ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಗೊಂದಲದ ಫಲಿತಾಂಶ; 10ರೊಳಗೆ ಪ್ರಕಟ: ಕುಲಸಚಿವ

ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್.ಧರ್ಮ
Last Updated 4 ಫೆಬ್ರುವರಿ 2023, 6:55 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿ, ವಿಶೇಷ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಗೊಂದಲಗಳಿರುವ ಫಲಿತಾಂಶವನ್ನು ಫೆ.10ರ ಒಳಗಾಗಿ ನೀಡಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್.ಧರ್ಮ ತಿಳಿಸಿದ್ದಾರೆ.

2021ರ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ನಡೆದ 1,35,6 ಸೆಮಿಸ್ಟರ್‌ಗಳ ಪದವಿ ಪರೀಕ್ಷೆ ಫಲಿತಾಂಶ ಪ್ರಕಟಿಸಿ, ಅಂಕ ಪಟ್ಟಿ ವಿತರಿಸಲಾಗಿದೆ. 2022 ಏಪ್ರಿಲ್, ಮೇನಲ್ಲಿ ನಡೆದ ಯುಯುಸಿಎಂಎಸ್ ಮತ್ತು 3,5ನೇ ಸೆಮಿಸ್ಟರ್‌ನ ಪರೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಿಸಲಾಗಿದೆ. 3,5ನೇ ಸೆಮಿಸ್ಟರ್ ಅಂಕಪಟ್ಟಿ ವಿತರಿಸಲಾಗುತ್ತಿದೆ. ಯುಯುಸಿಎಂಎಸ್‌ 1ನೇ ಸೆಮಿಸ್ಟರ್‌ ಮರು ಮೌಲ್ಯಮಾಪನಕ್ಕೆ ದಿನಾಂಕ ನಿಗದಿಪಡಿಸಿ, ಆದೇಶ ಹೊರಡಿಸಲಾಗಿದೆ.

2022ರ ಸೆಪ್ಟೆಂಬರ್‌ನಲ್ಲಿ ನಡೆದ ಅಂತಿಮ ಸೆಮಿಸ್ಟರ್ ಮತ್ತು ನಾಲ್ಕನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿ, ಅಂಕಪಟ್ಟಿ ವಿತರಿಸಲಾಗಿದೆ. ಯುಯುಸಿಎಂಎಸ್‌ 2ನೇ ಸೆಮಿಸ್ಟರ್ ಮೌಲ್ಯಮಾಪನ ಮುಕ್ತಾಯವಾಗಿದ್ದು, ಫಲಿತಾಂಶ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯದ ತಾಂತ್ರಿಕ ಸಮಿತಿಯು ಫೆ.2ರಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಎಲ್ಲ ಕಾಲೇಜುಗಳ ಪ್ರಾಚಾರ್ಯರೊಡನೆ ಸಂವಾದ ನಡೆಸಿದೆ. ಫೆ.15ರ ಒಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

3ನೇ ಸೆಮಿಸ್ಟರ್ ಮತ್ತು ಅನುತ್ತೀರ್ಣ ವಿದ್ಯಾರ್ಥಿಗಳ 1ನೇ ಸೆಮಿಸ್ಟರ್ ಪರೀಕ್ಷಾ ಕಾರ್ಯಗಳು ಫೆ.6ರಿಂದ ಪ್ರಾರಂಭವಾಗುತ್ತವೆ. ಈ ನಡುವೆ ಕೆಲವು ಫಲಿತಾಂಶಗಳು ತಡವಾಗಿ ಪ್ರಕಟಗೊಂಡು, ಇವುಗಳ ಬಾಕಿ ಉಳಿದ ಅಂಕಪಟ್ಟಿಗಳನ್ನು ಫೆ.10ರೊಳಗೆ ವಿತರಿಸಲಾಗುವುದು. ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿ ಮೂಲಕ ಕಳುಹಿಸುವ ಪ್ರಸ್ತಾವಕ್ಕೆ ಕಾಲೇಜುಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಹಿಂದಿನ ಪದ್ಧತಿಯನ್ನೇ ಮುಂದುವರಿಸಲಾಗುತ್ತದೆ. ವಿಕೇಂದ್ರೀಕೃತ ಮೌಲ್ಯಮಾಪನದ ಬದಲು ಕೇಂದ್ರೀಕೃತ ಮೌಲ್ಯಮಾಪನ ನಡೆಸುವಂತೆ ಯುಯುಸಿಎಂಎಸ್‌ನಿಂದ ನಿರ್ದೇಶನ ಬಂದಿರುವುದರಿಂದ ಇನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಮೌಲ್ಯಮಾಪನ ನಡೆಯುತ್ತದೆ ಎಂದು ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT