ಭಾನುವಾರ, ಮೇ 29, 2022
21 °C

ಸೌಹಾರ್ದ ಸಾಮೂಹಿಕ ವಿವಾಹ 27ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು– ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ‘ಝಾರಾ ಕನ್ವೆನ್ಶನ್ ಸೆಂಟರ್‌’ ಉದ್ಘಾಟನೆ ಡಿ.26ರ ಸಂಜೆ 6.30ಕ್ಕೆ ನಡೆಯಲಿದೆ. ಇದರ ಅಂಗವಾಗಿ ಝರಾ ಚಾರಿಟಬಲ್ ಫೌಂಡೇಷನ್ ಡಿ.27ರಂದು ಬೆಳಿಗ್ಗೆ 10 ಗಂಟೆಗೆ ‘ಸೌಹಾರ್ದ ಸಾಮೂಹಿಕ ವಿವಾಹ’ವನ್ನು ಆಯೋಜಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೆಂಟರ್ ಅಧ್ಯಕ್ಷ ಬಿ. ಝಕಾರಿಯಾ ಜೋಕಟ್ಟೆ ಅವರು, ‘ಹಲವು ಸಭಾಂಗಣಗಳ ಸಂಕೀರ್ಣವಾಗಿರುವ ಕನ್ವೆನ್ಶನ್ ಸೆಂಟರ್‌ನಲ್ಲಿ ವೈಫೈ ಸೌಲಭ್ಯ, ವರ್ಟಿಕಲ್ ಗಾರ್ಡನ್ ಸೇರಿದಂತೆ ಸಕಲ ವ್ಯವಸ್ಥೆಗಳು ಇವೆ. ಮುಸ್ಲಿಂ ಧಾರ್ಮಿಕ ಮುಖಂಡ ಎ.ಪಿ. ಅಬೂಬಕರ್ ಮುಸ್ಲಿಯಾರ್, ಜಿಲ್ಲಾ ಖಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಜಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್, ಡಿಕೆಎಸ್‌ಸಿ ಅಧ್ಯಕ್ಷ ಕೆ.ಎಸ್. ಆಟಕೋಯ ತಂಗಳ್ ಸಭಾಂಗಣ ಉದ್ಘಾಟಿಸುವರು’ ಎಂದರು.

ಆರ್ಥಿಕ ತೊಂದರೆಯಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಮದುವೆಗಳನ್ನು ಝಕಾರಿಯಾ ಜೋಕಟ್ಟೆ ಮಾಡಿಸಿದ್ದಾರೆ. ಈ ಬಾರಿಯ ಸಾಮೂಹಿಕ ವಿವಾಹದಲ್ಲಿ 15 ಜೋಡಿಗಳು ಮದುವೆಯಾಗಲಿವೆ. ವಧು–ವರರ ವಸ್ತ್ರ, ನಗದು, ಚಿನ್ನದ ಆಭರಣವನ್ನು ಫೌಂಡೇಷನ್ ಉಚಿತವಾಗಿ ನೀಡಲಿದೆ ಎಂದು ನಿರ್ದೇಶಕ ಝಹೀರ್ ಝಕಾರಿಯಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನಿರ್ದೇಶಕರಾದ ನಝೀರ್ ಝಕಾರಿಯಾ, ಝಾಹಿದ್ ಝಕಾರಿಯಾ, ಸಾಮೂಹಿಕ ವಿವಾಹ ಸಂಘಟನಾ ಸಮಿತಿ ಸಂಚಾಲಕ ಉಮರ್ ಯು.ಎಚ್. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು