ಮಂಗಳೂರು: ಬಂಟ್ವಾಳ ತಾಲ್ಲೂಕಿನ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ಸದ್ಯ 6 ಮೀಟರ್ ಎತ್ತರದಲ್ಲಿ 10.42 ಎಂಸಿಎಂ (ಮಿಲಿಯನ್ ಕ್ಯೂಬಿಕ್ ಮೀಟರ್ಸ್) ನೀರಿನ ಸಂಗ್ರಹ ಮಾತ್ರ ಇದ್ದು ಮಂಗಳೂರು ನಗರ ಮತ್ತು ಇತರ ಪ್ರದೇಶಗಳಿಗೆ 39 ದಿನಗಳ ವರೆಗೆ ಮಾತ್ರ ಸರಬರಾಜು ಮಾಡಲು ಸಾಧ್ಯ ಎಂದು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ತುಂಬೆ ಅಣೆಕಟ್ಟೆಯಲ್ಲಿ ಬುಧವಾರ ನೇತ್ರಾವತಿ ನದಿಗೆ ಬಾಗಿನ ಅರ್ಪಣೆ ಮತ್ತು ಗಂಗಾಪೂಜೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿರುವ ಅಧಿಕಾರಿಗಳು ಅಭಾವ ಆಗುವ ಸಾಧ್ಯತೆ ಕಂಡುಬಂದಲ್ಲಿ ಕೈಗಾರಿಕಗೆ ನೀರು ಸರಬರಾಜು ಸ್ಥಗಿತಗೊಳಿಸುವ ಮತ್ತು ನದಿ ಪಾತ್ರದಲ್ಲಿ ಕೃಷಿ–ತೋಟಗಾರಿಕೆಗೆ ಬಳಸುವ ಪಂಪ್ಸೆಟ್ಗಳ ವಿದ್ಯುತ್ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ತುಂಬೆ ಅಣೆಕಟ್ಟೆಯಿಂದ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತುಂಬೆ, ಪುದು, ಅಡ್ಯಾರ್ ಗ್ರಾಮಗಳು, ಮೂಲ್ಕಿ ಮತ್ತು ಉಳ್ಳಾಲ ಪಟ್ಟಣಗಳಿಗೆ ಪ್ರತಿದಿನ ಒಟ್ಟು 0.26 ಎಂಸಿಎಂ ನೀರು ಎತ್ತಲಾಗುತ್ತದೆ. ನೇತ್ರಾವತಿ ನದಿಯಿಂದ ಒಳಹರಿವು ಒಳಹರಿವು ಕಡಿಮೆಯಾದರೆ ಹಿಂಭಾಗದಲ್ಲಿರುವ ಜಕ್ರಿಬೆಟ್ಟು, ಎಎಂಆರ್ ಮತ್ತು ಸರಳಿಕಟ್ಟೆ ಅಣೆಕಟ್ಟೆಗಳಿಂದ ನೀರು ಬಿಡುಗಡೆ ಮಾಡಬೇಕು. ಇದಕ್ಕೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

2017, 2019 ಮತ್ತು 2023ರಲ್ಲಿ ನದಿ ನೀರಿನ ಮಟ್ಟ ಕುಸಿತಗೊಂಡು ಕುಡಿಯುವ ನೀರಿಗೆ ಅಭಾವ ಉಂಟಾಗಿತ್ತು. ಈ ಬಾರಿ ಸದ್ಯದ ಪರಿಸ್ಥಿತಿ ಗಮನಿಸಿದರೆ ಅದೇ ರೀತಿಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಅಡ್ಯಾರ್ನಲ್ಲಿರುವ ಅಣೆಕಟ್ಟೆಯಿಂದ ನೀರನ್ನು ಮೇಲೆತ್ತಿ ತುಂಬೆ ಅಣೆಕಟ್ಟೆಗೆ ಹರಿಸಬೇಕಾಗುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 140 ಕೊಳವೆಬಾವಿಗಳು ಇದ್ದು ಇನ್ನಷ್ಟು ಬಾವಿಗಳನ್ನು ಕೊರೆಯಬೇಕಾಗುತ್ತದೆ ಮತ್ತು ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ ಬಳಸಬೇಕಾಗುತ್ತದೆ. ಹೆಚ್ಚು ಸಮಸ್ಯೆ ಇರುವಲ್ಲಿಗೆ ಟ್ಯಾಂಕರ್ ಮೂಲಕ ನೀರು ತಲುಪಿಸಬೇಕಾಗುತ್ತದೆ. ನಿರೀಕ್ಷೆಗೆ ತಕ್ಕಂತೆ ಮಳೆ ಬಾರದೇ ಇದ್ದರೆ ನೀರಿನ ರೇಷನಿಂಗ್ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಜಲಸಿರಿ: ಅವಧಿ ವಿಸ್ತರಣೆಗೆ ಮನವಿ

ಮಂಗಳೂರು ಮಹಾನಗರಕ್ಕೆ ಸಮರ್ಪಕ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆ ಹಲವು ಕಾರಣಗಳಿಂದ ವಿಳಂಬವಾಗಿದೆ. ಆದ್ದರಿಂದ ನಿಗದಿಯಂತೆ 2025ರ ಡಿಸೆಂಬರ್ನಲ್ಲಿ ಕಲಸ ಮುಗಿಯಲಿಲ್ಲ. ಗುತ್ತಿಗೆದಾರರು ಈ ವರ್ಷದ ಡಿಸೆಂಬರ್ ವರೆಗೆ ಅವಧಿ ವಿಸ್ತರಣೆಗೆ ಕೋರಿಕೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಜಲಸಿರಿ ಯೋಜನೆಯ ಶೇ63ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಕರಾರಿನಂತೆ 2023ರ ಮೇ 24ರಂದು ಕಾಮಗಾರಿ ಮುಕ್ತಾಯಗೊಳ್ಳಬೇಕಾಗಿತ್ತು. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಇಲಾಖೆಗಳ ಅನುಮತಿ, ಎನ್ಎಂಪಿಎಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ ತೊಂದರೆಗಳಿಂದ 2025ರ ವರೆಗೆ ಅವಧಿ ವಿಸ್ತರಿಸಲಾಗಿತ್ತು. 52.57 ಕಿಲೊಮೀಟರ್ಸ್ ಉದ್ದದ ಮುಖ್ಯ ಕೊಳವೆ ಮಾರ್ಗ ಅಳವಡಿಕೆ ಆಗಬೇಕಿದ್ದು 44.64 ಮೀಟರ್ಗಳಷ್ಟು ಕಾಮಗಾರಿ ಆಗಿದೆ. ವಿತರಣಾ ಜಾಲದ ಒಟ್ಟು 1155.36 ಕಿಮೀ ಮಾರ್ಗದ ಪೈಕಿ 868,84 ಕಿಮೀನ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. 14 ಟ್ಯಂಕ್ಗಳ ಕಾಮಗಾರಿ ಮುಕ್ತಾಯಗೊಂಡಿದ್ದು ಒಂದರ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಗಂಗಾಪೂಜೆ ಬಾಗಿನ ಅರ್ಪಣೆ

ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಣೆಕಟ್ಟೆಯ ಬಳಿ ಇರುವ ಗುಡಿಯಲ್ಲಿ ಗಂಗಾ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗಮನ ಹರಿಸಬೇಕು. ಈ ಬಾರಿ ಮಳೆ ತಡವಾಗುವುದಾಗಿ ಹವಾಮಾನ ಇಲಾಖೆಯ ಮಾಹಿತಿ ಇದ್ದು ಹೆಚ್ಚು ದಿನ ಬೇಸಿಗೆ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ಸಮರ್ಪಕವಾಗಿ ನೀರು ಪೂರೈಸಲು ವ್ಯವಸ್ಥೆ ಮಾಡಬೇಕು.

ಮುಂಬರುವ ದಿನಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಮುಂಜಾಗ್ರತೆಯಾಗಿ ಜೂನ್ ತಿಂಗಳ ವರೆಗೆ ನೀರಿನ ಸಂಗ್ರಹ ಇರುವಂತೆ ಗಮನಹರಿಸಬೇಕು ಎಂದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖಂಡ ರಮಾನಾಥ ರೈ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮುಖ್ಯ ಎಂಜಿನಿಯರ್ ನರೇಶ್ ಶೆಣೈ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.