ಮಂಗಳೂರು: ಸುರತ್ಕಲ್ ಮತ್ತು ಮಂಗಳೂರು ನಗರದ ಕೆಲವು ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಪೈಪ್ಲೈನ್ನಲ್ಲಿ ಒತ್ತಡ ಸಾಕಾಗದೇ ಇರುವುದರಿಂದ ಮೇ 1ರಿಂದ ನಗರದಲ್ಲಿ ರೇಷನಿಂಗ್ ಆಧಾರದಲ್ಲಿ ನೀರು ಪೂರೈಸಲಾಗುವುದು ಎಂದು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದರು.

ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ನೀರು ಸರಬರಾಜಿಗೆ ಮಾತ್ರ ರೇಷನಿಂಗ್ ವ್ಯವಸ್ಥೆಯನ್ನು ಅನುಸರಿಸಲಾಗುವುದು. ತುಂಬೆ ಅಣೆಕಟ್ಟೆಯಿಂದ ನೀರು ಎತ್ತುವ ಕ್ರಿಯೆ ಈಗಿನಂತೆಯೇ ನಡೆಯಲಿದೆ. ಪ್ರತಿ ದಿನ 160 ಎಂಎಲ್ಡಿ ನೀರು ಪಂಪ್ ಮಾಡಲಾಗುವುದು. ಪರಿಪೂರ್ಣ ಒತ್ತಡವನ್ನು ಬಳಸಿ ಸುರತ್ಕಲ್ ಭಾಗ ಮತ್ತು ಮಂಗಳೂರು ನಗರಕ್ಕೆ ದಿನಬಿಟ್ಟು ದಿನ ನೀರು ಬಿಡಲಾಗುವುದು ಎಂದು ತಿಳಿಸಿದರು.

ತುಂಬೆ ಕಿಂಡಿ ಅಣೆಕಟ್ಟೆಯ ನೀರಿನ ಮಟ್ಟ 4.53 ಮೀಟರ್ಗೆ ಇಳಿದಿದೆ. ಇದಕ್ಕಿಂತ ಮೇಲ್ಭಾಗದಲ್ಲಿ ಇರುವ ಎಎಂಆರ್ ಅಣೆಕಟ್ಟೆಯಲ್ಲಿ 18.53 ಮೀ ನೀರು ಇದೆ. ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವ ಕಾರಣ ನೇತ್ರಾವತಿ ನದಿಗೆ ಸಣ್ಣ ಪ್ರಮಾಣದ ಒಳಹರಿವು ಇದೆ. ತುಂಬೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಎಎಂಆರ್ನಿಂದ ನೀರು ಬಿಡಬೇಕಾಗುತ್ತದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗುವುದು ಸಹಜ. ಸದ್ಯ, ಜೂನ್ ತಿಂಗಳ ವರೆಗೆ ನೀರಿಗೆ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದರು.

ತುಂಬೆಯಿಂದ ಮಂಗಳೂರು ವರೆಗೆ 58 ಕಡೆಗಳಲ್ಲಿ ಅಕ್ರಮವಾಗಿ ನೀರಿನ ಸಂಪರ್ಕ ಪಡೆದುಕೊಂಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸಂಪರ್ಕಗಳನ್ನು ಅಧಿಕೃತಗೊಳಿಸಿ ಶುಲ್ಕ ಪಾವತಿಸುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಸಲಾಗುವುದು. ರಾಮಲ್ಕಟ್ಟೆಯಲ್ಲಿ 20 ಎಂಎಲ್ಡಿ ಪ್ರಮಾಣದ ನೀರು ಸಂಸ್ಕರಣಾ ಘಟಕ ಸಿದ್ಧವಾಗಿದ್ದು ಅಲ್ಲಿಂದ ಮಂಗಳೂರು ವರೆಗಿನ ಹಳ್ಳಿಗಳಿಗೆ ನೀರು ಒದಗಿಸಲು 10 ಎಂಎಲ್ಡಿ ನೀರು ಸಾಕಾಗಬಹುದು ಎಂದರು.

ಅಹವಾಲುಗಳು ಹಲವಾರು ಫುಟ್ಪಾತ್ಗಳ ಅತಿಕ್ರಮಣ, ಒಳಚರಂಡಿಗಳ ದುಸ್ಥಿತಿ, ಅಸಮರ್ಪಕ ಹಂಪ್ಗಳು, ನೀರು ಸರಬರಾಜಿನಲ್ಲಿ ತೊಂದರೆ ಮುಂತಾದ ಸಮಸ್ಯೆಗಳನ್ನು ಆಡಳಿತಾಧಿಕಾರಿ ಮುಂದೆ ನಾಗರಿಕರು ತೆರೆದಿಟ್ಟರು.

ಅತ್ತಾವರದಿಂದ ಕರೆ ಮಾಡಿದ ಪ್ರದೀಪ್ ಕುಮಾರ್ ಮಂಗಳೂರು ರೈಲು ನಿಲ್ದಾಣದಿಂದ ಅತ್ತಾವರ ಕಡೆಗೆ ಸಾಗುವ ರಸ್ತೆಯ ಫುಟ್ಪಾತ್ ವಾಹನ ನಿಲುಗಡೆಗೆ ಸೀಮಿತವಾಗಿದೆ. ಕೇವಲ ಒಂದೂವರೆ ಕಿಲೊಮೀಟರ್ ಅಂತರಕ್ಕೆ ಆಟೊದವರು ಮನಸ್ಸಿಗೆ ಬಂದಂತೆ ಬಾಡಿಗೆ ಪಡೆಯುತ್ತಿದ್ದಾರೆ ಎಂದು ದೂರಿದರು.

ಮಂಗಳಜ್ಯೋತಿಯಿಂದ ವಾಮಂಜೂರು ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಆದರೆ ದಾಟುವುದಕ್ಕೆ ಸಮರ್ಪಕವಾದ ವ್ಯವಸ್ಥೆ ಮಾಡದ ಕಾರಣ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ವಾಮಂಜೂರಿನ ಫೆಲಿಕ್ಸ್ ಹೇಳಿದರು. ಹಂಪ್ಗಳ ಬಣ್ಣ ಮಾಸಿ ಹೋಗಿದೆ ಎಂದು ಹೇಳಿದ ನಾಗರಿಕರಿಗೆ ಉತ್ತರಿಸಿದ ದರ್ಶನ್ 15 ದಿನಗಳ ಒಳಗೆ ಎಲ್ಲ ಹಂಪ್ಗಳಿಗೆ ಬಣ್ಣ ಬಳಿಯಲಾಗುವುದು ಎಂದರು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತು ಮುಖ್ಯ ಎಂಜಿನಿಯರ್ ನರೇಶ್ ಶೆಣೈ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-29-276956135

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.