ಮಂಗಳೂರು: ಉಳ್ಳಾಲದ ಕುತ್ತಾರ್ನಲ್ಲಿ ಕೊರಗಜ್ಜ ವೃತ್ತ ನಿರ್ಮಾಣ ವಿರೋಧಿಸಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರಕರಣದಲ್ಲಿ ಕುತ್ತಾರ್ಮದನಿ ನಗರದ ಜುನೈದ್ ಹಾಗೂ ಇತರ 10 ಮಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಖಾದರ್ ಅವರನ್ನು ತಡೆದು ತರಾಟೆಗೆ ತೆಗೆದುಕೊಳ್ಳಲು ಬಂದ ವ್ಯಕ್ತಿಗಳ ಗುಂಪೊಂದು, ತನ್ನನ್ನು ತಳ್ಳಿ ಗಲಾಟೆ ನಡೆಸಿತು’ ಎಂದು ಖಾದರ್ ಅವರ ಭದ್ರತಾ ಸಿಬ್ಬಂದಿ ಮಹಮ್ಮದ್ ಆಸಿನಾ ಇನಾಮದಾರ ಅವರು ದೂರು ನೀಡಿದ್ದರು.

‘ಖಾದರ್ ಅವರು ಖಾಸಗಿ ಕಾರ್ಯಕ್ರಮ ಮುಗಿಸಿ ಗುರುವಾರ ರಾತ್ರಿ 10ರ ಸುಮಾರಿಗೆ ಉಳ್ಳಾಲ ಗ್ರಾಮದ ಮಾಸ್ತಿಕಟ್ಟೆಯ ಅತಿಥಿಗೃಹದತ್ತ ಹೊರಟರು. ಆ ವೇಳೆ ಮದನಿ ನಗರ ವಾಸಿ ಜುನೈದ್ ಮತ್ತು ಇತರ 10 ಮಂದಿ ಏಕಾಏಕಿಯಾಗಿ ಅವರತ್ತ ಧಾವಿಸಿದರು. ನಾನು ಅವರನ್ನು ತಡೆದು, ‘ಈಗಾಗಲೇ ತಡವಾಗಿದೆ. ನಾವು ಹೊರಡುತ್ತಿದ್ದೇವೆ. ಮಾತನಾಡಲು ಅವರು ಅನುಮತಿ ನೀಡಿಲ್ಲ’ ಎಂದು ತಿಳಿಸಿದೆ. ಅಷ್ಟರಲ್ಲಿ ಆ ಗುಂಪಿನಲ್ಲಿದ್ದವರು ನನ್ನನ್ನೇ ಕೈಯಿಂದ ತಳ್ಳಿ, ಏಕಾಏಕಿ ಯು.ಟಿ. ಖಾದರ್ ಅವರತ್ತ ತೆರಳಿ ಜೋರು ಧ್ವನಿಯಲ್ಲಿ ಮಾತನಾಡಿದರು. ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದರು. ಆಕ್ಷೇಪಾರ್ಹ ಪದಗಳನ್ನು ಬರೆದು ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಮಹಮ್ಮದ್ ದೂರಿನಲ್ಲಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಕುತ್ತಾರು ಜಂಕ್ಷನ್ನಲ್ಲಿ ‘ಕೊರಗಜ್ಜ ವೃತ್ತ’ ನಿರ್ಮಾಣಕ್ಕೆ ಸಂಬಂಧಿಸಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರ ಬಗ್ಗೆ ಈಚೆಗೆ ಪ್ರತಿಕ್ರಿಯಿಸಿದ್ದ ಯು.ಟಿ.ಖಾದರ್, ‘ಒಂದಿಬ್ಬರು ಹೊರಗಿನವರು ಬಂದು ಏನಾದರೂ ಹೇಳಿದರೆ ಮಹತ್ವ ಕೊಡಬೇಕಾಗಿಲ್ಲ. ಕುತ್ತಾರು ಪ್ರದೇಶಗಳಲ್ಲಿ ಎಲ್ಲ ಸಮುದಾಯಗಳ ಜನರು ಸೌಹಾರ್ದದಿಂದ ಇದ್ದಾರೆ. ಕೆಲವರು ದಾರಿ ತಪ್ಪಿದ್ದು, ಅವರನ್ನು ಸರಿದಾರಿಗೆ ತರಬೇಕಾಗಿದೆ’ ಎಂದು ಹೇಳಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-29-2146596256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.