ಮಂಗಳೂರು: ಎನ್ಸಿಸಿ ಕೆಡೆಟ್ಸ್, ಎನ್ಎಸ್ಎಸ್ ಪ್ರತಿನಿಧಿಗಳು ಸೇರಿದಂತೆ 150 ವಿದ್ಯಾರ್ಥಿಗಳ ಸಮೂಹ ಒಂದೇ ಕಂಠದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಿ ದೇಶಭಕ್ತಿಯನ್ನು ಉದ್ದೀಪನಗೊಳಿಸಿದಾಗ ಗಣ್ಯರು ಮತ್ತು ಸೇರಿದ್ದ ಸಾರ್ವಜನಿಕರೂ ದನಿಗೂಡಿಸಿ ಸಂಭ್ರಮಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಸೋಮವಾರ ಆಯೋಜಿಸಿದ್ದ ‘ವಂದೇ ಮಾತರಂ-150' ಕಾರ್ಯಕ್ರಮದ ವೇದಿಕೆಯಲ್ಲಿ ಭಾರತ ಮಾತೆಯ ಪೋಷಾಕು ತೊಟ್ಟು ಮಧ್ಯದಲ್ಲಿ ನಿಂತಿದ್ದ ವಿದ್ಯಾರ್ಥಿನಿಯ ಸುತ್ತ ಶಿಸ್ತುಬದ್ಧವಾಗಿ ಸೇರಿದ ವಿದ್ಯಾರ್ಥಿಗಳು ಲಯಬದ್ಧವಾಗಿ, ಸುಶ್ರಾವ್ಯ ಕಂಠದಲ್ಲಿ ರಾಷ್ಟ್ರಮಾತೆಗೆ ವಂದಿಸಿದರು.

ಇದಕ್ಕೂ ಮೊದಲು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಜನಗಣಮನ ರಾಷ್ಟ್ರಗೀತೆ ಮತ್ತು ವಂದೇಮಾತರಂ ದೇಶಭಕ್ತಿಗೆ ಸಂಬಂಧಿಸಿ ಸಮಾನ ಸ್ಥಾನದಲ್ಲಿವೆ. ಆದರೆ ರಾಷ್ಟ್ರಗೀತೆಯನ್ನು ಹಾಡಲು ಕೆಲವು ನಿಬಂಧನೆಗಳು ಇವೆ ಎಂದು ಹೇಳಿದರು.

‘ಬಂಕಿಂ ಚಂದ್ರ ಚಟರ್ಜಿಯವರು 1875ರ ನವೆಂಬರ್ 7ರಂದು ವಂದೇ ಮಾತರಂ ಗೀತೆಯನ್ನು ಬರೆದಿದ್ದು ಕಳೆದ ವರ್ಷ 150ರ ಸಂಭ್ರಮಾಚರಣೆ ಆಗಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶದ ಜನರನ್ನು ಒಟ್ಟುಗೂಡಿಸಿದ ಹಾಡು ಇದು. ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವದೇಶಿ ಆಂದೋಲನದಲ್ಲಿ ಈ ಹಾಡನ್ನು ಹಾಡುತ್ತ ಸಾಗಿದ್ದಾರೆ. (ಈಗಿನ ಬಾಂಗ್ಲಾದೇಶದ) ಬರಿಸಾಲ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಈ ಹಾಡಿಗೆ ಅಪಾರ ಗೌರವ ಸಿಕ್ಕಿತ್ತು. ಇದರಿಂದ ಬೆದರಿದ ಬ್ರಿಟಿಷರು ಹಾಡಿನ ಮೇಲೆ ನಿಷೇಧ ಹೇರಿದ್ದರು’ ಎಂದು ಕರ್ನಲ್ ಶರತ್ ಭಂಡಾರಿ ಹೇಳಿದರು.

‘1937ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನವರು ಧಾರ್ಮಿಕತೆಗೆ ಸಂಬಂಧಿಸಿದ ಚರಣಗಳನ್ನು ತೆಗೆದು ಎರಡು ಚರಣಗಳನ್ನು ಉಳಿಸಿಕೊಂಡು ಹಾಡಿಗೆ ಮರುಜೀವ ತುಂಬಿದರು. ನಂತರ ಇದು ರಾಷ್ಟ್ರೀಯ ಗೀತೆಯಾಯಿತು. ಬಿಟ್ಟುಹೋಗಿದ್ದ ಚರಣಗಳನ್ನು ಸೇರಿಸಿ ಹಾಡನ್ನು ಸಮಗ್ರವಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಮಾನ್ಯ ಮಾಡಿದೆ. ಹೀಗಾಗಿ ಈಗ ಪೂರ್ತಿ ಗೀತೆಯನ್ನು ಹಾಡಲಾಗುತ್ತದೆ. ಕೆಲವು ಸಣ್ಣಪುಟ್ಟ ವಿಚಾರಗಳನ್ನು ಬಿಟ್ಟರೆ ಉಳಿದಂತೆ ರಾಷ್ಟ್ರಗೀತೆಯ ಜೊತೆಯಲ್ಲೇ ಈಗ ವಂದೇ ಮಾತರಂ ನಿಲ್ಲುತ್ತದೆ’ ಎಂದು ಅವರು ಹೇಳಿದರು.

ಹಾಡಿನ ಮೊದಲ ಎರಡು ಚರಣಗಳಲ್ಲಿ ಸಂಪೂರ್ಣ ದೇಶಭಕ್ತಿ ತುಂಬಿದೆ. ಉಳಿದ ನಾಲ್ಕು ಚರಣಗಳಲ್ಲಿ ಧಾರ್ಮಿಕ ವಿಷಯಗಳು ಇರುವುದರಿಂದ ಜಾತ್ಯತೀತ ರಾಷ್ಟ್ರಕ್ಕೆ ಸರಿಹೊಂದುವುದಿಲ್ಲ ಎಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅದಕ್ಕೆ ಕತ್ತರಿ ಹಾಕಿತ್ತು. ಕಳೆದ ಅಕ್ಟೋಬರ್ ಒಂದನೇ ತಾರೀಕಿನಿಂದ ಎಲ್ಲ ಚರಣಗಳನ್ನು ಹಾಡುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಈಗ ಈ ಹಾಡಿನ ಅವಧಿ 3 ನಿಮಿಷ 10 ಸೆಕೆಂಡ್ ಆಗಿದೆ’ ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕ ಜಯರಾಂ, ಸಂಘದ ಅಧ್ಯಕ್ಷ ಕಾರ್ತಿಕ್ ಆಚಾರ್ಯ, ಪ್ರತಿನಿಧಿಗಳಾದ ನಿಧಿ, ಸುಪ್ರೀತಾ ಹಾಗೂ ಶಿವಾನಿ ಕೆ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-29-1412903548

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.