ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳಿ: ಮಾಣಿಲ ಶ್ರೀ 

7
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 48ದಿನಗಳ ಶ್ರೀ ಸಾಮೂಹಿಕ ಲಕ್ಷ್ಮೀ ಪೂಜೆ ಧಾರ್ಮಿಕ ಸಭೆ

ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳಿ: ಮಾಣಿಲ ಶ್ರೀ 

Published:
Updated:
Deccan Herald

 ವಿಟ್ಲ: ‘ಎಲ್ಲ ಜೀವರಾಶಿಗಳನ್ನು ಪ್ರೀತಿಸಬೇಕು. ಎಲ್ಲಾ ಜನರಲ್ಲೂ ದೇವರನ್ನು ಕಾಣಬೇಕು. ಸಾತ್ವಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಋಣಾತ್ಮಕತೆ ಕಡಿಮೆ ಮಾಡಿ ಧನಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಶ್ರೀಧಾಮ ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ 48 ದಿನಗಳ ಸಾಮೂಹಿಕ ಲಕ್ಷ್ಮೀ ಪೂಜೆಯ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

 ‘ಪ್ರಕೃತಿಯು ಶಾಂತವಾಗಲು ನಾವೆಲ್ಲರೂ ಹಿಂದೂ ದೇವಾಲಯ, ಮಠ ಮಂದಿರಗಳಲ್ಲಿ ಇಂದಿನಪ್ರಾರ್ಥನೆ ಮಾಡಬೇಕು. ಬಾಲಭೋಜನದ ಉದ್ದೇಶವೇ ಸಹಭೋಜನ, ಸಹಚಿಂತನೆಯಾಗಿದೆ. ತಂದೆ, ತಾಯಿಗೆ ಸಂಪತ್ತು ಎಂದರೆ ಅವರ ಮಕ್ಕಳೇ ಆಗಿರುತ್ತದೆ’ ಎಂದು ಹೇಳಿದರು.

ಕೆಯ್ಯೂರು ನಾರಾಯಣ ಭಟ್ ಮಾತನಾಡಿ ‘ಸಂತೋಷವನ್ನು ವ್ಯಕ್ತಪಡಿಸಬಹುದು. ಆನಂದವನ್ನು ವ್ಯಕ್ತಪಡಿಸಲಾಗದು. ಆದರೆ ಶ್ರೀಧಾಮದಲ್ಲಿ ಸಂತೋಷ ಮತ್ತು ಆನಂದವನ್ನು ಒಟ್ಟಿಗೆ ಕಳೆಯಲಾಗುತ್ತದೆ’ಎಂದರು.

ಮುಖ್ಯ ಅತಿಥಿಗಳಾಗಿ ಡಾ. ಕೃಷ್ಣಮೋಹನ್ ಬಜಕೂಡ್ಲು, ಕ್ಷೇತ್ರದ ಟ್ರಸ್ಟಿ ಮಚ್ಚೇಂದ್ರ ಸಾಲಿಯಾನ್, ಮಹಿಳಾ ಸೇವಾ ಪ್ರತಿಷ್ಠಾನದ ಟ್ರಸ್ಟಿ ಚಂದ್ರಶೇಖರ ತುಂಬೆ, ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ ಇದ್ದರು.

ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀಗುರುಪೂಜೆನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಬಾಲಭೋಜನ ನಡೆಯಿತು. ಬಳಿಕ ಕನಕಧಾರಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಯಾಗ ಪೂರ್ಣಾಹುತಿ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀದುರ್ಗಾ ಪೂಜೆ, ಆಶ್ಲೇಷ ಬಲಿ, ಶ್ರೀ ವಿಠೋಭರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಶ್ರೀಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜೀಪೇಯಿ ಅವರ ನಿಧನಕ್ಕೆ ಸಾಮೂಹಿಕ ಸಂತಾಪ ಸೂಚಿಸಲಾಯಿತು.
ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷೆ ಮೀನಾಕ್ಷಿ ಸಾಯ ವಂದಿಸಿದರು. ಮಂಜು ವಿಟ್ಲ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !