ಮಂಗಳೂರು: ‘ಟಿಪ್ಪು ಸುಲ್ತಾನ್ ಕಾಲದಲ್ಲಿ ಒಬ್ಬ ಮುಸ್ಲಿಂ ದೊರೆಗೆ ಎಲ್ಲ ಸಮಾಜದವರೂ ಸಹಕಾರ ನೀಡಿದ್ದರು. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಡುತ್ತಿದ್ದ. ಆದರೆ, ಒಬ್ಬ ಮುಸ್ಲಿಂ ರಾಜಕೀಯ ನಾಯಕತ್ವ ತೆಗೆದುಕೊಳ್ಳಲು ಇವತ್ತು ಎಷ್ಟು ಕಷ್ಟ ಇದೆ. ಇವತ್ತಿನ ಸಮಾಜ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ. ಹಾಗಾಗಿ ಟಿಪ್ಪು ಕಾಲದ ಕರ್ನಾಟಕ ನಮಗೆ ಬೇಕು ಎಂದು ಮತ್ತೆ ಒತ್ತಾಯಿಸಬೇಕಾಗಿದೆ’ ಎಂದು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.

‘ಅಭಿಮತ’ದ ಆಶ್ರಯದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಬೆಂಗಳೂರಿನ ನವ ಕರ್ನಾಟಕ ಪ್ರಕಾಶನವು ಪ್ರಕಟಿಸಿದ ಪತ್ರಕರ್ತ ನವೀನ್ ಸೂರಿಂಜೆ ಅವರ 'ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಕೃತಿಯ ಎರಡನೇ ಮುದ್ರಣದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮೈಸೂರು ಸಂಸ್ಥಾನವನ್ನೇ ಆಳಿದ ಟಿಪ್ಪು ವಂಶಕ್ಕೆ ಸೇರಿದ ಮುಸ್ಲೀಮರು ಇವತ್ತು ದಾವಣಗೆರೆ ಉಪಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷದ ಟಿಕೆಟ್ಗಾಗಿ ಅಂಗಲಾಚುವ ಸ್ಥಿತಿ ಎದುರಾಗಿರುವುದು ವಿಪರ್ಯಾಸ’ ಎಂದರು.

‘ಚಿತ್ಪಾವನ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ಶೃಂಗೇರಿ ಸ್ವಾಮೀಜಿಯ ಮಠಗಳ ಬ್ರಾಹ್ಮಣರಿಂದ ಹಿಡಿದು ಎಲ್ಲರಿಗೂ ಟಿಪ್ಪು ಜಾಗವನ್ನು ಉಂಬಳಿ ನೀಡಿದ್ದ, ದಾನ ಮಾಡಿದ್ದ. ಆ ಕಾಲದಲ್ಲಿ ಎಲ್ಲೂ ಟಿಪ್ಪು ವಿರುದ್ಧ ಅಪಸ್ವರ ಕೇಳಿಸಿಲ್ಲ. ಉಪಕೃತರಾದವರು ಟಿಪ್ಪುವಿನ ಅವಹೇಳನದ ವಿರುದ್ಧ ಮಾತನಾಡಬೇಕಿತ್ತು. ಯಾವ ವರ್ಗ ತಮ್ಮ ಜೊತೆ ನಿಲ್ಲುತ್ತದೆ ಎಂದು ಆಡಳಿತಗಾರರು ತಿಳಿದುಕೊಳ್ಳಬೇಕು’ ಎಂದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು, ಭಾಗವಹಿಸುವುದಿಲ್ಲ ಎಂದು ಕ್ಷಮಾಪಣೆ ಪತ್ರ ಬರದವರು, ಬ್ರಿಟೀಷರ ಪರ ಹಾಗೂ ಭಾರತೀಯರ ಪರವಾಗಿ ಹೋರಾಡಿದವರು ಇವತ್ತು ಅಪ್ರತಿಮ ದೇಶಭಕ್ತ, ರಣರಂಗದಲ್ಲೇ ಸತ್ತ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ರಾಷ್ಟ್ರಪ್ರೇಮಿಯೋ ರಾಷ್ಟ್ರದ್ರೋಹಿಯೋ ಎಂದು ತೀರ್ಪು ಕೊಡುತ್ತಿದ್ದಾರೆ. ಇಂತಹ ತೀರ್ಪು ಟಿಪ್ಪು ಮತ್ತು ಹೈದರಾಲಿಗೆ ಸೀಮಿತವಾಗಿರುವುದಿಲ್ಲ. ಸಮಾನತೆ ಜಾತ್ಯತೀತ ಚಿಂತನೆಗಾಗಿ ಹೋರಾಡಿದವರು ಮುಸ್ಲಿಂ ಆಗಿದ್ದರೆ ಅವರ ಚಾರಿತ್ರ್ಯಹನನ ಮಾಡಲಾಗುತ್ತದೆ. ಅವರು ನಾರಾಯಣಗುರು, ಬಸವಣ್ಣನಂತಹ ನಾಯಕರಾಗಿದ್ದರೆ, ಅವರನ್ನೇ ಆಪೋಶನ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತವೆ’ ಎಂದರು.

ಸಹಾಯಕ ಪ್ರಾಧ್ಯಾಪಕ ಸಯ್ಯದ್ ಬರ್ಕತ್ ಕೆ.ಎ., ಕವಿ ವಿಲ್ಸನ್ ಕಟೀಲು, ಹೋರಾಟಗಾರ್ತಿ ವಿದ್ಯಾ ದಿನಕರ್ ಮಾತನಾಡಿದರು. ಸಂಶೋಧಕ ಕೃಷ್ಣಪ್ಪ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ನವೀನ್ ಸೂರಿಂಜೆ ಭಾಗವಹಿಸಿದ್ದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-29-367099908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.