ಮಂಗಳೂರು: ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಾಮಂಜೂರಿನ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಮೆರವಣಿಗೆ ನಡೆಯಿತು.

ತಾರಿಗುಡ್ಡೆಯಿಂದ ಆರಂಭಗೊಂಡ ಪಾದಯಾತ್ರೆ ವಾಮಂಜೂರು ಜಂಕ್ಷನ್ ವರೆಗೆ ಸಾಗಿತು. ಅಲ್ಲಿ ಸಭೆಯಲ್ಲಿ ಮಾತನಾಡಿ ಹೋರಾಟಗಾರ ಮುನೀರ್ ಕಾಟಿಪಳ್ಳ, ಕರ್ನಾಟಕದ ಆರೋಗ್ಯ ಕ್ಷೇತ್ರದ ಸ್ಥಿತಿ ಶೋಚನೀಯವಾಗಿದೆ. ಚಿಕಿತ್ಸೆ ಬಡವರು ಮತ್ತು ಮಧ್ಯಮ ವರ್ಗದವರ ಕೈಗೆಟುಕದಷ್ಟು ದುಬಾರಿಯಾಗಿದೆ. ಗೌರವಯುತ ಬದುಕು ಮಾತ್ರವಲ್ಲ, ಗೌರವಯುತ ಸಾವು ಕೂಡ ಇಂದು ದುಬಾರಿಯಾಗಿದೆ ಎಂದರು.

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲಸೌಕರ್ಯದ ಕೊರತೆಯಿಂದ ಸೊರಗಿ ಹೋಗಿವೆ. ಆದರೆ ಶಾಸಕರು, ಸಂಸದರು ಅಥವಾ ಸರ್ಕಾರ ಜನರ ಆರೋಗ್ಯದ ಕುರಿತು ಮಾತನಾಡುತ್ತಿಲ್ಲ. ಕಂಬಳ ಮತ್ತು ಚಿನ್ನದ ಮಳಿಗೆಗಳ ಉದ್ಘಾಟನೆಯಲ್ಲಿ ಇರುವಷ್ಟು ಆಸಕ್ತಿಯು ಜನರ ಆರೋಗ್ಯದ ಕುರಿತು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ಎನ್ನುತ್ತಲೇ ಆರೋಗ್ಯ ಕ್ಷೇತ್ರದ ಖಾಸಗಿಕರಣದ ವೇಗ ಹೆಚ್ಚಿಸುತ್ತಿದ್ದಾರೆ ಎಂದು ಅವರು ದೂರಿದರು.

ಕಾರ್ಮಿಕ ಮುಖಂಡ ಸದಾಶಿವ ದಾಸ್, ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಮುಖಂಡ ಮನೋಜ್ ವಾಮಂಜೂರು, ಮುಖಂಡರಾದ ಅಶೋಕ್ ರೈ, ರಾಜೀವ ಸಾಲಿಯಾನ್, ರೈತ ಮುಖಂಡರಾದ ಬಾಬು ಸಾಲಿಯಾನ್, ಲಿಂಗಪ್ಪ ಸಾಲಿಯಾನ್, ಶೇಖರ ಗಂಪ, ಭೋಜ ದೇವಸ, ಕಾರ್ಮಿಕ ಮುಖಂಡರಾದ ಹೊನ್ನಯ ಅಂಚನ್, ಹೊನ್ನಯ ಅಮೀನ್, ಭವಾನಿ ಜಿ ಅಮೀನ್, ಭಾರತಿ, ವಸಂತಿ ಕುಪ್ಪೆಪದವು, ನೋಡಯ್ಯ ಗೌಡ, ಅಶೋಕ್ ಬಂಗೇರ, ಜಯಶೀಲ ಕರ್ಕೇರ, ಸುಭಾಷ್ ಬಾಲಕಟ್ಟ ಪಾಲ್ಗೊಂಡಿದ್ದರು.

ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಮನವಿ ಸ್ವೀಕರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-29-1499390164

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.