ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ

Last Updated 7 ಮಾರ್ಚ್ 2023, 9:52 IST
ಅಕ್ಷರ ಗಾತ್ರ

ಉಳ್ಳಾಲ: ವೈದ್ಯಕೀಯ ಕಾಲೇಜೊಂದರಲ್ಲಿ ಯುವಕನಿಗೆ ಚರ್ಮರೋಗವಿಜ್ಞಾನ ಸ್ನಾತಕೋತ್ತರ ಸೀಟು ಕೊಡಿಸುವುದಾಗಿ ನಂಬಿಸಿ ₹ 50 ಲಕ್ಷ ವಂಚಿಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಯುವಕನ ತಂದೆ ಚಪ್ಪಗದ್ದಿ ಎರುಕ್ಕು ನಾಯ್ಡು ಎಂಬುವರು ದೂರು ನೀಡಿದ್ದಾರೆ.

‘ಕೋಲ್ಕತ್ತದ ಸಾಯಿ ಕನ್ಸಲ್ಟಂಟ್‌ನ ಸುಪ್ರಿಯಾ ಅವರು ₹ 1 ಕೋಟಿಗೆ ಚರ್ಮರೋಗವಿಜ್ಞಾನ ಸ್ನಾತಕೋತ್ತರ ಸೀಟು ಕೊಡಿಸುವುದಾಗಿ ತಿಳಿಸಿದ್ದರು. ಅವರ ಸೂಚನೆ ಮೇರೆ 2022ರ ಡಿ 2ರಂದು ದೇರಳಕಟ್ಟೆಗ ಬಂದಿದ್ದೆ. ಇಲ್ಲಿನ ವಸತಿಗೃಹದಲ್ಲಿ ಉಳಿದುಕೊಂಡು ಅವರು ಸೂಚಿಸಿದ್ದ ಏಜೆಂಟ್‌ ಮನೋಜ್‌ ಎಂಬಾತನನ್ನು ಭೇಟಿ ಆಗಿದ್ದೆ. ಮನೋಜ್‌ ಅವರು ಜಯಂತಿ ಎಂಬ ಮಹಿಳೆ ಹಾಗೂ ಇನ್ನೊಬ್ಬ ಸಹಾಯಕನ ಜೊತೆ ಬಂದು ದಾಖಲೆ ಪತ್ರಗಳನ್ನು ಪಡೆದಿದ್ದರು. ಕೆಇಎ ವೆಬ್‌ಸೈಟ್‌ನಲ್ಲಿ ದಾಖಲಾತಿ ಅಪ್‌ಲೋಡ್‌ ಮಾಡಲು ಮುಂಗಡವಾಗಿ ನಮ್ಮಿಂದ ₹ 50 ಸಾವಿರ ಪಡೆದಿದ್ದರು. ಮರುದಿನ ಮತ್ತೆ ₹ 49,50,000 ನಗದು ಹಾಗೂ 12.64 ಲಕ್ಷವನ್ನು ಡಿ.ಡಿ ರೂಪದಲ್ಲಿ ಪಡೆದಿದ್ದರು. ಬಳಿಕ ₹ 50 ಲಕ್ಷವನ್ನು ಎರಡು ವರ್ಷ ಕಂತಿನ ರೂಪದಲ್ಲಿ ನೀಡಲು ಸೂಚಿಸಿದ್ದರು. ವೈದ್ಯಕೀಯ ಕಾಲೇಜಿನ ಡಿನ್‌ನ ಸಹಿ ಇರುವ ಸೀಟು ಹಂಚಿಕೆ ಪ್ರತಿಯನ್ನು ನೀಡಿದ್ದರು. ಬಳಿಕ 2023ರ ಜ.11ರಂದು ವಿಚಾರಿಸಿದಾಗ ‘ನಿಮಗೆ ಹಂಚಿಕೆಯಾದ ಸೀಟು ರದ್ದಾಗಿದೆ. ಹಣವನ್ನು 20 ದಿನಗಳಲ್ಲಿ ಮರಳಿಸುತ್ತೇವೆ’ ಎಂದಿದ್ದರು. ಈ ಬಗ್ಗೆ ಕೆಇಎಯಲ್ಲಿ ವಿಚಾರಿಸಿದಾಗ ಮಗನಿಗೆ ಯವುದೇ ಸೀಟು ಹಮಚಿಕೆ ಆಗಿಲ್ಲ ಎಂದು ಗೊತ್ತಾಯಿತು. ಜ.20ರಂದು ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ವಿಚಾರಿಸಿದಾಗ ಮೋಸ ಹೋಗಿದ್ದು ತಿಳಿಯಿತು’ ಎಂದು ನಾಯ್ಡು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘keauthority-ka@nic.in ಎಂಬ ನಕಲಿ ಇಮೇಲ್‌ ಸೃಷ್ಟಿಸಿ ವಂಚಿಸಲಾಗಿದೆ. ಇದರಿಂದ ಹಣದ ಜೊತೆಗೆ ಮಗನ ಒಂದುವರ್ಷದ ವ್ಯಾಸಂಗದ ಅವಧಿಯೂ ನಷ್ಟವಾಗಿದೆ’ ಎಂದು ಅವರು ದೂರಿದ್ದಾರೆ. ಮೋಸ ಮಾಡಿದ ಸುಪ್ರಿಯಾ, ಮನೋಜ್, ಜಯಂತಿ ಹಾಗೂ ಇನ್ನೂಬ್ಬ ವ್ಯಕ್ತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT