ಮಂಗಳೂರು: ಮಂಗಳೂರು ಥಿಯೋಸಾಫಿಕಲ್ ಸೊಸೈಟಿಯ ವತಿಯಿಂದ ನಗರದ ಬೆಸೆಂಟ್ ಮಂದಿರ ದಲ್ಲಿ ಸೊಸೈಟಿಯ ಸಂಸ್ಥಾಪಕಿ ಎಚ್.ಪಿ.ಬ್ಲಾವಟ್ಸ್ಕಿಅವರ ಸಂಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಎಚ್.ಪಿ.ಬ್ಲಾವಟ್ಸ್ಕಿ ಅವರ ಜೀವನದ ಕುರಿತು ಚಿತ್ರಾ ಪ್ರಭು ಮಾತನಾಡಿದರು.

ಮಹಾಭಾರತದಲ್ಲಿ ವಿಭಿನ್ನ ಪಾತ್ರಗಳ ಕುರಿತು ವಿದ್ವಾಂಸ ಎಂ.ಪ್ರಭಾಕರ ಜೋಶಿ ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಮೀಳಾ ವಿ.ಶೇಟ್, ಮಾನಸ ಎಂ. ವಾಲ್ಕೆ ಮತ್ತು ತ್ರ್ಯಂಬಕ ಎಂ.ವಾಲ್ಕೆ ಭಕ್ತಿಗೀತೆ ಕಾರ್ಯಕ್ರಮ ಪ್ರಸ್ತುತಿಪಡಿಸಿದರು. ಭಗವ ದ್ಗೀತೆಯ 15ನೇ ಅಧ್ಯಾಯ ‘ಪುರುಷೋತ್ತಮ ಯೋಗ’ವನ್ನು ವಾಚಿಸಲಾಯಿತು. ಸಂಸ್ಥೆಯ ಖಜಾಂಜಿ ಕೆ.ನಾರಾಯಣ ಶೆಟ್ಟಿ ಭಾಗವಹಿಸಿದ್ದರು. ಕಾರ್ಯದರ್ಶಿ ಕೃಷ್ಣಾನಂದ ಶೆಣೈ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.