ಶ್ರೀ ರಾಮಾಶ್ರಮದಲ್ಲಿ  18 ರಂದು ಹರಕೆ ಸಮರ್ಪಣೆ

7

ಶ್ರೀ ರಾಮಾಶ್ರಮದಲ್ಲಿ  18 ರಂದು ಹರಕೆ ಸಮರ್ಪಣೆ

Published:
Updated:

ವಿಟ್ಲ: ಬೆಂಗಳೂರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ  ಇದೇ 18 ರಂದು ಹರಕೆ ಸಮರ್ಪಣೆ ನಡೆಯಲಿದೆ.

ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಇತ್ತೀಚಿಗೆ ಪಕೃತಿ ವಿಕೋಪದಿಂದ ಗೋವುಗಳು ಮತ್ತು ಭಕ್ತ ಜನರಿಗೆ ಸಂಕಷ್ಟ ಒದಗಿದ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತಿ ಸ್ವಾಮೀಜಿ ಮಾರ್ಗದರ್ಶನ ಪಡೆದು ಶ್ರೀಕರಾರ್ಚಿತ ಶ್ರೀಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರಿ ದೇವತಾ ಸನ್ನಿಧಿಯಲ್ಲಿ ಹವ್ಯಕ ಮಹಾಮಂಡಲ, ಶ್ರೀಮಠದ ಕಾಮದುಘಾ ವಿಭಾಗ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ವತಿಯಿಂದ ಸಂಕಷ್ಟ ಪರಿಹಾರಕ್ಕೆ ಹರಕೆ ಪ್ರಾರ್ಥನೆ ಮಾಡಿದಂತೆ ಇದನ್ನು ಆಯೋಜಿಸಲಾಗಿದೆ.

ಹವ್ಯಕ ಮಹಾಮಂಡಲ ವ್ಯಾಪ್ತಿಯ ಸಮಸ್ತ ಮಾತೆಯರು ಭಾಗಿಗಳಾಗಿ ಕುಂಕುಮಾರ್ಚನೆಯನ್ನು ನಡೆಸಿಕೊಡಬಹುದಾಗಿದೆ.

ಹರಕೆ ಸಮರ್ಪಣೆಯ ಅಂಗವಾಗಿ ಶ್ರೀಕರಾರ್ಚಿತ ದೇವರಿಗೆ ಸಮಗ್ರ ಪೂಜಾಸೇವೆ, ಶ್ರೀಮಹಾ ಗಣಪತಿ ಹವನ, ಶ್ರೀರಾಮ ತಾರಕ ಹವನ, ಶ್ರೀಲಲಿತಾ ಹವನ, ಲಕ್ಷ ಕುಂಕುಮಾರ್ಚನೆ ಸೇವೆಗಳನ್ನು ಸಲ್ಲಿಸಲು ಹವ್ಯಕ ಮಹಾಮಂಡಲ, ಕಾಮದುಘಾ ವಿಭಾಗ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ವತಿಯಿಂದ ನಡೆಯಲಿದ್ದು, ಮಹಾಮಂಡಲ ವ್ಯಾಪ್ತಿಯ ಸರ್ವ ಶಿಷ್ಯರ ತೊಡಗಿಸುವಿಕೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !