು. ಎಲ್ಲ ವಿಷಯಗಳನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸುಲಭವಾಗುವ ವಿಷಯ ವನ್ನು ಹೆಚ್ಚುವರಿಯಾಗಿ ಬೋಧಿಸಿ ಅಂಕ ಗಳಿಸುವಂತೆ ಮಾಡಲಾಯಿತು. ಜಿಲ್ಲೆಯಲ್ಲಿ ಇಂಥ 1700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು’ ಎಂದು ಶಶಿಧರ್ ಹೇಳಿದರು.

‘ರ್ಯಾಂಕ್ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ’: ‘ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೂ ಪೂರ್ಣ ಅಂಕ ಪಡೆದವರ ಪಟ್ಟಿಯಲ್ಲಿ ಜಿಲ್ಲೆಯ ಒಬ್ಬರೂ ಇಲ್ಲದಿರುವುದು ಅಚ್ಚರಿಯ ವಿಷಯ’ ಎಂದ ಶಶಿಧರ್ ‘ಪೂರ್ಣ ಅಂಕ ಗಳಿಸದೇ ಇದ್ದರೂ ಜಿಲ್ಲೆಯಲ್ಲಿ 600ಕ್ಕಿಂತ ಅಧಿಕ ಅಂಕ ಗಳಿಸಿದವರ ಪಟ್ಟಿ ದೊಡ್ಡದಿದೆ’ ಎಂದರು.

ತುಳು ಭಾಷೆ– ಎಲ್ಲರೂ ತೇರ್ಗಡೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 826 ವಿದ್ಯಾರ್ಥಿಗಳು ತುಳು ಭಾಷಾ ವಿಷಯದಲ್ಲಿ ತೇರ್ಗಡೆ ಯಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಆಯ್ದಕೊಂಡಿದ್ದ ಎಲ್ಲ 826 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರೆಲ್ಲರೂ ತೇರ್ಗಡೆ ಹೊಂದಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ. ಕೊಂಕಣಿ ಭಾಷೆ ವಿಷಯದಲ್ಲಿ ಇಬ್ಬರು ಪರೀಕ್ಷೆ ಬರೆದಿದ್ದು ಇಬ್ಬರೂ ಪಾಸಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-29-1448150461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.