ಮಂಗಳೂರು: ಕಡಲ ಕಿನಾರೆಯಲ್ಲಿ ಜನ್ಮದಿನವನ್ನು ಆಚರಿಸಲು ಕಾರಿನಲ್ಲಿ ತೆರಳುತ್ತಿದ್ದ ಯುವಕರನ್ನು ಬೆದರಿಸಿ ಸುಲಿಗೆ ಮಾಡಿದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಸಬಾ ಬೆಂಗ್ರೆಯ ಚಂದು ಹ್ಯಾರಿಸ್ (33) ಬಂಧಿತ ಆರೋಪಿ. ಸುಲಿಗೆ ಮಾಡಿದ ವಸ್ತುಗಳಾದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಮತ್ತು ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ಅನ್ನು ಆತನಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಚಂದು ಹ್ಯಾರಿಸ್ ವಿರುದ್ಧ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ ಪಟ್ಟಿ ತೆರೆಯಲಾಗಿದೆ. ಹಳೆಯ ಪ್ರಕರಣಗಳ ಸಂಬಂಧ ಮೂರು ವಾರೆಂಟ್ಗಳು ಜಾರಿಯಾಗಲು ಬಾಕಿ ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಟ್ಟುಹಬ್ಬ ಆಚರಿಸಲು ಮಡಿಕೇರಿಯ ಅಜಯ್ ಕೆ. ತನ್ನ ಸ್ನೇಹಿತರಾದ ರಮೇಶ್ ಹಾಗೂ ರಫೀಕ್ ಜೊತೆ ಈಚೆಗೆ ಪಣಂಬೂರಿಗೆ ಬಂದಿದ್ದರು. ಅವರು ಕಡಲ ಕಿನಾರೆಯನ್ನು ತಲುಪುವುದಕ್ಕೆ ಸ್ಥಳೀಯರಿಬ್ಬರಲ್ಲಿ ದಾರಿ ಕೇಳಿದ್ದರು. ಕಾರಿಗೆ ಹತ್ತಿದ್ದ ಇಬ್ಬರು ಸ್ವಲ್ಪ ದೂರ ಸಾಗಿದ ಬಳಿಕ ಸ್ಕ್ರೂ ಡ್ರೈವರ್ನಿಂದ ಚುಚ್ಚುವುದಾಗಿ ಬೆದರಿಸಿ ಮೂವರು ಯುವಕರನ್ನು ಸುಲಿಗೆ ಮಾಡಿದ್ದರು. ಯುವಕರಿಂದ ಟೈಟಾನ್ ವಾಚ್, ವಾಚ್, ₹ 2 ಸಾವಿರ ನಗದು, ಸೇರಿ ಸುಮಾರು ₹ 24,500 ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿದ್ದರು. ಕಲ್ಲೆಸೆದು ಕಾರಿನ ಗಾಜನ್ನು ಹಾನಿಗೊಳಿಸಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳಾದ ಕಸಬಾ ಬೆಂಗ್ರೆಯ ಮೊಹಮ್ಮದ್ ಸಿನಾನ್ (24) ಹಾಗೂ ಝಹೀರ್ ನಿಸಾರ್ (22 ) ಅವರನ್ನು ಏ 13ರಂದು ಬಂಧಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-29-966152287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.