ಮಂಗಳೂರು: ‘ ಇಲ್ಲಿನ ಲೈಂಗಿಕ ಅಲ್ಪಸಂಖ್ಯಾತರು ತನ್ನನ್ನು ಅಪಹರಿಸಿ ಬಲವಂತ ದಿಂದ ಲಿಂಗ ಪರಿವರ್ತನೆಗೆ ಸಂಚು ರೂಪಿಸಿದ್ದರು ಎಂದು ಮೈಸೂರಿನ ವ್ಯಕ್ತಿಯೊಬ್ಬ ಆಪಾದಿಸಿದ್ದು, ನಮ್ಮ ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದಾನೆ. ಆತನ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ, ವಾಸ್ತವ ಏನೆಂದು ಬಹಿರಂಗಪಡಿಸಬೇಕು’ ಎಂದು ಇಲ್ಲಿನ ನವಸಹಜ ಸಮುದಾಯ ಸಂಘಟನೆ ಒತ್ತಾಯಿಸಿದೆ.

ಈ ಕುರಿತು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ನಿಖಿಲಾ, ‘ನಮ್ಮ ಸಂಘಟನೆಯ ಸದಸ್ಯೆಯೊಬ್ಬಳು, ನಮ್ಮ ಗಮನಕ್ಕೆ ತಾರದೆಯೇ ಮೈಸೂರಿನ ವ್ಯಕ್ತಿಯು, ಸುಳ್ಳು ದಾಖಲೆ ನೀಡಿ, ಲೈಂಗಿಕ ಅಲ್ಪಸಂಖ್ಯಾತರ ಗುರುತಿನ ಚೀಟಿ ಮಾಡಿಸಿಕೊಳ್ಳಲು ಸಹಕರಿಸಿದ್ದಳು. ಆತನ ಜೊತೆ ರೀಲ್ಸ್ ಮಾಡಿ ಸಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಳು. ಇದರಿಂದಾಗಿಯೇ ಆ ವ್ಯಕ್ತಿ ನಮ್ಮ ಸಮುದಾಯದ ವಿರುದ್ಧ ಅಪಪ್ರಚಾರ ಮಾಡುವಂತಾಗಿದೆ’ ಎಂದರು.

‘ದಕ್ಷಿಣ ಕನ್ನಡ ಜಿಲ್ಲಾಡಳಿತ 49 ಮಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಗುರುತಿನ ಚೀಟಿ ವಿತರಿಸಿದೆ. ಇವರಲ್ಲಿ ಸುಮಾರು 15 ಮಂದಿ ನೈಜ ಲೈಂಗಿಕ ಅಲ್ಪ ಸಂಖ್ಯಾತರಲ್ಲ. ಅರ್ಜಿದಾರರ ಹಿನ್ನೆಲೆಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಗುರುತಿನಚೀಟಿ ನೀಡಬೇಕು. ಇದಕ್ಕೆ ನೆರವಾಗಲು ಸಂಘಟನೆ ಸಿದ್ಧ’ ಎಂದರು.

ಸಂಘಟನೆಯ ಕಾರ್ಯದರ್ಶಿ ಅರುಂಧತಿ, ‘ನಾವೆಲ್ಲ ಇದೇ ಊರಿನಲ್ಲಿ ಹುಟ್ಟಿ ಬೆಳೆದವರು. ಹೊರಗಿನವರು ಇಲ್ಲಿಗೆ ಬಂದು ಲೈಂಗಿಕ ಅಲ್ಪಸಂಖ್ಯಾತರ ಸೋಗಿನಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಅವರು ಅಲ್ಲಿ ಹೆಂಡತಿ ಮಕ್ಕಳ ಜೊತೆ ಸಂಸಾರ ನಡೆಸುತ್ತಿರುತ್ತಾರೆ. ಅವರಿಂದಾಗಿ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರೇಮಾ, ಸದಸ್ಯರಾದ ಖುಷಿ, ವೃಂದಾ ನಾಯಕ್, ದೀಕ್ಷಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-29-1982166366

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.