ಮಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ದರ ಏರಿಕೆಯಾಗಿದ್ದು, ಬೀನ್ಸ್ ಕೆ.ಜಿ.ಯೊಂದಕ್ಕೆ ₹130ರಿಂದ ₹160ರವರೆಗೆ ತಲುಪಿದೆ. ಕ್ಯಾರೆಟ್ ಕೆ.ಜಿ.ಗೆ ₹70ರಿಂದ ₹80 ಹಾಗೂ ಟೊಮೆಟೊ ಕೆ.ಜಿ.ಗೆ ₹45–₹50ಕ್ಕೆ ಮಾರಾಟವಾಗುತ್ತಿದೆ.

ಅಲಸಂಡೆ ಕೆ.ಜಿ.ಗೆ ₹75–₹80, ಹಸಿ ಮೆಣಸು ₹60–₹65, ದಪ್ಪ ಮೆಣಸು ₹70, ಹೀರೆಕಾಯಿ ₹65–₹70, ಹೂಕೋಸು ₹60–₹65, ತೊಂಡೆಕಾಯಿ ₹60–₹70, ಬೆಂಡೆಕಾಯಿ ₹60–₹65, ಮೂಲಂಗಿ ₹50, ಮುಳ್ಳು ಸೌತೆ ₹40, ಬೆಳ್ಳುಳ್ಳಿ ₹170–₹180, ನುಗ್ಗೆಕಾಯಿ ₹80–₹90, ಈರುಳ್ಳಿ ₹35–₹40, ಬೀಟರೂಟ್ ₹45–₹50 ದರದಲ್ಲಿ ಮಾರಾಟವಾಗುತ್ತಿದೆ.

ಬೆಳ್ಳುಳ್ಳಿ ಕೆ.ಜಿ.ಗೆ ₹₹180–₹190 ಇದ್ದರೆ, ಶುಂಠಿ ಕೆ.ಜಿ.ಗೆ ₹140–₹150 ಇದೆ. ಬೇಸಿಗೆಯಲ್ಲಿ ಬೇಡಿಕೆಯಲ್ಲಿರುವ ಲಿಂಬೆಹಣ್ಣು ಕೆ.ಜಿ.ಗೆ ₹150–₹160 ದರವಿದೆ. ತೆಂಗಿನಕಾಯಿ ಕೆ.ಜಿ.ಗೆ ₹80–₹90ರ ದರದಲ್ಲಿ ಮಾರಾಟವಾಗುತ್ತಿದೆ.

‘ಬಿರು ಬಿಸಿಲಿನ ಕಾರಣಕ್ಕೆ ತರಕಾರಿ ಬೆಳೆ ಕಡಿಮೆಯಾಗಿದ್ದು, ಒಂದು ವಾರದಿಂದ ಎಲ್ಲ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದ್ದು, ಬೀನ್ಸ್, ಕ್ಯಾರೆಟ್, ಟೊಮೆಟೊ ಕೆ.ಜಿ.ಯೊಂದಕ್ಕೆ ₹20ರಿಂದ ₹30ರಷ್ಟು ಹೆಚ್ಚಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುರೇಶ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-29-1649703920

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.