ಮಂಗಳೂರು: ಆರ್ಥಿಕ ನಿರ್ವಹಣೆಯನ್ನು ಎಚ್ಚರಿಕೆಯಿಂದ ಮಾಡುವ ಸ್ತ್ರೀ ಕುಟುಂಬದ ಆರ್ಥಿಕ ಶಕ್ತಿ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ಲೋಬಲ್ ಗ್ರೀನ್ ಇಕೊ ಫೌಂಡೇಶನ್ ಆಶ್ರಯದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಮಾತನಾಡಿ, ತೊಟ್ಟಿಲು ತೂಗುವ ಕೈ ಜಗತ್ತು ಆಳುತ್ತದೆ ಎನ್ನುವ ಮಾತಿನಂತೆ ಮಹಿಳೆಯರು ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೆ, ಇನ್ನೂ ಸಾಕಷ್ಟು ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರು ಸ್ಥಾನ ಮಾನ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗ ಬೇಕಾಗಿದೆ. ಮಹಿಳೆ ಯರ ರಕ್ಷಣೆಗೆ ಗುಲಾಬಿ ಹೊಯ್ಸಳ ಪೊಲೀಸ್ ತಂಡ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ, ಮಹಿಳಾ ಸಶಕ್ತತೆಗೆ ಪುರುಷ ಮತ್ತು ಮಹಿಳೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ವಿವಿಧ ಕ್ಷೇತ್ರಗಳ ಸಾಧಕಿಯರಾದ ಜ್ಯೋತಿ ಉಳೆಪ್ಪಾಡಿ, ದೇವಿಕಾ ಪುರುಷೋತ್ತಮ್, ಪ್ರಮೀಳಾ ರಾವ್, ಪೂರ್ಣಿಮಾ ರೈ, ಜಯಶ್ರೀ ರಟ್ಟಿಹಳ್ಳಿ, ವಿಭಾ ಎಸ್. ನಾಯಕ್, ರಶ್ಮಿ ಕೆ, ಸುಜಾತಾ, ಶ್ರದ್ಧಾ ಕೇಶವ ರಾಮಕುಂಜ, ಪೊಟ್ಟಮ್ಮ ಮಂಗಳೂರು, ಲಕ್ಷ್ಮಿ ಗಾಣಿಗ, ದೀಕ್ಷಿತಾ ಟಿಎಸ್ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಕುಂತಳಾ, ರೋಟರಿ ಕ್ಲಬ್ನ ಚಿನ್ನಗಿರಿ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಶ್ರೀನಿವಾಸ ನಾಯಕ್, ಚಂದ್ರಿಕಾ ಎಸ್. ನಾಯಕ್, ಸತೀಶ್ ಮೊಬೆನ್, ರಾಜಗೋಪಾಲ ರೈ, ಸಂತೋಷ್ ಶೇಟ್, ರಾಜೇಶ್ ಶೆಟ್ಟಿ, ವಿಕಾಸ್ ಕೋಟ್ಯಾನ್, ಜಾಕ್ಸನ್ ಸಲ್ದಾನ, ಶೆಲ್ಡನ್ ಕ್ರಾಸ್ತಾ, ಡೆರಿಲ್ ಡಿಸೋಜ, ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಘಟಕದ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು. ಪ್ರಮೀಳಾ ಹೆಗ್ಡೆ ಮತ್ತು ಗೀತಾ ಬಿ ರೈ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-528531374

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.