ಮಂಗಳೂರು: ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆ ಕುಂಬ್ಡಾಜೆ ಪಂಚಾಯಿತಿಯ ಉಬ್ರಂಗಳ ಗ್ರಾಮದ ‘ಬಡಗು ಶಬರಿಮಲೆ’ ಎಂದು ಪ್ರಸಿದ್ಧಿ ಪಡೆದಿರುವ ಮಹಾದೇವ ಪಾರ್ವತಿ, ಶಾಸ್ತಾರ ದೇವಸ್ಥಾನದಲ್ಲಿ 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ದೇವರ ಮಹೋತ್ಸವ ಮೇ 11ರಂದು ನಡೆಯಲಿದೆ.

ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ದೇವರ ಭವ್ಯ ಮಹೋತ್ಸವದಲ್ಲಿ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಹಾಗೂ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡುವರು. ಕ್ಷೇತ್ರದ ತಂತ್ರಿ ದೇಲಂಪಾಡಿ ಗಣೇಶ ತಂತ್ರಿ, ಗೌರವ ಸಲಹೆಗಾರ ಕುಂಟಾರು ರವೀಶ ತಂತ್ರಿ, ನಾರಾಯಣ ವರ್ಮ ಪಂದಳಂ ಕೊಟ್ಟಾರಂ ಶಬರಿಮಲೆ ಮೊದಲಾದವರು ಭಾಗವಹಿಸುವರು ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕಿರಣ್ಕುಮಾರ್ ಕುಣಿಕುಳ್ಳಾಯ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಜೆ 5ಕ್ಕೆ ಧಾರ್ಮಿಕ ಸಭೆ, 6.30ಕ್ಕೆ 18 ಮೆಟ್ಟಿಲುಗಳ ದ್ವಾರಪೂಜೆ ಹಾಗೂ ಲೋಕಾರ್ಪಣೆ, ರಾತ್ರಿ 8 ಗಂಟೆಗೆ ದೇವರ ದಿವ್ಯ ಮಹೋತ್ಸವ ಹಾಗೂ ಭೋಜನ ಪ್ರಸಾದ ನಡೆಯಲಿದೆ ಎಂದರು.

ಕ್ಷೇತ್ರದ ಉತ್ಸವ ಸಮಿತಿ ಉಪಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಲೆಕ್ಕಪರಿಶೋಧಕ ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಪ್ರಚಾರ ಸಮಿತಿ ಅಧ್ಯಕ್ಷ ರಾಜೇಶ್ ಮಾಸ್ಟರ್ ಅಗಲ್ಪಾಡಿ, ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದರಾಜ್ ಮೈಲ್ತೊಟ್ಟಿ, ಧ್ಯಾನ್ ಕೆ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-29-302649877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.